ಭತ್ತದ ಹುಲ್ಲಿನ ಬಣವೆಗೆ ಬೆಂಕಿ ಹತ್ತಿಕೊಂಡು ಅಪಾರ ಪ್ರಮಾಣದ ಮೇವು ಸುಟ್ಟು ಭಸ್ಮವಾಗಿರುವ ಘಟನೆ ಖಾನಾಪುರ ತಾಲೂಕಿನ ಕರಂಬಳ ಗ್ರಾಮದಲ್ಲಿ ಸಂಭವಿಸಿದೆ.

ಕರಂಬಳ ಗ್ರಾಮದ ಶಿವಾಜಿ ಢವಳೆ ಎಂಬುವವರಿಗೆ ಸೇರಿದ ಭತ್ತದ ಬಣವೆ ಇದಾಗಿದ್ದು. ಮಂಗಳವಾರ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದೆ. ನೋಡ ನೋಡುತ್ತಿದ್ದಂತೆ ಇಡೀ ಬಣವೆಗೆ ಬೆಂಕಿ ವ್ಯಾಪಿಸಿದೆ. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಖಾನಾಪುರ ಅಗ್ನಿಶಾಮಕ ಅಧಿಕಾರಿ ಮನೋಹರ್ ರಾಥೋಡ್ ಮತ್ತು ಅವರ ತಂಡ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಅಗ್ನಿಶಾಮಕ ಇಲಾಖೆ ಎರಡು ವಾಹನಗಳಿಂದ ಬೆಂಕಿ ನಂದಿಸಲಾಯಿತು. ಘಟನೆಯಲ್ಲಿ ಸುಮಾರು 55 ರೂಪಾಯಿಯಷ್ಟು ಹಾನಿಯಾಗಿದೆ. 50 ಸಾವಿರ ರೂಪಾಯಿಯಷ್ಟು ಮೌಲ್ಯದ ಮೇವನ್ನು ಸಂರಕ್ಷಿಸಲಾಗಿದೆ.
