Belagavi

ಬೆಳಗಾವಿ ಮಹಾಲಕ್ಷ್ಮಿ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಬಿ.ವೈ.ವಿಜಯೇಂದ್ರ ಭಾಗಿ

Share

ಬೆಳಗಾವಿಯ ಬಾಕ್ಸೈಟ್ ರಸ್ತೆಯ ಉಷಾ ಕಾಲೋನಿಯ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆಸುತ್ತಿರುವ ಹೋಮ ಹವನಗಳಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಭಾಗಿಯಾಗಿದ್ದರು.
ನಗರದ ಉಷಾ ಕಾಲೋನಿಯ ಮಹಾಲಕ್ಷ್ಮಿ ದೇವಿಯ 12ನೇ ಜಾತ್ರಾ ಮಹೋತ್ಸವ ಸಾಮೂಹಿಕ ಉಚಿತ ವಿವಾಹ ಕಾರ್ಯಕ್ರಮ ಹಾಗೂ ಲೋಕಕಲ್ಯಾಣಾರ್ಥವಾಗಿ ನಡೆಸುತ್ತಿರುವ ಹೋಮ ಹವನಗಳಲ್ಲಿ ಬಿ.ವೈ.ವಿಜಯೇಂದ್ರ ಭಾಗಿಯಾಗಿದ್ದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿಗಳ ನೆತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರಂಜಿ ಮಠದ ಗುರುಸಿದ್ಧ ಸ್ವಾಮಿಜಿ, ಯರನಾಳದ ಬ್ರಹ್ಮಾನಂದ ಅಜ್ಜನವರು, ಮುರಗೋಡದ ನೀಲಕಂಠದ ಮಹಾಸ್ವಾಮಿಜಿಗಳು, ಘಟಪ್ರಭಾದ ಮಲ್ಲಿಕಾರ್ಜುನ ಮಹಾಸ್ವಾಮಿಜಿಗಳು, ಬೀದರ್‍ನ ಗುರುದೇವ ಆಶ್ರಮದ ಗಣೇಶಾನಂದ ಮಹಾಸ್ವಾಮಿಜಿಗಳು ಭಾಗಿಯಾಗಿದ್ದರು. ಈ ವೇಳೆ ವಿಜಯೇಂದ್ರರವರು ಪೂಜಾ ಕೈಕರ್ಯಗಳನ್ನು ನೆರವೇರಿಸಿದರು. ಈ ವೇಳೆ ಮಹಾಲಕ್ಷ್ಮಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ವತಿಯಿಂದ ಸವಿನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ವೈ ವಿಜಯೇಂದ್ರರವರು, ಶಿವಮೊಗ್ಗದಲ್ಲಿ ಕಲ್ಲು ತೂರಾಟ ಪ್ರಕರಣ ಹಾಗೂ ಸಮವಸ್ತ್ರ ಧರಿಸುವ ಕುರಿತಂತೆ ಮಕ್ಕಳ ತಲೆ ಕೆಡಸಿರೋದು ವಿರೋಧ ಪಕ್ಷದವರು. ಈ ಕುರಿತಂತೆ ಹೈಕೋರ್ಟ್‍ನಲ್ಲಿ ವಿಚಾರಣೆ ಇದೆ. ಎಲ್ಲರೂ ಕೂಡಾ ಸಮಾಧಾನವಾಗಿ ಇರಬೇಕು. ಕಾಂಗ್ರೆಸ್ ಮಕ್ಕಳಲ್ಲಿ ವಿಷದ ಬೀಜವನ್ನು ಬಿತ್ತುವ ಕೆಲಸ ಮಾಡುತ್ತಿದೆ. ಇದನ್ನು ಅರ್ಥ ಮಾಡಿಕೊಂಡು ಶಾಲಾ ಮಕ್ಕಳಲ್ಲಿ ಎಲ್ಲರೂ ಸರಿಸಮನಾಗಿ ಇರಬೇಕು. ಮಕ್ಕಳ ಮನಸ್ಸು ಹಾಳು ಮಾಡುತ್ತಿರೋದು ವಿರೋಧಪಕ್ಷ. ಸರ್ಕಾರ ಹೈಕೋರ್ಟ್, ಸುಪ್ರೀಂ ಕೋರ್ಟ್ ತೀರ್ಪಿನಂತೆ ಸೂಚನೆ ನೀಡಿದೆ. ಈ ಕುರಿತಂತೆ ಹೈಕೋರ್ಟ್ ತೀರ್ಪು ಬಂದ ಬಳಿಕ ಎಲ್ಲಾ ಸರಿಯಾಗಲಿದೆ ಎಂದರು.

ಇನ್ನು ರಾಜಹ್ಯದಲ್ಲಿ ಎದ್ದಿರುವ ಈ ಹಿಜಾಬ್ ಕೇಸರಿ ಶಾಲು ವಿವಾದ ಎಲ್ಲರ ನೆಮ್ಮದ ಕೆಡಸಿದೆ. ಇನ್ನ ಇದು ರಾಜ್ಯದಲ್ಲಿ ವಿಸ್ತರಿಸುತ್ತಿದೆ. ಇನ್ನು ಈಗಾಗಲೇ ಘನ ನ್ಯಾಯಾಲಯ ಈ ಕುರಿತಂತೆ ವಿಚಾರಣೆ ನಡೆಸುತ್ತಿದೆ. ಇನ್ನು ಈ ಕುರಿತಂತೆ ನ್ಯಾಯಾಲಯದ ಅದೇಶ ಬಂದ ನಂತರವಷ್ಟೇ ಈ ಪ್ರಕರಣಕ್ಕೆ ಸ್ಪಷ್ಟತೆ ಸಿಗಲಿದೆ.

 

Tags:

error: Content is protected !!