ಬೆಳಗಾವಿ ನಗರದ ಸರದಾರ್ ಹೈಸ್ಕೂಲ್‌ನಲ್ಲಿ ಕೆಲ ವಿದ್ಯಾರ್ಥಿಗಳು ಹಿಜಾಬ್ ಬುರ್ಖಾ ಧರಿಸಿಯೇ ಶಾಲೆಗೆ ಬಂದಿದ್ದರು. ಇನ್ನು ಕೋರ್ಟ ಆದೇಶದಂತೆ ಶಾಲಾ ಆವರಣದ ಸ್ಟಾಫ್ ರೂಮ್‌ನಲ್ಲಿ ಹಿಜಾಬ್, ಬುರ್ಖಾ ತೆಗೆದು ಶಾಲಾ ತರಗತಿಗಳಿಗೆ ತೆರಳಿದ್ದಾರೆ
ರಾಜ್ಯಾದ್ಯಂತ ಇಂದು ಹೈಸ್ಕೂಲ್ ಶಾಲಾ ತರಗತಿಗಳು ಪ್ರಾರಂಭವಾಗಿವೆ. ಇನ್ನು ಹಿಜಾಬ್ ಹಾಗೂ ಕೇಸರಿಶಾಲು ಪ್ರಕರಣಕ್ಕೆ ಸಂಬAಧಿಸಿದAತೆ ಕೋರ್ಟ ಆದೇಶದ ಮೇರೆಗೆ ಶಾಲಾ ಸಮವಸ್ತç ಧರಿಸಿಯೇ ಶಾಲೆಗೆ ಬರಬೇಕೆಂಬ ಆದೇಶದ ಪಾಲನೆ ಕಡ್ಡಾಯವಾಗಿತ್ತು.
ರಾಜ್ಯಾದ್ಯಂತ ಇಂದು ಶಾಲೆಗಳು ಪ್ರಾರಂಭವಾದ ಹಿನ್ನೆಲೆಯಲ್ಲಿ ಬೆಳಗಾವಿಯ ಸರದಾರ ಪ್ರೌಢಶಾಲೆಯಲ್ಲಿ ಕೆಲ ವಿದ್ಯಾರ್ಥಿಗಳು ಹಿಜಾಬ್ ಧರಿಸಿಯೇ ಶಾಲೆಗೆ ಬಂದಿದ್ದರು. ಮನೆಯಿಂದ ಶಾಲೆ ಆವರಣದ ವರೆಗೂ ಹಿಜಾಬ್ ಮತ್ತು ಬುರ್ಖಾ ಧರಿಸಿಯೇ ವಿದ್ಯಾರ್ಥಿಗಳು ಬಂದಿದ್ದರು. ಇನ್ನು ಶಾಲೆ ಪ್ರವೇಶ ದ್ವಾರದಲ್ಲಿ ಮಕ್ಕಳು ಸ್ಟಾಫ್ ರೂಮನಲ್ಲಿ ಹೋಗಿ ಬುರ್ಕಾ, ಹಿಜಾಬ್ ತೆಗೆದು ಕ್ಲಾಸ್ ಗೆ ಹೋಗುತ್ತಿದ್ದಾರೆ. ಇನ್ನು ಶಾಲಾ ಗೇಟ್ ಬಳಿಯೇ ಶಾಲಾ ಸಿಬ್ಬಂದಿ ಮಕ್ಕಳನ್ನು ತಡೆದು ಬುರ್ಖಾ ಹಾಗೂ ಹಿಜಾಬ್ ತೆರದು ಶಾಲೆಯನ್ನು ಪ್ರವೇಶಿಸುವಂತೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದ್ದಾರೆ. ಈ ನಡುವೆಯೇ ಕೆಲ ವಿದ್ಯಾರ್ಥಿಗಳು ಹಿಜಾಬ್ ಧರಿಸಿಯೇ ತರಗತಿಗೆ ತೆರಳಿದ್ದಾರೆ.
ಇನ್ನು ಕೆಲ ವಿದ್ಯಾರ್ಥಿಗಳು ಬುರ್ಖಾ ಹಿಜಾಬ್ ಧರಿಸಿಯೇ ಶಾಲೆಗೆ ಬಂದ ಹಿನ್ನೆಲೆಯಲ್ಲಿ ಸರದಾರ ಶಾಲೆಗೆ ಡಿಸಿ ಎಂ.ಜಿ.ಹಿರೇಮಠ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಲೆಯ ಆವರಣದಲ್ಲಿ ಯಾವುದೇ ಗೊಂದಲ, ವಿವಾದ ಸೃಷ್ಟಿಯಾಗದಂತೆ ಜಾಗೃತ ವಹಿಸಲು, ವಿದ್ಯಾರ್ಥಿಗಳಿಗೆ ತಿಳಿ ಹೇಳಲು ಶಿಕ್ಷಕರಿಗೆ ಡಿಸಿ ಎಂ.ಜಿ.ಹಿರೇಮಠ ತಿಳಿಸಿದರು.

ಈ ಕುರಿತಂತೆ ಮಾತನಾಡಿದ ಡಿಸಿಪಿ ರವಿಂದ್ರ ಗಡಾದಿ, ನಿನ್ನೆ ಕಮಿನಶನರ್ ಆದೇಶದ ಮೇರೆಗೆ ಹಿಂದೂ ಹಾಗೂ ಮುಸಲ್ಮಾನ್ ಬಾಂಧವರನ್ನು ಕರೆಸಿ ಅವರಿಗೆ ತಿಳಿ ಹೇಳಲಾಗಿದೆ. ಇನ್ನು ಅವರೂ ಕೂಡ ಸಹಕಾರ ನೀಡುತ್ತೇನೆಂದು ತಿಳಿಸಿದ್ದಾರೆ. ನಮಮ ಸಿಬ್ಬಂದಿಗಳೂ ಸಹಿತ ಎಲ್ಲ ಶಾಲೆಗಳಲ್ಲಿ ನೇಮಕ ಮಾಡಿ

