Belagavi

ಬೆಳಗಾವಿಯ  ಅಮಾನ್ ನಗರ ಏರಿಯಾಗಳಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದೇ ಸಾರ್ವಜನಿಕರು ಪರದಾಟ

Share

ಬೆಳಗಾವಿಯ ಸಲ್ಮಾನ ಮಸೀದಿ ಹಿಂದೆ ಇರುವ ಏರಿಯಾಗಳಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದೇ ಸಾರ್ವಜನಿಕರು ಪರದಾಡುತ್ತಿದ್ದಾರೆ

ಬೆಳಗಾವಿಯ ನ್ಯೂ ಗಾಂಧೀ ನಗರ, ಅಮಾನ್ ನಗರದ ಹತ್ತಿರ ಸಲ್ಮಾನ ಮಸೀದಿ ಹಿಂದೆ ಇರುವ ರಸ್ತೆಯಲ್ಲಿ ಒಂದು ಒಳಚರಂಡಿ ಇಲ್ಲದೇ ನೀರು ರಸ್ತೆಯ ಮೇಲೆ ಹರಿದು ಬರುತ್ತಿದೆ. ಮಳೆ ಬಂದರಂತೂ ಮುಗದೇ ಹೋಯಿತು ಮನೆಯಲ್ಲಿ ನೀರು ಬರುತ್ತಿದೆ. ಇದರಿಂದ ಬೇಸತ್ತ ಜನರು ತಮ್ಮ ಸ್ವಂತ ಮನೆಯನ್ನು ಬಿಟ್ಟು ಬಾಡಿಗೆ ಮನೆಯಲ್ಲಿ ಹೋಗಿ ಇರಬೇಕಾದ ಪರಿಸ್ಥಿತಿ ಬಂದಿದೆ. ಒಳಚರಂಡಿ ನೀರು ಹರಿದು ಹೋಗುತ್ತಿರುವ ರಸ್ತೆಯಲ್ಲಿ ಮಕ್ಕಳು ಅಟವಾಡುತ್ತಿದ್ದು, ಅದೇ ರಸ್ತೆಯಲ್ಲಿ ಜನರು ಓಡಾಡುವಂತಾಗಿದೆ.

ಈಗಲಾದರೂ ಮಹಾನಗರ ಪಾಲಿಕೆ ಈ ಸಾರ್ವಜನಿಕರ ಮನವಿಗೆ ಸ್ಪಂಧಿಸುತ್ತಾ ಕಾದುನೋಡಬೇಕಿದೆ.

Tags:

error: Content is protected !!