Belagavi

ಬೆಳಗಾವಿ ನಗರದಲ್ಲಿ ಡಾ. ಸಿ.ಕೆ ಜೋರಾಪೂರ್ ರಚಿಸಿದ 5ಗ್ರಂಥಗಳ ಲೋಕಾರ್ಪಣೆ ಸಮಾರಂಭ

Share

ಡಾ. ಸಿ.ಕೆ ಜೋರಾಪೂರ್ ರಚಿಸಿದ 5ಗ್ರಂಥಗಳ ಲೋಕಾರ್ಪಣೆ ಸಮಾರಂಭವನ್ನು ಇಂದು ಬೆಳಗಾವಿ ನಗರದಲ್ಲಿ ಹಮ್ಮಿಕೊಳ್ಲಲಾಗಿತ್ತು.

ನಗರದ ಜೀರಗೆ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಡಹಬ್ಬ ಉತ್ಸವ ಸಮಿತಿ ಹಾಗೂ ಪ್ರಹ್ಲಾದ್ ಪ್ರಕಾಶನ ಬೆಳಗಾವಿ ಇವರ ನೇತೃತ್ವದಲ್ಲಿ ಡಾ. ಚಿಂತಾಮಣಿ ಕೆ. ಜೋರಾಪೂರ್ ಇವರು ವಿರಚಿತ ದಶಾತಾರ, ಕಲಿಯುಗದ ಕಲ್ಪವೃಕ್ಷ ರಾಘವೇಂದ್ರ ರಾಯರು, ತಾರತಮ್ಯ ಭಜನಾ ಮಂಜರಿ, ಹಾಗೂ ಪುನರ್ ಮುದ್ರಣಗೊಂಡ ಭವ್ಯ ಭಾರತ ಯಾತ್ರೆ, ಪುಸ್ತಕವನ್ನ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ, ಕಾರಂಜಿ ಮಠದ ಗುರುಸಿದ್ಧ ಸ್ವಾಮಿಜಿ, ಪರಮಪೂಜ್ಯ ವಿಶ್ವಾಧಿರಾಜತೀರ್ಥರು, ಸಂಸದೆ ಮಂಗಳಾ ಅಂಗಡಿ, ಪ್ರಮೋದಾಚಾರ್ಯ ಕಟ್ಟಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶ್ರೀ ನಿಧಿ ಆಚಾರ್ಯ, ಹಿರಿಯ ಸಾಹಿತಿ ಎಲ್.ಎಸ್ ಶಾಸ್ತ್ರೀ ಪುಸ್ತಕ ಲೋಕಾರ್ಪಣೆ ಮಾಡಿದರು.

ಈ ವೇಳೆ ಪುಸ್ತಕ ಪರಿಚಯ ನಿಮಿತ್ಯ ಸ್ವಾಮಿಜಿ ಮಾತನಾಡಿ, ಡಾ. ಸಿ.ಕೆ ಜೋರಾಪೂರ್‍ರ ಲೋಕಾರ್ಪಣೆಗೊಂಡ ಈ ಐದು ಪುಸ್ತಕಗಳು ಎಲ್ಲಾ ಪುಸ್ತಕಗಳಲ್ಲಿ ಆಯಾ ಕಾಲಘಟಕ್ಕೆ ತಕ್ಕಂತೆ ಮಹತ್ವವಿದೆ. ಸಾಕಷ್ಟು ಯುವ ಸಮೂಹ ನಮ್ಮ ಭಾರತದ ಇತಿಹಾಸ ಹಾಗೂ ಧಾರ್ಮಿಕ ಪದ್ಧತಿಗಳಿಂದ ದೂರವಾಗುತ್ತಿದ್ದಾರೆ. ಹಾಗಾಗಿ ಈ ಮೊಬೈಲ್ ಲ್ಯಾಪ್‍ಟಾಪ್ ಬಿಟ್ಟು ಪುಸ್ತಕಗಳನ್ನು ಓದಬೇಕು ಕರೆ ನೀಡಿದರು.
ಈ ವೇಳೆ ಡಾ. ಸಿಕೆ ಜೋರಾಪೂರ್ ಮಾತನಾಡಿ, ಈ ಪುಸ್ತಕಗಳ ಬಗ್ಗೆ ಹೆಚ್ಚಿ ಮಾಹಿತಿ ನೀಡಿದರು. ಈ ಪುಸ್ತಕಗಳನ್ನ ಓದಬೇಕೆಂದು ಕುಂದಾ ನಗರಿ ಜನತೆಗೆ ಮನವಿ ಮಾಡದರು.
: ಈ ವೇಳೆ ಡಾ. ಎಚ್,ಬಿ ರಾಜಶೇಖರ್, ರುದ್ರಣಣ ಚಂದರಗಿ, ಸೋಮಲಿಂಗ ಮಾವಿನಕಟ್ಟಿ, ಮಹಾಂತ ಒಕ್ಕುಂದ, ಆರತಿ ಪಾಟೀಲ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Tags:

error: Content is protected !!