ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಗಳ ಚುನಾವಣೆ ಜರುಗಿಸುವ ಕುರಿತು ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯಾ ಬಿಸ್ವಾಸ್ ಅವರು ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಹೌದು ಬೆಳಗಾವಿ ಮಹಾನಗರ ಪಾಲಿಕೆಯ 21ನೇ ಅವಧಿಗಾಗಿ ಮೇಯರ್ ಮತ್ತು ಉಪಮೇಯರ್ ಸ್ಥಾನಗಳ ಚುನಾವಣೆ ಜರುಗಿಸುವ ಕುರಿತು ಉಲ್ಲೇಖಿತ ಪತ್ರದನ್ವಯ ವರದಿಯನ್ನು ನಮ್ಮ ಕಾರ್ಯಾಲಯಕ್ಕೆ ಸಲ್ಲಿಸಿರುತ್ತಾರೆ. ಈ ವರದಿಯನ್ನು ಪರಿಶೀಲಿಸಲಾಗಿ, ಮೇಯರ್ ಮತ್ತು ಉಪಮೇಯರ್ ಸ್ಥಾನಗಳ ಚುನಾವಣೆಗೆ ಕೆಲ ದಾಖಲೆಗಳು ಮತ್ತು ಮಾಹಿತಿಗಳ ಅವಶ್ಯಕತೆಯಿದೆ. ಸೆಪ್ಟೆಂಬರ್ 3 2021ರಂದು ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರ ಹೆಸರುಗಳನ್ನು ಮಾತ್ರ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಇನ್ನು ಸದಸ್ಯರುಗಳ ಮೀಸಲಾತಿಗಳ ವಿವರಗಳು ಹಾಗೂ ಪಕ್ಷದ ವಿವರಗಳನ್ನು ನಮೂದಿಸಿರುವುದಿಲ್ಲ. ಕಾರಣ ಎಲ್ಲ ವಿವರಗಳನ್ನು ಒಳಗೊಂಡ ಕರ್ನಾಟಕ ವಿಶೇಷ ರಾಜ್ಯಪತ್ರ ಒದಗಿಸುವಂತೆ ಪ್ರಾದೇಶಿಕ ಆಯುಕ್ತರು ಪಾಲಿಕೆ ಆಯುಕ್ತರಿಗೆ ತಿಳಿಸಿದ್ದಾರೆ.
