ಐತಿಹಾಸಿಕ ಸುಕ್ಷೇತ್ರ ಯಡೂರಿನ ಶ್ರೀವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಬಂಡಿಗಣಿಯ ಬಸವಗೋಪಾಲ ನೀಲಮಾಣಿಕ ಮಠದ ಮಹಾದಾಸೋಹವು ಒಂದು ಆಕರ್ಷಣೀಯ ಕೇಂದ್ರ ಬಿಂದು. ಈ ಮಹಾದಾಸೋಹದಲ್ಲಿ ಭಕ್ತರು ಪಂಚಪಕ್ವಾನ ಭೋಜನವನ್ನು ಸವಿದು ಪಾವನರಾದರು.ಈ ಕುರಿತಂತೆ ಒಂದು ವರದಿ ಇಲ್ಲಿದೆ ನೋಡಿ..

ಚಿಕ್ಕೋಡಿ ತಾಲ್ಲೂಕಿನ ಸುಕ್ಷೇತ್ರ ಯಡೂರಿನ ಐತಿಹಾಸಿಕ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಬಂಡಿಗಣಿ ಶ್ರೀ ಬಸವಗೋಪಾಲ ನೀಲಮಾಣಿಕ ಮಠದ ಶ್ರೀ ಚಕ್ರವರ್ತಿ ಅನ್ನದಾನೇಶ್ವರ ಶ್ರೀಗಳ ನೇತೃತ್ವದಲ್ಲಿ ಮಹಾದಾಸೋಹ ನಡೆಯಿತು. ಶ್ರೀಶೈಲ ಜಗದ್ಗುರುಗಳ ಜೊತೆಗೆ ಚಕ್ರವರ್ತಿ ಅನ್ನದಾನೇಶ್ವರ ಶ್ರೀಗಳು ಜೊತೆಗೂಡಿ ಮಹಾದಾಸೋಹಕ್ಕೆ ಚಾಲನೆಯನ್ನು ನೀಡಿದರು. ಈ ದಾಸೋಹದಲ್ಲಿ ಭಕ್ತರಿಗೆ ದಾನೇಶ್ವರ ಶ್ರೀಗಳು ಪಂಚಪಕ್ವಾನವದ ಭೋಜನವನ್ನು ಉಣಬಡಿಸಿದರು.
ಹುಗ್ಗಿ ,ಹೋಳಿಗೆ, ಹಾಲು, ಮಜ್ಜಿಗೆ, ತುಪ್ಪ, ಜಿಲೇಬಿ, ಭಜಿ,ಬೂಂದೆ ಬದನೆಕಾಯಿಪಲ್ಲೆ, ಮಸಾಲೆ ಅನ್ನ, ಬಿಳಿ ಅನ್ನ, ಸಾಂಬಾರು ಸೇರಿದಂತೆ ವಿವಿಧ ಬಗೆಯ ಪದಾರ್ಥಗಳನ್ನು ಒಳಗೊಂಡ ಪಂಚಪಕ್ವಾನದ ಭೋಜನವನ್ನು ಭಕ್ತರಿಗೆ ಉಣಬಡಿಸಿದರು ಹಾಗೂ ಊಟ ಮುಗಿದ ಮೇಲೆ ಭಕ್ತರಿಗೆ ತಾಂಬೂಲದ ವ್ಯವಸ್ಥೆಯನ್ನು ಮಾಡಲಾಗಿತ್ತು. ಹಾಗೂ ಬಂಡಿಗಣಿ ಮಠದಿಂದ ಸುಮಂಗಲಿಯರಿಗೆ ಉಡಿತುಂಬಲಾಯಿತು. ಇದೇ ಸಂದರ್ಭದಲ್ಲಿ ಶ್ರೀಶೈಲ ಜಗದ್ಗುರುಗಳು ಮಾಧ್ಯಮಗಳ ಜೊತೆ ಮಾತನಾಡಿ ವರ್ಷದ 365 ದಿನಗಳಲ್ಲಿ ದೇಶದ ವಿವಿಧ ಪುಣ್ಯಕ್ಷೇತ್ರಗಳಲ್ಲಿ ಪ್ರತಿದಿನ ದಾಸೋಹ ನಡೆಸುತ್ತಿರುವ ಏಕೈಕ ಮಠವೆಂದರೆ ಅದು ಅನ್ನದಾನೇಶ್ವರ ಶ್ರೀಗಳ ಬಂಡಿಗಣಿಯ ಬಸವಗೋಪಾಲ ನೀಲಮಾಣಿಕ ಮಠ,ಅನ್ನದಾನ ಮಹಾದಾನ ಈ ನಿಟ್ಟಿನಲ್ಲಿ ಅನ್ನದಾನೇಶ್ವರಗಳು ಮಹಾದಾನ ಮಾಡುವ ಮೂಲಕ ಶ್ರೀಗಳು ಸಮಾಜಕ್ಕೆ ಬಹಳ ದೊಡ್ಡ ಉಪಕಾರವನ್ನು ಮಾಡುತ್ತಿದ್ದಾರೆ ಎಂದು ಶ್ರಿಶೈಲ್ ಜದ್ಗುರುಗಳು ಬಣ್ಣಿಸಿದರು.
ನಂತರ ಚಕ್ರವರ್ತಿ ಅನ್ನದಾನೇಶ್ವರ ಶ್ರೀಗಳು ಮಾತನಾಡಿ ನಮ್ಮ ತಾಯಿಯವರು ಆಶಯದಂತೆ ಅನ್ನದಾನ ಮಾಡಿಕೊಂಡು ಬರುತ್ತಿದ್ದೇವೆ,ಪ್ರತಿದಿನ 2 ಸಾವಿರ ಜನರಿಗೆ ಅನ್ನದಾನ ಮಾಡಬೇಕು ನಮ್ಮ ತಾಯಿ ನನಗೆ ಹೇಳಿದ್ದರು,ಆ ಪ್ರಕಾರವಾಗಿ ಅನ್ನದಾನವನ್ನು ಮಾಡಿಕೊಂಡು ಬರುತ್ತಿದ್ದೇವೆ.ದೇವರ ಆಶಿವಾರ್ದದಿಂದ ವರ್ಷದ 280 ದಿನಗಳ ಕಾಲ ದೇಶದ ವಿವಿಧ ಪುಣ್ಯಕ್ಷೇತ್ರಗಳಲ್ಲಿ ದಾಸೋಹವನ್ನು ಮಾಡಿಕೊಂಡು ಬರುತ್ತಿದ್ದೇವೆ ಎಂದು ಅನ್ನದಾನೇಶ್ವರ ಶ್ರೀಗಳು ತಿಳಿಸಿದರು..
ಒಟ್ಟಿನಲ್ಲಿ ಯಡೂರಿನ ಶ್ರೀವೀರಭದ್ರೇಶ್ವರ ವಿಶಾಳಿ ಜಾತ್ರಾಮಹೋತ್ಸವದಲ್ಲಿ ಅನ್ನದಾನೇಶ್ವರ ಶ್ರೀಗಳ ಮಹಾದಾಸೋಹವು ಆಕರ್ಷಣಿಯ ಕೇಂದ್ರಬಿಂದುವಾಗಿತ್ತು..ಇಲ್ಲಿ ಭಕ್ತರು ಪಂಚಪಕ್ವಾನದ ಭೋಜನವನ್ನು ಸವಿದು ಪಾವನರಾದರು..