ಹಲಗಾ ಸುವರ್ಣ ಇಧಾನ ಸೌಧದ ಎದುರಿಗೆ ಬ್ರೇಕ್ ಫೇಲ್ ಆಗಿ ಟ್ರಕ್ ಅಪಘಾತವಾಗಿ ಚಾಲಕ ಹಾಗೂ ಟ್ರಕ್ ಕ್ಲೀನರ್ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ.

ಕಬ್ಬು ತುಂಬುವ ಲಾರಿಯೊಂದು ಬೆಳಗಾವಿಯಿಂದ ಎನ್‍ಎಚ್ 4 ಮೂಲಕ ಹಿರೇಬಾಗೇವಾಡಿ ಕಡೆಗೆ ತೆರಳುತ್ತಿತ್ತು. ಈ ವೇಳೆ ಮಧ್ಯಾಹ್ನ 3ಗಂಟೆ ಸುಮಾರಿಗೆ ಹಲಗಾ ಸುವರ್ಣ ವಿಧಾನ ಸೌಧದ ಎದುರಿಗೆ ಟ್ರಕ್ ಬ್ರೇಕ್ ಫೇಲ್ ಆಗಿ ಗುಂಡಿಗೆ ಉರುಳಿದೆ. ಪರಿಣಾಮ ಚಾಲಕ ಹಾಗೂ ಕ್ಲೀನರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಲಾರಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಇನ್ನು ಘಟನೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಹಿರೇಬಾಗೇವಾಡಿ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಇನ್ನು ಈ ಕುರಿತಂತೆ ಪರಿಶೀಲನೆ ನಡೆಸಿದ್ದಾರೆ.
