Belagavi

ಬೆಳಗಾವಿಯಲ್ಲಿ ದೇಶದಲ್ಲಿಯೇ ಮೊದಲ ಸಾವಯವ ಕೃಷಿಕ ರೈತರ ಮೆಗಾ ಮಾರ್ಟ್ ಉದ್ಘಾಟನೆ-ಹಣಮಂತಗೌಡ ಜಿ.ಎಚ್

Share

ಇಂದಿನ ದಿನಮಾನಗಳಲ್ಲಿ ಕೃಷಿಯಲ್ಲಿ ರಾಸಾಯನಿಕ ಬಳಕೆ ಮಿತಿಮೀರದೆ ಇದರಿಂದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿವೆ. ಹಾಗಾಗಿ ಜನತೆಗೆ ಉತ್ತಮ ಹಾಗೂ ಶುದ್ಧ ಆಹಾರವನ್ನು ನೀಡುವ ನಿಟ್ಟಿನಲ್ಲಿ ಸಾವಯವ ಕೃಷಿ ಮೂಲಕ ಬೆಳೆದ ಆಹಾರ ಪದಾರ್ಥಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಕಾರ್ಯನ್ನು ಮಾಡುವ ನಿಟ್ಟಿನಲ್ಲಿ ಬೆಳಗಾವಿಯಲ್ಲಿ ಆಗ್ರ್ಯಾನಿಕ್ ಕೃಷಿ ಉತ್ಪನ್ನಗಳ ಮೆಗಾ ಮಾರ್ಟ್ ತೆರೆಯಲಾಗಿದೆ ಎಂದು ಸಾವಯವ ರೈತ ಸಂಘದ ರಾಜ್ಯಾಧ್ಯಕ್ಷರಾದ ಹಣಮಂತಗೌಡ ಜಿ.ಎಚ್ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿ ನಗರದಲ್ಲಿರುವ ಜನತೆಗೆ ಉತ್ತಮ ಆರೋಗ್ಯವನ್ನು ಒದಗಿಸುವ ನಿಟ್ಟಿನಲ್ಲಿ ನಾವು ಕಳೆದ 12 ವರ್ಷಗಳಿಂದ ಕಾರ್ಯ ಮಾಡುತ್ತಿದ್ದೇವೆ. ಸಾವಯವ ಕೃಷಿಯಲ್ಲಿ ಬೆಳೆದ ಬೆಳೆಗಳನ್ನು ರೈತರಿಂದ ನೇರವಾಗಿ ಖರೀದಿಸಿ ನಮ್ಮ ಗೋಕುಲ ಆಗ್ರ್ಯಾನಿಕ್ ಇಂಟರ್‍ನ್ಯಾಶನಲ್ ಎಲ್‍ಎಲ್‍ಪಿ ಕಂಪನಿಯಲ್ಲಿ ತಂದು ಉತ್ತಮವಾಗಿ ಪ್ಯಾಕಿಂಗ್ ಮಾಡಿ ಗ್ರಾಹಕರ ಮನೆಗೆ ನೇರವಾಗ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದೇವೆ. ಇದರಿಂದ ದೇಶದ ರೈತರಿಗೆ ಒಳ್ಳೆಯ ಬೆಲೆ ಹಾಗೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಆಹಾರ ಪದರ್ಥಗಳು ಲಭ್ಯವಾಗುತ್ತವೆ. ಹಾಗಾಗಿ 2022ರಿಂದ ಈ ಕಾರ್ಯವನ್ನು ಗೋಕುಲ್ ಆಗ್ರ್ಯಾನಿಕ್ ಕಂಪನಿ ಮಾಡುತ್ತದೆ ಎಂದು ಮಾಹಿತಿ ನೀಡಿದರು.

ಇನ್ನು ಈಗಾಗಲೆ ಬೆಳಗಾವಿ ನಗರದಲ್ಲಿ ಗ್ರಾಹಕರಿಗೆ ಉತ್ತಮ ದಿನಬಳಕೆ ವಸ್ತುಗಳನ್ನು ನೀಡುವ ನಿಟ್ಟಿನಲ್ಲಿ ಬೆಳಗಾವಿ ನಗರದಲ್ಲಿ ಮಳಿಗೆಯನ್ನು ಪ್ರಾರಂಭಿಸಲಾಗಿದೆ. ಇನ್ನು ಡಿಸೆಂಬರ್ ಅಂತ್ಯದ ವೇಳೆಗೆ ಪ್ರಮುಖ ಪಟ್ಟಣ ಸೇರಿದಂತೆ ವಿದೇಶಗಳಲ್ಲಿಯೂ ಕೂಡ 108 ಮೆಗಾ ಸ್ಟೋರ್‍ಗಳನ್ನು ಪ್ರಾರಂಭಿಸಲಾಗುವುದು. ಈ ಮೂಲಕ ಗ್ರಾಹಕರಿಗೆ ಉತ್ತಮ ಗುಣಮಟ್ಟದ ದಿನನತ್ಯದ ಬಳಕೆಯ ವಸ್ತುಗಳು ಸಿಗಲಿವೆ ಎಂದು ಹೆಚ್ಚಿನ ಮಾಹಿತಿ ನೀಡಿದರು.

ಇನ್ನು ಮುಂದುವರೆದು ಇಲ್ಲಿಗೆ ಬರುವ ಗ್ರಾಹಕರಿಗೆ 5ಸಾವಿರ ರೂಪಾಯಿ ವರೆಗೆ ಕ್ರೆಡಿಟ್ ಕಾರ್ಡ ನೀಡುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇದರಿಂದಾಗಿ ಗ್ರಾಹಕರಿಗೆ ಅನುಕೂಲವಾಗಲಿದೆ. ಇನ್ನು ರೈತರಿಗೆ ಬೀಜ ಹಾಗೂ ಗುಣಮಟ್ಟ ಕುರಿತಂತೆ ಕಾಳಜಿ ವಹಿಸಲಾಗುತ್ತದೆ. ಇದರಿಂದ ರೈತರು ಬೆಳೆದ ಬೆಳೆಗಳನ್ನು ನಮ್ಮ ಗೋಕುಲ ಆಗ್ರ್ಯಾನಿಕ್ ಕಂಪನಿ ವತಿಯಿಂದ ಮರಳಿ ಖರೀದಿ ಕೂಡ ಮಾಡಲಾಗುತ್ತದೆ. ಇದರಿಂದ ರೈತರಿಗೂ ಕೂಡ ಒಳ್ಳೆಯ ಬೆಲೆ ಸಿಗುತ್ತದೆ. ಹಾಗಾಗಿ ನಮ್ಮ ಬೆಳಗಾವ ನಗರದಲ್ಲಿ ಫೆಬ್ರುವರಿ 7ರಂದು ಗೋವಾವೇಸ್ ಹತ್ತಿರ 5ಸಾವಿರ ಸ್ಕ್ವೇರ್ ಫೀಟ್ ಜಾಗೆಯಲ್ಲಿ ಕರ್ನಾಟಕ ರಾಜಯದಲ್ಲಿಯೇ ಮೊದಲು ಸಾವಯವ ಕೃಷಿ ಉತ್ಪನ್ನಗಳ ಮೊದಲ ಮೆಗಾ ಮಾರ್ಟ್‍ನ್ನು ತೆರೆಯಲಾಗುತ್ತದೆ. ಹಾಗಾಗಿ ಗ್ರಾಹಕರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಮನಿ ಮಾಡಿದರು.

ಇನ್ನು ಪೆಸ್ಟಿಸೈಡ್ ಕಂಪನಿಗಳು ನಾಡಿನಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿವೆ. ಸಾವಯವ ಕೃಷಿಯಲ್ಲಿ ಕಡಿಮೆ ಇಳುವರಿ ಬರುತ್ತಿದೆ ಎಂದು ಸುಳಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಆದರೆ ಈ ವರ್ಷದ ಕಬ್ಬಿನ ಇಳುವರಿಯನ್ನು ನೋಡಿ. ಸಾಕಷ್ಟು ಪೆಸ್ಟಿಸೈಡ್‍ಗಳನ್ನು ಬಳಕೆ ಮಾಡಿದರೂ ದೇಶದ ಕಬ್ಬಿನ ಇಳುವರಿ ಕಡೆಮೆಇದೆ. ಆದರೆ ಸಾವಯವ ಕೃಷಿಯಲ್ಲಿ 60ಟನ್ ಇದೆ. ಹಾಗಾಗಿ ಸಾವಯವ ಕೃಷಿಗೆ ಪ್ರಾಧಾನ್ಯತೆ ನೀಡುವಂತೆ ಹೇಳಿದರು.
ಇನ್ನು ದೇಶದಲ್ಲಿಯೇ ಮೊದಲ ರೈತರ ಮೆಗಾ ಮಾರ್ಟ ಬೆಳಗಾವಿಯಲ್ಲಿ ಫೆಬ್ರುವರಿ 7ರಂದು ಪ್ರಾರಂಭವಾಗಲಿದೆ.

ಉತ್ತಮ ಸಾವಯವ ವಿಧಾನದಿಂದ ಬೆಳೆದ ಪದಾರ್ಥಗಳು ಬೇಕು ಎನ್ನುವವರು ಇಲ್ಲಿಗೆ ಬಂದು ಖರೀ ಮಾಡಬೇಕು. ಒಟ್ಟಾರೆ ಗ್ರಾಹಕರಿಗೆ ಉತ್ತಮ ಆರೋಗ್ಯ ಹಾಗೂ ರೈತರಿಗೆ ಒಳ್ಳೆಯ ಬೆಲೆ ಸಿಗುವ ನಿಟ್ಟಿನಲ್ಲಿ ರೈತ ನಾಯಕರೇ ಮಾಡುತ್ತಿರುವ ಈ ಕಾರ್ಯ ಮಾದರಿಯಾಗಿದೆ. ಇನ್ನು ಎಲ್ಲರೂ ಇಲ್ಲಿಗೊಮ್ಮೆ ಬೇಟಿ ನೀಡಿ ಅದರ ಮಹತ್ವವನ್ನು ತಿಳಿಯಬೇಕಿದೆ.

Tags:

error: Content is protected !!