ಬೈಕ್ ಸವಾರನ ನಿಷ್ಕಾಳಜಿತನದಿಂದ ಅತೀ ವೇಗದಿಂದ ಬೈಕ್ ಚಲಾಯಿಸುತ್ತಿದ್ದ ವೇಳೆ ರಸ್ತೆಯ ಮೇಲಿದ್ದ ಕಲ್ಲಿನ ಡಿವೈಡರ್‍ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿ ಖಾನಾಪುರ ರಸ್ತೆಯಲ್ಲಿ ನಡೆದಿದೆ.

ಬೆಳಗಾವಿಯಿಂದ ಖಾನಾಪುರ ಮಾರ್ಗವಾಗಿ ಬೈಕ್ ಚಲಾಸಯಿಸುತ್ತಿದ್ದ ಚಾಲಕ ಬೈಕಿನಲ್ಲಿ ಇಬ್ಬರನ್ನು ಕೂಡಿಸಿಕೊಂಡು ಚಾಲನೆ ಮಾಡುತ್ತಿದ್ದ. ಅತೀ ವೇಗವಾಗಿ ಬೈಕ್ ಚಲಾಯಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಝಾಡಶಹಾಪೂರ್ ಗ್ರಾಮದ ಬ್ರಹ್ಮಲಿಂಗ ದೇವಸ್ಥಾನ ಹತ್ತಿರ ರಸ್ತೆಯ ಮೇಲಿದ್ದ ಕಲ್ಲಿನ ಡಿವೈಡರ್‍ಗೆ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಗಾಯಗೊಂಡಿದ್ದಾರೆ.ಮೃತರು ಗೋಕಾಕ ತಾಲೂಕಿನ ಶಿವಾಪೂರ್ ಕೊನ್ನೋರ್ ಗ್ರಮದ 21ವರ್ಷದ ಶಿವಾನಂದ ಕಬಾಡಗಿ, ಹಾಗೂ 19ವರ್ಷದ ಕುಮಾರ್ ಕಬಾಡಗಿ ಎಂದು ಗುರುತಿಸಲಾಗಿದೆ. ಇಬ್ಬರೂ ಬೆಳಗಾವಿ ಮಚ್ಛೆಯಲ್ಲಿರು ಅಶೋಕ್ ಐರನ್ ಪ್ಲ್ಯಂಟ್-3
ಕಂಪನಿಯಲ್ಲಿ ಕೆಲ ಮಾಡುತ್ತಿದ್ದರೆಂದು ತಿಳಿದುಬಂದಿದೆ. ಇನ್ನು ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಸಿಪಿಐ ಸುನೀಲ್‍ಕುಮಾರ್, ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.