Belagavi

ಬೆಳಗಾವಿಯ ವೈಭವ ನಗರದಲ್ಲಿ ಸಂತ ಶ್ರೀ ಸೇವಾಲಾಲರ ಮೂರ್ತಿ ಸ್ಥಾಪನೆ

Share

ಬಂಜಾರ ಸಮಾಜದ ಕುಲ ಗುರು ಸಂತ ಶ್ರೀ ಸೇವಾಲಲರ ಹಾಗೂ ಶ್ರೀ ದುರ್ಗಾದೇವಿ ಮೂರ್ತಿಯನ್ನು ಸಾಂಕೇತಿಕವಾಗಿ ಇಂದು ಬೆಳಗಾವಿಯ ಕಲ್ಮೇಶ್ವರ ನಗರ ಹಾಗೂ ನ್ಯೂ ವೈಭವ ನಗರ ತಾಂಡಾದಲ್ಲಿ ಪ್ರತಿಷ್ಠಾಪಿಸಲಾಯಿತು.

ಮೂರ್ತಿ ಸ್ಥಾಪನೆಯ ಮುಂಚೆ ಕಲ್ಲೇಶ್ವರ ನಗರದ ಹನುಮಾನ ಮಂದಿರದಿಂದ ಮೂರ್ತಿಗಳ ಮೆರವಣಿಗೆ ಸಾಗಿತು. ಮೆರವಣಿಗೆಯಲ್ಲಿ ಬಂಜಾರ ಸಮಾಜ ಸಾಂಪ್ರದಾಯಿಕ ಉಡುಗೆ ತೊಟ್ಟು ಕಳಸ ಹೊತ್ತು ಮೆರವಣಿಗೆಯಲ್ಲಿ ಮಹಿಳೆಯರು, ಯುವತಿಯರು ಹಾಗೂ ಬಾಲಕಿಯರು ಸಾಗಿದರು. ಇದೇ ವೇಳೆ ಭಜನಾ ಮಂಡಳದವರು ಮೆರವಣಿಗೆಯಲ್ಲಿ ಭಾಗ ವಹಿಸಿದ್ದು ವಿμÉೀಶವಾಗಿತ್ತು. ಕಲ್ಮೇಶ್ವರನಗರ ನ್ಯೂ ವೈಭವ ನಗರ ತಾಂಡಾದಲ್ಲಿ ಇಂದು ನಿರ್ಮಿಸಲಾದ ಸಂತ ಶ್ರೀ ಸೇವಾಲಾಲರ ದೇವಸ್ಥಾನದಲ್ಲಿ ಇದೆ ಫೆ.15 ರಂದು ನಡೆಯಲಿರುವ ಸೇವಾಲಾಲರ ಜಯಂತಿಯು ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಸ್ಥಾನ ಸಮೀತಿಯ ಸದಸ್ಯರು ತಿಳಿಸಿದ್ದಾರೆ.
ಈ ವೇಳೆ ಬೀಲಪ್ಪ ಪೂಜಾರಿ, ಪಿ ವಾಯ್ ನಾಯಕ್, ನಾಮದೇವ ರಾಠೋಡ್, ಬಿ.ಪಿ ಲಮಾಣಿ, ಬಸವರಾಜ ಪಮ್ಮಾರ, ಮಾರುತಿ ಪಮ್ಮಾರ, ಮಾರುತಿ ರಾಠೋಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Tags:

error: Content is protected !!