State

ರಾಜ್ಯದಲ್ಲಿ ನಾಳೆಯಿಂದ ಪಿಯುಸಿ ಹಾಗೂ ಡಿಗ್ರಿ ಕಾಲೇಜುಗಳು ಪುನರಾರಂಭ…!

Share

ಶಿಕ್ಷಣ ಇಲಾಖೆ ಶಾಲೆಗಳನ್ನು ನಡೆಸುವಲ್ಲಿ ಯಾವಾಗಲೂ ಸಂತೊಷ ಪಡುತ್ತದೆ. ಹಾಗೆಯೇ ರಾಜ್ಯದಲ್ಲಿ ಶಾಲೆಗಳನ್ನು ಪ್ರಾರಂಭಿಸುವಲ್ಲಿ ಸದಾ ಸಿದ್ಧವಿರುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‍ರವರು ಈಗಾಗಲೇ ಹಿಜಾಬ್-ಕೇಸರಿ ಶಾಲು ವಿಚಾರಕ್ಕೆ ಸಂಬಂಧಿಸಿದಂತೆ 5ದಿಜಗಳ ಕಾಲ ರಜೆ ಮಾಡಿದ್ಧೇ ದುಃಖದ ಸಂಗತಿ. ಶಿಕ್ಷಣ ಇಲಾಖೆ ಶಾಲೆಗಳನ್ನು ನಡೆಸುವಲ್ಲಿ ಯಾವಾಗಲೂ ಸಂತೋಷ ಪಡುತ್ತದೆ. ಇದಕ್ಕೆ ಸದಾ ಸಿದ್ಧವಿದೆ. ಈಗಾಗಲೇ ಕೊವಿಡ್ ನಲ್ಲಿ ಮಕ್ಕಳ ಶಿಕ್ಷಣಕ್ಕೆ ಸಾಕಷ್ಟು ತೊಂದರೆಯಾಗಿದೆ. ಹಾಗಾಗಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆಗಳನ್ನು ಪ್ರಾರಂಭ ಮಾಡುವಲ್ಲಿ ಮುಖ್ಯಮಂತ್ರಿಗಳ ಆದಿಯಾಗಿ ನಾವು ತುಂಬಾ ಉತ್ಸುಕರಾಗಿದ್ದೇವೆ. ಮುಖ್ಯಮಂತಿಗಳೊಂದಿಗೆ ಈ ಬಜೆಟ್ ಸಭೆಗೆ ಮೊದಲೇ ನಡೆದಿದ್ದರೆ ಇಂದೇ ನಾವು ಕಾಲೇಜುಗಳನ್ನು ಪ್ರಾರಂಭಿಸುತ್ತದ್ದೇವು. ಆದರೆ ಸಭೆ ತಡವಗಿದ್ದರಿಂದ ಒಂದು ದಿನ ಕಾಲೇಜು ಪ್ರಾರಂಭವಾಗುವುದು ತಡವಾಗಿದೆ.

ಇನ್ನು ಈ ಕುರಿತಂತೆ ತುಯಾರಿ ಎನ್ನುವ ಇಚಾರವೆ ಇಲ್ಲ. ನಾವು ಮಕ್ಕಳಲ್ಲಿ ವಿನಂತಿ ಮಾಡುವುದೇನೆಂದರೆ ಮುಖ್ಯ ನ್ಯಾಯಮೂರ್ತಿಗಳ ಆದೇಶವನ್ನು ಪಾಲಿಸುವಂತೆ ಮನವಿ ಮಾಡಿದ್ದೇವೆ. ಆದೇ ರೀತಿ ಎಲ್ಲಾ ಮಕ್ಕಳು ಪಾಲಿಸಿದ್ದಾರೆ. ಇನ್ನು ಶಾಲೆಯನ್ನು ಭಹಿಷ್ಕರಿಸಿ ಹೋದ ಮಕ್ಕಳನ್ನು ಕೂಡ ಶಾಲೆಗೆ ತರುವ ಪ್ರಯತ್ನ ಮಾಡುತ್ತೇವೆ ಎಂದರು.
ಇನ್ನು ಈ ಹಿಜಾಬ್ ವಿವಾದ ಸೃಷ್ಟಿಮಾಡಿದವರನ್ನು ಪತ್ತೆಮಾಡಿ ಬಂಧಿಸುವ ಕುರಿತಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿವಾದದ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯ ನಂತರ ಗೊತ್ತಾಗಲಿದೆ. ಇದು ಪ್ರಜಾಪ್ರಭುತ್ವ ದೇಶ. ಆದರೆ ನಮಗೆ ಇರುವ ಪ್ರಶ್ನೆ ಏನೆಂದರೆ ಇವರ್ಯಾಕೆ ಅಂತರಾಷ್ಟ್ರೀಯ ವ್ಯಕ್ತಿಗಳೊಂದಿಗೆ ಸಮಬಂಧ ಹೊಂದಿದ್ದರೆ ಎಂಬುದು ಬಹಳ ಶೋಚನೀಯ ವಿಚಾರವಾಗಿದೆ. ಅಪಘಾನಿಸ್ಥಾನ ತಾಲಿಬಾನ್ ಅಧ್ಯಕ್ಷ ಇವರಿಗೆ ಸಹಕಾರ ನೀಡುತ್ತಾನೆ ಎಂದು ಹೇಳುವುದಾದರೆ ಇವರ ಹಿಂದೆ ಯಾರಿದ್ದರೆ ಎಂಬುದನ್ನು ಕುರಿತು ತನಿಖೆಯಾಗಲೇಬೇಕು ಎಂದರು.

ಇನ್ನು ಕೆಲ ಇದ್ಯಾರ್ಥಿಗಳು ಕೊರ್ಟ್ ಆದೇಶವಿದ್ದರೂ ಕೆಲ ಹೆಣ್ಣು ಮಕ್ಕಳು ಹಿಜಾಬ್‍ನ್ನು ಧರಿಸಿಕೊಂಡೇ ಶಾಲೆಗೆ ಬರುತ್ತಿರುವ ಕುರಿತಂತೆ ಮಾತನಾಡಿದ ಅವರು, ಅದೇನೂ ಪ್ರಶ್ನೆಯೇ ಅಲ್ಲ. ನಮ್ಮ ಇಲಾಖೆಯ ಎಲ್ಲಾ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ಮಕ್ಕಳಿಗೆ ತಿಲಿ ಹೇಳುತ್ತಿದ್ದಾರೆ. ಹಾಗಾಗಿ ಮಕ್ಕಳು ಅದಕ್ಕೆ ಸಹಕಾರ ನೀಡುತ್ತಿದ್ದಾರೆ. ಇನ್ನು ಮಕ್ಕಳು ಶಾಲಾ ಗೇಟಿನ ಹೊರಗೆಯೇ ಹಿಜಾಬ್ ಬುರ್ಖಾ ತೆಗೆಯಬೇಕೆಂದಿಲ್ಲ. ಅವರೂ ಕೂಡ ನಮ್ಮ ಅಕ್ಕ ತಂಗಿಯರೇ. ಹಾಗಾಗಿ ಸ್ಟಾಫ್ ರೂಮ್‍ಗೆ ಹೋಗಿ ಹಿಜಾಬ್ ಹಾಗೂ ಬುರ್ಖಾತೆಗೆಯಲು ಅವಕಾಶವಿದೆ ಎಂದರು.

ಈಗಾಗಲೇ ಹಿಜಾಬ್-ಕೇಸರಿ ಶಾಲು ವಿವಾದ ಕುರಿತಂತೆ ನ್ಯಾಯಾಲಯ ಮಧ್ಯಂತರ ಆದೇಶವನ್ನು ನೀಡಿದೆ. ಆ ಪ್ರಕಾರ ಮುಂದಿನ ಆದೇಶ ಬರುಬ ವರೆಗೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಇನ್ನು ನಾಳೆಯಿಂದ ಕಾಲೇಜುಗಳೂ ಕೂಡ ಪ್ರಾರಂಭವಾಗಲಿದ್ದು ಶಾಂತಿ ಕಾಪಾಡುವಂತೆ ಮನವಿ ಮಾಡಲಾಗಿದೆ.

Tags:

error: Content is protected !!