ನಿನ್ನೆ ಹಿಜಾಬ್ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ಅಲ್ಲಲ್ಲಿ ಹೈಡ್ರಾಮಾ ನಡೆದಿತ್ತು. ಬಸವನಾಡು ವಿಜಯಪುರದಲ್ಲಿಯೂ ಕೂಡಾ ಒಂದಷ್ಟು ಡ್ರಾಮಾಗಳು ನಡೆದವು. ಮುಂಜಾಗ್ರತಾ ಕ್ರಮವಾಗಿ ಕಾಲೇಜು ಸುತ್ತಮುತ್ತ 144 ಕಲಂ ನಿಷೇದಾಜ್ಞೆ ಜಾರಿ ಮಾಡಿದ್ದರಿಂದ ಡ್ರಾಮಾಗಳಿಗೆ ಕಡಿವಾಣ ಬಿದ್ದಂತಾಯಿತಾದ್ರೂ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ಮನೆಗೆ ತೆರಳಿದ ಘಟನೆಗಳು ನಡೆದವು. ಈ ಕುರಿತು ಇಲ್ಲಿದೆ ಡಿಟೇಲ್ಸ್….

ಹಿಜಾಬ್ ಮತ್ತು ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಹಿಜಾಬ್ ಸಹಿತ ತರಗತಿಗಳಿಗೆ ಹಾಜರಾಗಬೇಕೆಂದು ವಿಜಯಪುರ ದಲ್ಲಿ ವಿದ್ಯಾರ್ಥಿನಿಯರು ನಿನ್ನೆ ಪ್ರತಿಭಟನೆ ನಡೆಸಿದ್ದರು. ನಗರದ ಸರ್ಕಾರಿ ಪಿಯು ಹಾಗೂ ಡಿಗ್ರಿ ಕಾಲೇಜಿನ ವಿದ್ಯಾರ್ಥಿನಿಯರಿಂದ ಹಾಗೂ ಮಹಿಳಾ ಪೋಷಕರಿಂದ ಪ್ರತಿಭಟನೆ ನಡೆದಿತ್ತು. ಈ ಹಿನ್ನಲೆ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳ ಆವರಣದಿಂದ 200 ಮೀಟರ್ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಕಲಂ 144 ರ ಅನ್ವಯ ನಿಷೇದಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಪಿ ಸುನೀಲಕುಮಾರ ಆದೇಶ ಹೊರಡಿಸಿದ್ದಾರೆ. ಮುಂಬರುವ ಫೆಬ್ರುವರಿ 19 ರ ವರೆಗೆ ನಿಷೇದಾಜ್ಞೆ ಜಾರಿಗೊಳಿಸಿದ್ದಾರೆ. ಮುಂಜಾಗೃತಾ ಕ್ರಮವಾಗಿ ನಿಷೇದಾಜ್ಞೆ ಜಾರಿ ಮಾಡಿದೆ ಜಿಲ್ಲಾಡಳಿತ. ನಗರದ ಸರ್ಕಾರಿ ಪಿಯು ಹಾಗೂ ಡಿಗ್ರಿ ಕಾಲೇಜು ವ್ಯಾಪ್ತಿ ಬ್ಯಾರಿಕೇಡ್ ಹಾಕಿ ಪೊಲೀಸರು ರಸ್ತೆ ಬಂದ್ ಮಾಡಿದ್ದಾರೆ. ವಿದ್ಯಾರ್ಥಿಗಳ ಹೊರತು ಪಡಿಸಿ ಇತರರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಜಿಲ್ಲೆಯ ಇತರೆ ಶಾಲಾ ಕಾಲೇಜುಗಳಲ್ಲಿಯೂ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಇನ್ನೂ ಕಾಲೇಜು ಒಳಗೆ ವಿದ್ಯಾರ್ಥಿನಿ ಯರನ್ನ ಕನ್ವೇ ಮಾಡಲು ಪ್ರಿನ್ಸಿಪಾಲ್ ಹರಸಾಹಸ ಪಟ್ಟ ಘಟನೆ ನಡೆದಿದೆ. ಆದ್ರೆ ಪ್ರಿನ್ಸಿಪಾಲ್ ಮಾತು ಕೇಳದ ವಿದ್ಯಾರ್ಥಿನಿಯರು, ಹಿಜಾಬ್ ಧರಿಸಿಯೇ ಕ್ಲಾಸ್ ನಲ್ಲಿ ಕೂರ್ತಿವಿ ಎಂದು ಪಟ್ಟು ಹಿಡಿದರು.ಹೈಕೋರ್ಟ್ ಮಧ್ಯಂತರ ಆದೇಶದ ಪ್ರಕಾರ ಸಾಧ್ಯವಿಲ್ಲ ಎಂದು ಪ್ರಿನ್ಸಿಪಾಲ್ ಹೇಳುತ್ತಿದ್ದರೇ, ಹಿಜಾಬ್ ಗೆ ಅವಕಾಶ ಇಲ್ಲ ಅಂದ್ರೆ ನಮಗೆ ಕ್ಲಾಸ್ ಬೇಡ ಎಂದ ವಿದ್ಯಾರ್ಥಿ ನಿಯರು ತರಗತಿ ಬಹಿಷ್ಕಾರಿಸಿ 30 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಾಪಾಸ್ ತೆರಳಿದರು. ಪ್ರಾಕ್ಟಿಕಲ್ ಎಕ್ಸಾಮ್ ಇದ್ರೂ ಕೂಡಾ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿದರು. ಬಳಿಕ ಮಾದ್ಯಮಗಳ ಜೊತೆ ಮಾತನಾಡಿ ನಮಗೆ ಹಿಜಾಬ್ ಮುಖ್ಯ,ಮುಂದಿನ ಪೀಳಿಗೆಗೆ ಇದು ಬೇಕು ಹಾಗೆ ಮಾಡ್ತೀವಿ ಎಂದರು. ನಮಗೆ ಏನಾದ್ರೂ ಆಗ್ಲಿ ಮುಂದಿನ ಪೀಳಿಗೆಗೆ ಏನು ಆಗಬಾರದು, ಪ್ರತ್ಯೇಕ ಕೊಠಡಿ ಮಾಡಿದ್ದಾರೆ. ನಾವು ಹಿಜಾಬ್ ತೆಗೆದು ಕ್ಲಾಸ್ ಗೆ ಬೇಕಂತೆ, ನಾವು ಹೋಗಲ್ಲ ಎಂದರು. ಹಿಜಾಬ್ ತೆಗೆದು ಕ್ಲಾಸ್ ಗೆ ಹೋಗಿ ಅಂತಾರೆ ನಾವು ಹೋಗಲ್ಲ ನಾವು ಮನೆಗೆ ಹೋಗ್ತೀವಿ ಅಂದ ವಿದ್ಯಾರ್ಥಿನಿ ತಾನಿಯಾ ಮಾದ್ಯಮಗಳಿಗೆ ತಿಳಿಸಿದಳು.
ಇನ್ನೂ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದವು ವಿಜಯಪುರ ನಗರದ ಹೂವಿನ ಮಾರುಕಟ್ಟೆಗೂ ಬಿಸಿ ತಟ್ಟಿದೆ. ವಿಜಯಪುರ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿ ಕಾರಣ ಹೂವು ಮಾರಾಟಗಾರರಿಗೆ ತೊಂದರೆಯಾಗಿದೆ. ಸರ್ಕಾರಿ ಪಿಯು ಹಾಗೂ ಡಿಗ್ರಿ ಕಾಲೇಜಿನ ಬಳಿಯಿರೋ ಹೂ ಮಾರಾಟ ಮಾಡೋ ಮಾರುಕಟ್ಟೆಯಲ್ಲಿ ನಿಷೇದಾಜ್ಞೆ ಕಾರಣ ಹೂವಿನ ಮಾರುಕಟ್ಟೆ ಬಂದ್ ಮಾಡಲಾಗಿದೆ. ಶಾಲಾ ಕಾಲೇಜಿನ 200 ಮೀಟರ್ ವ್ಯಾಪ್ತಿಯೊಳಗೆ ಇರೋ ಹೂವಿನ ಮಾರುಕಟ್ಟೆಯಲ್ಲಿ ಹೂವು ಮಾರಾಟ ಬಂದ ಆಗಿರೋ ಕಾರಣ ಮಾರಾಟಗಾರರಿಗೆ ತೊಂದರೆಯಾಗಿದೆ. ಬೆಳಿಗ್ಗೆ ಕನಿಷ್ಠ ಪಕ್ಷ ಎರಡು ಸಾವಿರ ರೂಪಾಯಿ ವ್ಯಾಪಾರ ಮಾಡ್ತಿದ್ದಿವಿ ಆದ್ರೆ ಏಕಾಏಕಿ ಬಂದ್ ಮಾಡಿದ್ದರಿಂದ ನಮಗೆ ನಷ್ಟ ಆಗಿದೆ ಅಂತಾರೆ ಹೂವಿನ ವ್ಯಾಪಾರಿಗಳು
ಒಟ್ನಲ್ಲಿ ಕೊರ್ಟ್ ಮಧ್ಯಂತರ ಆದೇಶವನ್ನು ಪಾಲಿಸಬೇಕಾದ ಅನಿವಾರ್ಯತೆ ಕಾಲೇಜಿನ ಆಡಳಿತ ಮಂಡಳಿ ಹರಸಾಹಸ ಪಡುತ್ತಿದೆ. ಇತ್ತ ವಿದ್ಯಾರ್ಥಿನಿಯರು ಪಟ್ಟು ಬಿಡುತ್ತಿಲ್ಲಾ, ಈ ವಿವಾದ ಈಗ ವ್ಯಾಪಾರಿಗಳಿಗೆ ಬಿಸಿ ಮುಟ್ಟಿಸಿದೆ. ಈ ವಿವಾದ ಅದ್ಯಾವಾಗ ಮುಗಿಯುತ್ತೋ ಅನ್ನೋ ಹಾಗಾಗಿದೆ.