Belagavi

ಬೆಳಗಾವಿಯಲ್ಲಿ ಪಬ್ ಹಾಗೂ ಕ್ಲಬ್‍ಗಳಲ್ಲಿ ನಡೆಯುವ ಅನೈತಿಕ ವ್ಯವಹಾರಗಳಿಗೆ ಕಡಿವಾಣ ಹಾಕಿ: ನಗರಸೇವಕ ಶಂಕರ್ ಪಾಟೀಲ್ ಆಗ್ರಹ

Share

ಬೆಳಗಾವಿ ನಗರದಲ್ಲಿ ನೈಟ್ ಕ್ಲಬ್ ಹಾಗೂ ಪಬ್‍ಗಳು ರಾತ್ರಿ 2ಗಂಟೆಯವರೆಗೂ ನಡೆಯುತ್ತಿದ್ದು ರಾತ್ರಿ ವೇಳೆಯಲ್ಲಿ ಕ್ಲಬ್ ಹಾಗೂ ಪಬ್‍ಗಳಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡ್ ನಂ7ರ ನಗರಸೇವಕ ಶಂಕರಗೌಡ ಪಾಟೀಲ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಬೆಳಗಾವಿ ನಗರದಲ್ಲಿ ಇತ್ತೀಚೆಗೆ ನೈಟ್ ಕ್ಲಬ್ ಹಾಗೂ ಪಬ್‍ಗಳು ಬೆಳಗಿನ ಜಾವ 2ಗಂಟೆಯಿಂದ 4ಗಂಟೆಯ ವರೆಗೆ ನಡೆಯುತ್ತಿವೆ ಇನ್ನು ಕೆಲವ ವೇಳೆ ಇಲ್ಲಿ ಅನೈತಿಕ ಚಟುವಟಿಕೆಗಳು ಕೂಡ ನಡೆಯುತ್ತಿವೆ. ಇತ್ತೀಚೆಗೆ ನಗರದಲ್ಲಿ ನೈಟ್‍ಕ್ಲಬ್ ಹಾಗೂ ಪಬ್‍ಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯುತ್ತಿವೆ. ಇದರಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಭಾವಿತರಾಗಿ ಇದರಿಂದ ಅನೇಕ ಅನೈತಿಕ ಚಟುವಟಿಕೆಗಳಿಗೆ ಕಾರಣವಾಗಬಹುದು. ಇವು ಮನರಂಜನೆಯ ಹೆಸರಿನಲ್ಲಿ ಯುವಕರನ್ನು ಅನೈತಿಕತೆಯತ್ತ ಕೊಂಡೊಯ್ಯುತ್ತವೆ. ಇದರಿಂದ ಅನೇಕ ಯುವಕರು ಕುಡಿತಕ್ಕೆ ದಾಸರಾಗುತ್ತಿದ್ದಾರೆ. ಹಾಗೂ ಇದರಿಂದ ಸುತ್ತಲಿನ ಪರಿಸರವೂ ಹಾಳಾಗುತ್ತಿದೆ. ಹಾಗಾಗಿ ಈ ಕುರಿತಂತೆ ಕ್ರಮ ಕೈಗೊಳ್ಳಬೇಕೆಂದು ನಮವಿ ಮಾಡಿದರು.

ಈ ವೇಳೆ ಮತನಾಡಿದ ನಗರಸೇವಕ ಶಂಕರ್ ಪಾಟೀಲ್, ಬೆಳಗಾವಿ ನಗರದಲ್ಲಿ ಪ್ರತಿದಿನ ಒಂದೊಂದು ಕ್ಲಬ್ ಹಾಗೂ ಪಬ್‍ಗಳು ತೆರೆಯುತ್ತಿವೆ. ಇವು ಬೆಳಗಾವಿಯ ಯುವಕರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿವೆ. ಕ್ಲಬ್‍ಗಳಲ್ಲಿ ಮನರಂಜನೆ ಹೆಸರಿನಲ್ಲಿ ರಾತ್ರಿ 2ಗಂಟೆಯ ವರೆಗೆ ಏನು ಬೇಕೋ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ. ಕಲಪ್ ಎಂಟ್ರಿ ಹೆಸರಿನಲ್ಲಿ ಹುಡುಗ ಹುಡುಗಿಯರನ್ನು ಫ್ರಿಯಾಗಿ ಡ್ರಿಂಕ್ಸ್ ಕೊಡುತ್ತರೆ. ಇದರಿಂದ ನಮ್ಮ ಯುವ ಸಮುದಾಯ ವ್ಯಸನಕ್ಕೆ ಅಧಿನರಾಗುತ್ತಿದ್ದಾರೆ. ಇನ್ನು ಹೋಟಲ್‍ಗಳಲ್ಲಿ ಮದುವೆಯಾಗದವರು ಹೋದರೂ ಯಾವುದೇ ದಾಖಲೆ ಪರಿಶೀಲಿಸದೇ ರೂಮ್ ನೀಡುತ್ತಿದ್ದಾರೆ. ಈ ಕುರಿತಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಒಂದು ವೇಳೆ ಜಿಲ್ಲಾಡಳಿತ ಕ್ರಮ ಕೈಗೊಳ್ಳದೇ ಇದ್ದರೆ ಬರುವ ಫೆಬ್ರುವರಿ 28ರ ನಂತರ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬೆಳಗಾವಿ ನಗರದಲ್ಲಿ ಅಕ್ರಮವಾಗಿ ತಲೆಯತ್ತುತ್ತಿರುವ ಕ್ಲಬ್ ಹಾಗೂ ಪಬ್‍ಗಳನ್ನು ನಿಯಂತ್ರಿಸುವಂತೆ ನಗರ ಸೇವಕರಾದ ಶಂಕರಗೌಡ ಪಾಟೀಲ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇನ್ನು ಈ ಕುರಿತಂತೆ ಜಿಲ್ಲಾಧಿಕಾರಿಗಳು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.

Tags:

error: Content is protected !!