ಹಿಜಾಬ್ ಧಿರಿಸಿ ಕಾಲೇಜಿಗೆ ಬರುವ ವಿದ್ಯಾರ್ಥಿನಿಯರನ್ನು ಕಾಲೇಜಿ ನಿಂದ ಸಸ್ಪೆಂಡ್ ಮಾಡಿದ್ದರೆ ಈ ಹಿಜಾಬ್ ವಿಷಯ ರಾಜ್ಯವ್ಯಾಪಿ ಇಷ್ಟು ದೊಡ್ಡದಾಗುತ್ತಿರಲಿಲ್ಲ ಎಂದು ಎಂದು ಶ್ರೀರಾಮ ಸೇನಾ ಮುಖಂಡರಾದ ಪ್ರಮೋದ್ ಮುತಾಲಿಕ್ ಹೇಳಿದರು. ಬೆಳಗಾವಿಯಲ್ಲಿ ಸುದ್ದಿಗರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಪ್ರಕರಣ ಎರಡು ತಿಂಗಳಿAದ ನಡೆಯುತ್ತಿದೆ. ಕಾಲೇಜು ನಿಯಮಗಳನ್ನು ಮೀರಿ ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತದ್ದ ವಿಶ್ಯಾರ್ಥಿನಿಯರನ್ನು ಆಗಲೇ ಕಲೇಜಿನಿಂದ ಅಮಾನತ್ತ ಮಾಡಿದ್ದರೆ ಈ ವಿಷಯ ರಾಜ್ಯ ವ್ಯಾಪಿ ವಿಸ್ತಾರ ಆಗುತ್ತಿರಲಿಲ್ಲ. ಹಿಜಾಬ್ ಬಗ್ಗೆ ನಿಮಗೆ ಹಕ್ಕು ಸ್ವಾತಂತ್ರ‍್ಯ ಇರಬಹುದು. ಆದರೆ ಕಾಲೇಜಿನ ಹೊರಗಡೆ ಸ್ವಾತಂತ್ರ‍್ಯವಾಗಿರಬಹುದು. ಆದರೆ ಕಾಲೇಜು ಆವರಣದಲ್ಲಿ ಕಾಲೇಜಿನ ನೀತಿ ನಿಯಮ ಪಾಲಿಸಬೇಕು. ಅಲ್ಲಿ ಹುಜಾಬ್ ,ಬುರಕಾ ಹಾಕ್ತಿನಿ ಅಂದ್ರೆ ನಡೆಯಲ್ಲ. ಮುಸ್ಲಿಂ ವಿದ್ಯಾರ್ಥಿನಿಯರ ಈ ವತ್ನೆಯ ಹಿಂದೆ ಎಸ್ ಡಿ ಪಿ ಐ ಮತ್ತು ಪಿ ಎಫ್ ಐ , ಎಂಐಎA ಸಂಘಟನೆಯ ಕೈವಾಡವಿದೆ. ಇವರ ನೀಚ ಕೃತ್ಯಕ್ಕೆ ವಿದ್ಯಾರ್ಥಿನಿಯರು ಬಲಿಯಾಗುತ್ತಿದ್ದಾರೆ. ವಿದ್ಯಾರ್ಜನೆಯಿಂದ ಅವರನ್ನು ಬಹಿಷ್ಕಾರ ಮಾಡಲಾಗುತ್ತಿದೆ. ಶಿಕ್ಷಣದಲ್ಲಿ ಇಸ್ಲಾಮಿಕರಣ ಮಾಡಲಾಗುತ್ತಿದೆ. ಸರ್ಕಾರ ಇದಕ್ಕೆ ಅವಕಾಶ ಮಾಡಿ ಕೊಡಬಾರದು. ೬ ಜನ ವಿದ್ಯಾರ್ಥಿನಿಯರನ್ನ ಕೂಡಲೇ ಕಾಲೇಜನಿಂದ ಅಮಾನತ್ತ ಮಾಡಬೇಕೆಂದು ಒತ್ತಾಯಿಸಿದರು.
ಇನ್ನು ರಾಜ್ಯದಲ್ಲಿ ಹಿಜಾಬ್ ವಿಷಯ ತಾರಕಕ್ಕೇರುತ್ತಿದೆ. ಇನ್ನು ಮುಸ್ಲಿಂ ವಿದ್ಯಾರ್ಥಿನಿಯರು ಇದನ್ನು ನಮ್ಮ ಹಕ್ಕು ಎಂದು ಹೇಳಿದರೆ ಶಾಲಾ ಕಾಲೇಜು ನಿಯಮಗಳನ್ನು ಪಾಲಿಸುವುದು ಕಡ್ಡಾಯ ಎಂದು ಹೇಳಲಾಗುತ್ತಿದೆ. ಇನ್ನು ಈ ಕುರಿತಂತೆ ಸರಕಾರ ಯಾವ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.
