Belagavi

ಬೆಳಗಾವಿಯ ರಾಮನಗರದ ಧರ್ಮನಾಥ ಜಿನ ಮಂದಿರದ 20ನೇ ವಾರ್ಷಿಕೋತ್ಸವದ ನಿಮಿತ್ಯ ಶಾಂತಿನಾಥ ಧಾರ್ಮಿಕ ವಿಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Share

ಬೆಳಗಾವಿಯ ರಾಮನಗರದಲ್ಲಿ ಜೈನ ಮಿಲನ 669ಧಮ್ನಾಥ ಜನ ಮಂದಿರ ಹಾಗೂ ಸಮ್ಯಕ್ತಮ ಮಹಿಳಾ ಮಂಡಳ ಧರ್ಮನಾಥ ಜಿನ ಮಂದಿರ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಧರ್ಮನಾಥ ಜಿನ ಮಂದಿರದ 20ನೇ ವಾರ್ಷಿಕೋತ್ಸವದ ನಿಮಿತ್ಯ ಸಮ್ಯಕ್ತಮ ಶಿರೋಮಣಿ 108 ಆಚಾರ್ಯ ಜ್ಞಾನೇಶ್ವರ ಮುನಿ ಮಹಾರಾಜ ಹಾಗೂ ಪ್ರತಿಷ್ಠಾಚಾರ್ಯ ಪಾರಿಸ ಉಪಾಧ್ಯೆ ಇವರ ನೇತೃತ್ವದಲ್ಲಿ ಶಾಂತಿನಾಥ ಧಾರ್ಮಿಕ ವಿಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಂದರ್ಭದಲ್ಲಿ ಮಾತನಾಡಿದ ಜೈನ ಮಿಲನ್ ಕಾಯ್ದರ್ಶಿಗಳಾದ ಪ್ರಕಾಶ ವಗ್ಗನ್ನರ್ ಜೈನ ಸಂಪ್ರದಾಯದಂತೆ ಮಂದಿರದಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಧರ್ಮನಗರ, ಮಹಾಂತೇಶ ನಗರ, ಆಟೋನಗರ, ಚಿಕ್ಕಬಸ್ತಿಯ ಶ್ರಾವಕ ಶ್ರಾವಕಿಯರು ಹಾಗೂ ವಿಶೇಷ ಆಸಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ವಿಜಯ ಉಪಾಧ್ಯೆ, ಪ್ರಕಾಶ ಮುಗ್ಗನ್ನವರ್, ಅನ್ನಾಸಾಬ ಉಪಾಧ್ಯೆ, ಜನಗೌಡ್ರ ಸರ್, ದರ್ಶನ ಉಪಾಧ್ಯೆ, ಸಮ್ಯಕ್ತಮ ಮಹಿಳಾ ಮಂಡಳದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

 

Tags:

error: Content is protected !!