State

ಮನುಸ್ಮೃತಿ ಬಂದರೆ ಈಶ್ವರಪ್ಪ ಮಂತ್ರಿ ಸ್ಥಾನ ಬಿಟ್ಟು ಕುರಿ ಕಾಯಬೇಕಾಗುತ್ತೆ: ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ..!

Share

ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಸಚಿವ ಈಶ್ವರಪ್ಪ ಉಡಾಫೆಯಿಂದ ಮಾತನಾಡುತ್ತಾರೆ. ಇದಕ್ಕೆ ಸಿಎಂ ಇರಲಿ, ಬಿಜೆಪಿ ಇರಲಿ ಯಾರೂ ಖಂಡಿಸಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲರೂ ಸಂವಿಧಾನದ ಮೇಲೆ ಪ್ರಮಾಣ ಮಾಡಿರುತ್ತಾರೆ. ಅಂತಹದರಲ್ಲಿ ಮಂತ್ರಿಯಾದವರು ಹೀಗೆ ಹೇಳೋದು ಸರಿಯಲ್ಲ. ಸಚಿವರಾಗಿ ಧ್ವಜಕ್ಕೆ ಅಗೌರವ ತರುವುದು ಅಕ್ಷಮ್ಯ ಅಪರಾಧ. ಈಶ್ವರಪ್ಪನವರಿಗೆ ನಡವಳಿಕೆ, ರಾಜಕೀಯ ಭಾಷೆ ಗೊತ್ತಿಲ್ಲ. ಡಿ.ಕೆ.ಶಿವಕುಮಾರ್ ತಂದೆ ಬಗ್ಗೆ ಈಶ್ವರಪ್ಪ ಮಾತನಾಡಿದ್ದಾರೆ.

ಡಿಕೆಶಿ ಬಗ್ಗೆ ಮಾತನಾಡಲಿ ಅವರ ತಂದೆ ಬಗ್ಗೆ ಮಾತಾಡಿದ್ದು ಖಂಡನೀಯ. ವಯಕ್ತಿಕವಾಗಿ ಯಾರೂ ಕೂಡ ಮಾತನಾಡಬಾರದು ಎಂದು ಹರಿಹಾಯ್ದರು.
ಇನ್ನು ರಾಷ್ಟ್ರಧ್ವಜಕ್ಕೆ ತುಂಬಾ ಹಳೆಯ ಇತಿಹಾಸವಿದೆ. ಧ್ವಜ, ರಾಷ್ಟ್ರಗೀತೆಗೆ ಅಪಮಾನ ಮಾಡಿದ್ರೆ ಕ್ರಮ ಜರುಗಿಸಬೇಕು. ರೈತರು ಕೆಂಪುಕೋಟೆ ಕೆಳಗೆÉ ಧ್ವಜ ಹಾರಿಸಿದ್ದಕ್ಕೆ ಕ್ರಮ ಕೈಗೊಂಡಿರಿ. ಆದರೆ ಸಚಿವ ಈಶ್ವರಪ್ಪ ವಿರುದ್ಧ ಯಾಕೆ ಕ್ರಮ ಆಗಿಲ್ಲ. ಆರ್‍ಎಸ್‍ಎಸ್‍ನವರ ಜೀತದಾಳು, ಗುಲಾಮರಾಗಿದ್ದಾರೆ. ಬಿಜೆಪಿಯವರು ದೇಶಭಕ್ತಿ ಬಗ್ಗೆ ಬಹಳ ಮಾತನಾಡುತ್ತಾರೆ.

ಇವರಿಗೆ ಸಂವಿಧಾನ, ರಾಷ್ಟ್ರಧ್ವಜದ ಬಗ್ಗೆ ಗೌರವ ಇಲ್ಲ. ಬಹುಶಃ ಸಚಿವ ಈಶ್ವರಪ್ಪನವರ ಬಾಯಲ್ಲಿ ಅವರೇ ಹೇಳಿಸಿರಬೇಕು. ಮನುಸ್ಮøತಿ ಬಂದರೆ ಈಶ್ವರಪ್ಪ ಮಂತ್ರಿ ಸ್ಥಾನ ಬಿಟ್ಟು ಕುರಿ ಕಾಯಬೇಕಾಗುತ್ತೆ. ಇದು ಸಚಿವ ಈಶ್ವರಪ್ಪಗೆ ಗೊತ್ತಿಲ್ಲ ಎನಿಸುತ್ತದೆ. ಸಚಿವ ಈಶ್ವರಪ್ಪ ವಿರುದ್ಧ ದೇಶದ್ರೋಹದ ಕೇಸ್ ದಾಖಲಿಸಬೇಕು. ಸದನದ ಒಳಗೆ ಮತ್ತು ಹೊರಗೆ ಹೋರಾಟ ಮುಂದುವರಿಸುತ್ತೇವೆ. ಕೊಲೆ ಮಾಡಿ ತಪ್ಪಾಯಿತು ಎಂದರೆ ಬಿಟ್ಟು ಬಿಡೋಕೆ ಆಗುತ್ತಾ..? ಸಚಿವ ಈಶ್ವರಪ್ಪರನ್ನು ಸಂಪುಟದಿಂದ ಕೂಡಲೇ ಕೈ ಬಿಡಬೇಕು. ಈಶ್ವರಪ್ಪ ವಿರುದ್ಧ ಕ್ರಮ ಆಗೋವರೆಗೂ ಹೋರಾಟ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

Tags:

error: Content is protected !!