Belagavi

ಬೆಳಗಾವಿಯಲ್ಲಿ ರಥಸಪ್ತಮಿ ಪ್ರಯುಕ್ತ ಸಾಮೂಹಿಕ ಸೂರ್ಯನಮಸ್ಕಾರ ಕಾರ್ಯಕ್ರಮ

Share

ಬೆಳಗಾವಿ ನಗರದಲ್ಲಿ 75 ನೇ ಸ್ವಾತಂತ್ರ ಮಹೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ರಥಸಪ್ತಮಿ ಪ್ರಯುಕ್ತ ಸಾಮೂಹಿರ ಸೂರ್ಯನಮಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಕೃಷ್ಣ ವಲಯ ಬೆಳಗಾವಿ ಶಾಖೆ, ಪತಂಜಲಿ ಯೋಗ ಶಿಕ್ಷಣ ಅಧ್ಯೆಯನ ಮತ್ತು ಸಂಸೋಧನಾ ಕೇಂದ್ರ ತುಮಕೂರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ 75 ನೇ ಸ್ವಾತಂತ್ರ ಮಹೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ರಥಸಪ್ತಮಿ ಪ್ರಯುಕ್ತ ಕುಮಾರ ಗಂಧರ್ವ ರಂಗಮಂದಿರ ಆವರಣದಲ್ಲಿ ಸಾಮೂಹಿಕ ಸೂರ್ಯನಮಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಯೋಗಾಸಕ್ತರು ಸೂಯ್ನಮಸ್ಕಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿ ಕಾಂಚನ್ ಕೋಪರ್ಡೆ, ಸೂಯಧ ರಥವನ್ನೇರಿ ತನ್ನ ಪಥವನ್ನು ಬದಲಿಸುವ ಸಮಯವಾಗಿದೆ. ಹಾಗಾಗಿ ಈ ವೇಳೆ ಸೂರ್ಯನಿಂದ ಹೊರಡುವ ಕಾಸ್ಮಿಕ್ ಕಿರಣಗಳು ಅತ್ಯಂತ ಶಕ್ತಿಶಾಲಿಯಾಗಿರುತ್ತವೆ. ಹಾಗಾಗಿ ವರ್ಷಕ್ಕೆ ಬೇಕಾದ ಕಾಸಿಕ್ ಶಕ್ತಿಯನ್ನು ಪಡೆಯಬಹುದು. ಹಾಗಾಗಿ ಇಂದು ರಥಸಪ್ತಮಿ ಪ್ರಯುಕ್ತ 108 ಸೂರ್ಯನಮಸ್ಕಾರ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದರು.

ಈ ಸಂದರ್ಭದಲ್ಲಿ ಮೈತ್ರಿ ಆಫಿಸರ್ಸ್ ಕ್ಲಬ್ ಅಧ್ಯಕ್ಷರಾದ ಮೈತ್ರಿ ಬಿಸ್ವಾಸ್, ಸೂಯ್ನಮಸ್ಕಾರ ಆಯೋಜನೆ ಕುರಿತಂತೆ ಸಂತಸ ವ್ಯಕ್ತಪಡಿಸಿದರು. ಸೂರ್ಯನು ತನ್ನ ದಿಕ್ಕನ್ನು ಬದಲಿಸುವ ಈ ಸಂದರ್ಭದಲ್ಲಿ ಸೂರ್ಯನಮಸ್ಕಾರದಿಂದ ಆಗುವ ಪ್ರಯೋಜನ ಕುರಿತಂತೆ ಮಾತನಾಡಿದರು. ಇನ್ನು ಎಲ್ಲರೂ ಒಟ್ಟಾಗಿ ಸೇರಿ ಸೂರ್ಯ ನಮಸ್ಕಾರ ಹಾಕಿದ್ದಕ್ಕೆ ಸಂತೋಷವಾಗುತ್ತದೆ.

ಮನೆಯಲ್ಲಿ ಇದ್ದಾಗ ಸಾಕಷ್ಟು ಒತ್ತಡಗಳ ಮಧ್ಯೆ ಕಾರ್ಯ ಮಾಡುತ್ತಿರುತ್ತೇವೆ. ಇನ್ನು ಮನೆಯಲ್ಲಿ ಇರುವ ಎಲ್ಲರೂ ಕೂಡ ಸೇರಿ ಕಾರ್ಯ ಮಾಡಿದಾಗ ಅದರ ಸಂತೋಷವೇ ಬೇರೆ. ಹಾಗಾಗಿ ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಕ್ಕಾಗಿ ಆಯೋಜಕರಿಗೆ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವಿದ್ಯಾವತಿ ಭಜಂತ್ರಿ, ಸಿಎಆರ್ ಎಸ್‍ಪಿ ಸಿದ್ದನಗೌಡ ಪಾಟೀಲ್, ಹಾಗೂ ಅನೇಕ ಯೋಗ ಪಟುಗಳೂ ಕೂಡ ಉಪಸ್ಥಿತರಿದ್ದರು.

Tags:

error: Content is protected !!