ನಮ್ಮ ಮೊದಲನೇ ವಿಚಾರರಾಜ್ಯದಲ್ಲಿ ಶಾಂತಿ ನೆಲೆಸಬೇಕು, ಮಕ್ಕಳಲ್ಲಿ ಯಾವುದೇ ಭಿನ್ನಾಭಿಪ್ರಾಯ ಮೂಡದಂತೆ ಶಾಲಾ ಕಾಲೇಜುಪ್ರಾರಂಭ ಮಾಡಬೇಕುಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.

ಶನಿವಾರದಂದು ಬೆಳಗಾವಿಯಲ್ಲಿ ಮಾಧ್ಯಮಗಾರರನ್ನ ಉದ್ಧೇಶಿಸಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿಯವರುಬಜೆಟ್ ಪ್ರಕ್ರಿಯೆ ಪ್ರಾರಂಭವಾಗಿದೆ. ಹಲವಾರು ಇಲಾಖೆಗಳ ಸಭೆ ನಡೆಸಿದ್ದೇನೆ. ಸೋಮವಾರ ಮತ್ತು ಮಂಗಳವಾರದ ಸೆಷನ್ ಬಳಿಕ ಮತ್ತೆ ಸಭೆ ನಡೆಸುತ್ತೇನೆ. ಇದೆಲ್ಲಾ ಮುಗಿದ ಮೇಲೆ ಫೆ 25 ರ ಬಳಿಕ ಎಲ್ಲಾ ಇಲಾಖೆಗಳ ಬೇಡಿಕೆ ಗಮನಿಸಿ, ಕೇಂದ್ರ ಮತ್ತುರಾಜ್ಯ ಸರ್ಕಾರಗಳ ಯೋಜನೆಯನ್ನು ಗಮನಿಸಿ ಮುಂದಿನ ಬಜೆಟ್ ಮಾಡ್ತೀವಿ. ನಮ್ಮಆರ್ಥಿಕ ಸ್ಥಿತಿ ಹಾಗೂ ಎಸ್ಒಎಸ್ ಮೊಬಲೈಜೆಷನ್ ಹೆಚ್ಚು ಮಾಡಲು ಆದೇಶಿಸಿದ್ದೇನೆ. ಎಲ್ಲವನ್ನೂರಿವೀವ್ ಮಾಡಿ ಬಜೆಟ್ ಮಂಡಿಸುತ್ತೇನೆಎಂದರು.
ಇನ್ನುಉತ್ತರಕರ್ನಾಟಕಕ್ಕೆ ವಿಶೇಷಅನುದಾನ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಬೊಮ್ಮಾಯಿಯವರುಬಜೆಟ್‍ನಲ್ಲಿ ಏನು ಆಗುತ್ತದೆಎಂದು ನಾನು ಇವತ್ತು ಹೇಳಲು ಸಾಧ್ಯವಿಲ್ಲ, ಅದು ಸರಿಯಲ್ಲಎಂದರು.
ಹಿಜಾಬ್ ವಿವಾದದ ಹಿಂದಿರುವಸಂಘಟನೆಗಳ ಮೇಲೆ ಕ್ರಮಕ್ಕೆ ಸಂಬಂಧಿಸಿದಂತೆ ಸಿಎಂ ಬೊಮ್ಮಾಯಿಅವರುಈಗಾಗಲೇ ಕೇಸ್‍ಕೋರ್ಟನಲ್ಲಿದೆ. ಡೇಟುಡೇ ಹಿಯರಿಂಗ್‍ಆಗ್ತಿದೆ, ಮಧ್ಯಂತರಆದೇಶ ಬಂದಿದೆ. ನಮ್ಮ ಮೊದಲನೇ ವಿಚಾರರಾಜ್ಯದಲ್ಲಿ ಶಾಂತಿ ನೆಲೆಸಬೇಕು, ಮಕ್ಕಳಲ್ಲಿ ಯಾವುದೇ ಭಿನ್ನಾಭಿಪ್ರಾಯ ಮೂಡದಂತೆ ಶಾಲಾ ಕಾಲೇಜು ಪ್ರಾರಂಭ ಮಾಡಬೇಕು, ಹೈಕೋರ್ಟ್‍ಕೂಡಇದನ್ನೇ ಹೇಳಿದೆಎಂದರು.
ಇನ್ನುಎರಡು ವಿಚಾರಕ್ಕೆರಕ್ಷಣಾ ಸಚಿವರನ್ನ ಭೇಟಿಯಾಗಿದ್ದೆ.ಬೆಳಗಾವಿ ಸಮೀಪದ 750 ಎಕರೆಡಿಫೆನ್ಸ್ ಹುಲ್ಲುಗಾವಲಿನ ವಿಚಾರವಾಗಿ ಚರ್ಚಿಸಿದ್ದೇನೆ, ಮಾಹಿತಿ ತರಿಸಿಕೊಂಡು ಬೇಗನೆ ಒಂದು ನಿರ್ಣಯ ಮಾಡ್ತೀವಿ ಎಂದಿದ್ದಾರೆ.ಸಂಗೊಳ್ಳಿಯಲ್ಲಿ ನಿರ್ಮಾಣ ಮಾಡಿರುವ ಸಂಗೊಳ್ಳಿ ರಾಯಣ್ಣ ಶಾಲೆಯನ್ನು ಮಿಲಿಟರಿ ಶಾಲೆ ಮಾಡಬೇಕೆಂದು ಮನವಿ ಮಾಡಿದ್ದೆ. ನಾನು ಬೆಂಗಳೂರಿಗೆ ಬಂದ ಮರುದಿನವೇ ಕರೆ ಮಾಡಿದ್ರುಈಗಾಗಲೇ ಈ ಕುರಿತುಇನ್ಸಪೆಕ್ಷನ್ ಮಾಡಲಾಗಿದೆ, ಆದಷ್ಟು ಬೇಗ ಅದರ ಪರವಾಗಿ ನಿರ್ಣಯ ಮಾಡಲಾಗುವುದು ನಿರೀಕ್ಷಿಸಿ ಎಂದಿದ್ದಾರೆ.