ಹಿಜಾಬ್ ಧರಿಸಿಕೊಂಡೇ ತರಗತಿಯಲ್ಲಿ ಕುಳಿತುಕೊಳ್ಳುವುದಾಗಿ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದರೆ, ಹಿಜಾಬ್ ಧರಿಸಲು ಅವಕಾಶ ನೀಡುವುದಿಲ್ಲ ಎಂದ ಶಾಲಾ ಆಡಳಿತ ಮಂಡಳಿ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿನಿಯರು ಧರಣಿ ನಡೆಸಿರುವ ಘಟನೆ ಗೋಕಾಕ್‍ನಲ್ಲಿ ನಡೆದಿದೆ.

ಹೌದು ಗೋಕಾಕ್ ನಗರದ ಜೆಎಸ್‍ಎಸ್ ಕಾಲೇಜ್ ಮುಂದೆ ವಿದ್ಯಾರ್ಥಿಗಳು ಧರಣಿ ಆರಂಭಿಸಿದ್ದು. ಹಿಜಾಬ್‍ಗೆ ಅವಕಾಶ ನೀಡೋವರೆಗೆ ಕಾಲೇಜು ಮುಂದೆ ಧರಣಿ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ. 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಹಿಜಾಬ್ ವಿಚಾರಕ್ಕೆ ಪೆÇೀಷಕರ ನಡುವೆ ಗಲಾಟೆ ಸಂಭವಿಸಿದ ಹಿನ್ನೆಲೆ ಸ್ಥಳದಲ್ಲಿ ಬಿಗಿ ಪೆÇೀಲಿಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಇನ್ನು ಹಿಜಾಬ್ ಧರಿಸಲು ಅವಕಾಶ ನೀಡುವುದಿಲ್ಲ ಎಂದ ಶಾಲಾ ಆಡಳಿತ ಮಂಡಳಿ ಹೇಳಿದೆ. ಇದರಿಂದ ಆಕ್ರೋಶಗೊಂಡಿರುವ ವಿದ್ಯಾರ್ಥಿಗಳು ಹಿಜಾಬ್ ಧರಿಸಿಕೊಂಡೇ ತರಗತಿಯಲ್ಲಿ ಕುಳಿತುಕೊಳ್ಳುವುದಾಗಿ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್, ಪೊಲೀಸ್ ಹಿರಿಯ ಅಧಿಕಾರಿಗಳ ಭೇಟಿ ನೀಡಿ ಮನವಲಿಸಿದ್ರೂ ವಿದ್ಯಾರ್ಥಿನಿಯರು ಮಾತ್ರ ಮಣಿಯಲಿಲ್ಲ.

ವಿದ್ಯಾರ್ಥಿಗಳ ಮನವಲಿಸಲು ತಹಶೀಲ್ದಾರ್, ಪೊಲೀಸರು ಹರಸಾಹಸ ಪಟ್ಟರು. ಇನ್ನು ವಿದ್ಯಾರ್ಥಿನಿಯರಿಗೆ ಪುರುಷ ವಿದ್ಯಾರ್ಥಿಗಳು ಕೂಡ ಸಾಥ್ ಕೊಟ್ಟಿದ್ದಾರೆ. ಪ್ರತಿಭಟನಾಕಾರರಿಗೆ ಸ್ಥಳೀಯ ವಿದ್ಯಾರ್ಥಿಗಳಿಂದ ನೀರು, ಆಹಾರ, ಹಾಸಿಗೆ ಸರಬರಾಜು ಮಾಡಲಾಗಿದ್ದು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಜೆಎಸ್‍ಎಸ್ ಕಾಲೇಜು ಸುತ್ತುಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.