ಕಳೆದೆರಡು ವರ್ಷಗಳಿಂದ ಬೆಳಗಾವಿ ಜಿಲ್ಲಾಡಳಿತದ ಚುಕ್ಕಾಣಿ ಹಿಡಿದು ಅತ್ಯುತ್ತಮ ಆಡಳಿತ ನೀಡಿ ಎಲ್ಲ ಜನರ ಪ್ರೀತಿ ವಿಶ್ವಾಸ ಗೆದ್ದು ಜನ ಮೆಚ್ಚುಗೆ ಪಡೆದ ಜಿಲ್ಲಾಧಿಕಾರಿ ಎಮ್.ಜಿ.ಹಿರೇಮಠ ಎಂದು ಬೆಳಗಾವಿ ಮಾಜಿ ಮೇಯರ್ ಎನ್.ಬಿ.ನಿರ್ವಾಣಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮಂಗಳವಾರ ಡಿ.ಸಿ.ಕಚೇರಿಯಲ್ಲಿ ಮಹಾತ್ಮಾ ಗಾಂಧೀ ರಾಮತೀರ್ಥನಗರ ರಹವಾಸಿಗಳ ಸಂಘ, ಕುಂದರನಾಡ ರಹವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಸ್ನೇಹ ಸಮಾಜ ಸೇವಾ ಸಂಘ, ಮಾಳ ಮಾರುತಿ ಬಡಾವಣೆ ರಹವಾಸಿಗಳ ಸಂಘ, ವನ್ಯಜೀವಿ ಪರಿಸರ ಅಭಿವೃದ್ಧಿ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಅವರನ್ನು ಸತ್ಕರಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮೇಯರ್ ಎನ್.ಬಿ.ನಿರ್ವಾಣಿ ಬಡವ, ಶ್ರೀಮಂತರೆಂಬ ಬೇದ, ಭಾವ ತೋರದೇ ಕಚೇರಿಗೆ ಬಂದ ಎಲ್ಲರಿಗೂ ಸಮಾನಾವಕಾಶ ಒದಗಿಸಿ, ಬೆಳಗಾವಿಯ ಸ್ಮಾರ್ಟ್ ಸಿಟಿ ಯೋಜನೆಗೆ ಚುರುಕುಗೊಳಿಸಿ ನಗರ ಸೌಂದರ್ಯ ಇಮ್ಮಡಿಗೊಳಿಸಿದ್ದಾರೆ. ಇಂಥವರನ್ನು ನಮ್ಮ ಬೆಳಗಾವಿಗೆ ಕೊಟ್ಟ ಸರ್ಕಾರಕ್ಕೆ ನಮ್ಮ ಅಭಿನಂದನೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಧಿಕಾರಿಗಳು ದಸರ್ಕಾರ ಎಲ್ಲ ಸೌಲಭ್ಯಗಳನ್ನು ಕೊಡುತ್ತಿದ್ದು ಈ ದಿಸೆಯಲ್ಲಿ ನಗರ ಮತ್ತು ಜಿಲ್ಲೆಯ ಧುರೀಣರು ಮತ್ತು ಜನರ ಸಹಕಾರ ಸ್ಮರಣೀಯ ಎಂದರಲ್ಲದೆ, ಎಲ್ಲರ ಸಹಕಾರದಲ್ಲಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಹೆಜ್ಜೆ ಹಾಕೋಣ ಎಂದರು.
ಈ ವೇಳೆ ಎನ್.ಆರ್.ಲಾತೂರ, ಬಿ.ಸಿ.ಯರಗಣವಿ, ಸುರೇಶ ಉರಬಿನಹಟ್ಟಿ, ಬಸವರಾಜ ಗೌಡಪ್ಪಗೋಳ, ಡಾ.ಡಿ.ಎನ್.ಮಿಸಾಳೆ, ಪೆÇ್ರ.ಮಾರುತಿ ಕದಮ್, ಜಗದೀಶ ಮಠದ, ವಿಲಾಸ ಕೆರೂರ, ಈರಣ್ಣಾ ಕಟ್ಟಾವಿ, ವಾಯ್.ಎಸ್.ಗಡಿನಾಯಿಕ, ವ್ಹಿ.ಎ.ಗಣಾಚಾರಿ, ಎಮ್.ಟಿ.ಪಾಟೀಲ, ಬಿ.ಸಿ.ಯರಗಣವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.