ಬೆಳಗಾವಿಯ ಸಮಾದೇವಿ ವಾರ್ಷಿಕೋತ್ಸವದ ನಿಮಿತ್ಯ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳನ್ನು ಮತ್ತು ಶ್ರೀ ದೇವಿಯ ದರ್ಬಾರವನ್ನು ಪ್ರಾಧ್ಯಾಪಕಿ ಸ್ವಾತಿ ಕುಲಕರ್ಣಿ ಉದ್ಘಾಟಿಸಿದರು.

ಬೆಳಗಾವಿಯ ಶ್ರೀ ಸಮಾದೇವಿ ಸಂಸ್ಥಾನ, ವೈಶ್ಯವಾಣಿ, ವಾಣಿ ಸಮಾಜ, ವೈಶ್ಯವಾಣಿ ಯುವ ಸಂಘಟನೆ ಹಾಗೂ ವೈಶ್ಯವಾಣಿ ಮಹಿಳಾ ಮಂಡಳ ಸಮಾದೇವಿಗಲ್ಲಿ ಇವರ ಸಂಯುಕ್ತಾಶ್ರಯದಲ್ಲಿ ಇಂದು ಶನಿವಾರದಿಂದ ಶ್ರೀ ಸಮಾದೇವಿ ವಾರ್ಷಿಕೋತ್ಸವನ್ನು ಆಚರಿಸಲಾಯಿತು. 12ರ ಶನಿವಾರ ಬೆಳಗ್ಗೆ 6ರಿಂದ ವಾದ್ಯಮೇಳಗಳೊಂದಿಗೆ ಬೆಳಿಗ್ಗೆ ಆರತಿ ಆರಂಭವಾಯಿತು. ನಂತರ 7ರಿಂದ 12ರವರೆಗೆ ಕುಂಕುಮಾರ್ಚನೆ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಸಮಾದೇವಿ ಮಂಗಲ ಕಾರ್ಯಾಲಯದಲ್ಲಿ ಶ್ರೀ ದೇವಿಯ ದರ್ಬಾರ್‍ವನ್ನು ಪ್ರಾಧ್ಯಾಪಕಿ ಸ್ವಾತಿ ಕುಲಕರ್ಣಿ ಅವರು ಉದ್ಘಾಟಿಸಿದರು.

ಈ ವೇಳೆ ಮಹಿಳೆಯರು ತಯಾರಿಸಿದ ವಿವಿಧ ವಸ್ತುಗಳ ಮಳಿಗೆಗಳು, ಗೃಹೋಪಯೋಗಿ ವಸ್ತುಗಳು, ಆಹಾರ ಪದಾರ್ಥಗಳು, ಆಭರಣಗಳು, ಸೀರೆಗಳ ಮಳಿಗೆಗಳನ್ನು ಸ್ಥಾಪಿಸಿ ಅವರ ಕಲಾ ಪ್ರತಿಭೆಯನ್ನು ಉತ್ತೇಜಿಸಲು ಹಾಗೂ ಪೆÇ್ರೀತ್ಸಾಹಿಸಲು ಅವಕಾಶ ಕಲ್ಪಿಸಲಾಗಿದೆ. ದೇವಿ ದರ್ಬಾರವನ್ನು ಗಣ್ಯರು ಉದ್ಘಾಟಿಸುವರು. ಮಧ್ಯಾಹ್ನ 3ಕ್ಕೆ ವಿವೇಕಾನಂದ ಭಜನಾ ಮಂಡಳಿಯ ಭಜನೆ, 3.45ಕ್ಕೆ ಭಕ್ತಿ ಸಂಸ್ಕøತಿ ಮಂಡಳಿಯ ಭಜನೆ, ಸಂಜೆ 5.15ಕ್ಕೆ ಯಮನ್ನಾಕ ಮಂಡಳದ ಭಜನೆ, ಗಜಾನನ ಮಹಾರಾಜರ ಭಜನಿ ಮಂಡಳದ ಭಜನೆ, ರಾತ್ರಿ 7ರಿಂದ 9ರವರೆಗೆ ಭಕ್ತಿಗೀತೆ, ಕೀರ್ತನೆ ಕಾರ್ಯಕ್ರಮ ನಡೆಯಲಿದೆ.
ಸಮಾದೇವಿಯವರ ಜನ್ಮ ದಿನಾಚರಣೆ ಪ್ರಯುಕ್ತ ಸಮುದಾಯದ ಶಾಲಾ ಕಾಲೇಜಿನ ಬಾಲಕ-ಬಾಲಕಿಯರಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಈ ವೇಳೆ ಮಹಿಳೆಯರು ಎಲ್ಲರೂ ಸೇರಿಕೊಂಡು ದೇವಿಯ ಪೂಜೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಾಡಿದರು.
ಈ ನಾಲ್ಕು ದಿನಗಳ ಜನ್ಮ ವಾರ್ಷಿಕೋತ್ಸವ ಮತ್ತು ಸರ್ವ ಧಾರ್ಮಿಕ ಕಾರ್ಯಕ್ರಮಗಳಿಗೆ ಎಲ್ಲಾ ಭಕ್ತಾದಿಗಳು ಆಗಮಿಸುವಂತೆ ಶ್ರೀ ಸಮಾ ದೇವಿ ಸಂಸ್ಥಾನ ಮತ್ತು ವೈಶ್ಯ ವಾಣಿ ಸಮಾಜದ ಅಧ್ಯಕ್ಷ ದತ್ತ ಕಣಬರ್ಗಿ ಮತ್ತು ಕಾರ್ಯದರ್ಶಿ ಅಮಿತ್ ಕುಡೂರಕರ್ ಹೇಳಿದ್ದಾರೆ.