Belagavi

ಬೆಳಗಾವಿಯಲ್ಲಿ ತಾರಕಕ್ಕೇರಿದ ಹಿಜಾಬ್ ಗಲಾಟೆ: ಸೀಮಾ ಇನಾಂದಾರ್‌ಗೆ ಜೀವ ಬೆದರಿಕೆ..!

Share

ರಾಜ್ಯಾಧ್ಯಂತ ಹಿಜಾಬ್ ಗಲಾಟೆ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಅದರಲ್ಲಿಯೂ ಬೆಳಗಾವಿಯಲ್ಲಿ ಹಿಜಾಬ್ ಪರವಾಗಿ ನಿಂತಿದ್ದ ಸಾಮಾಜಿಕ ಹೋರಾಟಗಾರ್ತಿ ಸೀಮಾ ಇನಾಂದಾರ್‍ಗೆ ಜೀವ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು ಹಿಜಾಬ್ ವಿವಾದ ಬರೀ ಪ್ರತಿಭಟನೆ, ಧರಣಿ, ತರಗತಿ ಬಹಿಷ್ಕಾರಕ್ಕೆ ಸಿಮೀತವಾಗಿಲ್ಲ. ಇದೀಗ ಕೊಲೆ ಬೆದರಿಕೆ ಮಟ್ಟಕ್ಕೂ ಬಂದು ನಿಂತಿದೆ. ಬೆಳಗಾವಿಯ ಸಾಮಾಜಿಕ ಹೋರಾಟಗಾರ್ತಿ ಸೀಮಾ ಇನಾಂದಾರ್‍ಗೆ ಅಪರಿಚಿತ ವ್ಯಕ್ತಿಯೊರ್ವ ವಾಟ್ಸಪ್ ಕಾಲ್ ಮೂಲಕ ಜೀವ ಬೆದರಿಕೆ ಹಾಕಿದ್ದಾನೆ. ಆಝಾದಿ, ಹಿಜಾಬ್ ವಿಚಾರದ ಹಿಂದೆ ಬಿದ್ರೆ ಕೊಲೆ ಮಾಡುವುದಾಗಿ ದಮ್ಕಿ ಹಾಕುವ ಜೊತೆಗೆ ಅವಾಚ್ಯ ಶಬ್ದಗಳಿಂದ ಸೀಮಾ ಇನಾಂದಾರ್‍ಗೆ ನಿಂದಿಸಿದ್ದಾನೆ. ಈ ಸಂಬಂಧ ಬೆದರಿಕೆ ಆಡಿಯೋ ಸಮೇತ ಸೈಬರ್ ಕ್ರೈಮ್ ಪೆÇೀಲಿಸರಿಗೆ ಸೀಮಾ ಇನಾಂದಾರ್ ದೂರು ನೀಡಿದ್ದಾರೆ. ಸಧ್ಯ ಈ ಬೆದರಿಕೆ ಕೇಸ್‍ನ್ನು ಮಾರ್ಕೆಟ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಸೀಮಾ ಇನಾಂದಾರ್ ಫೋನ್ ಮೂಲಕ ದಮ್ಕಿ ಹಾಕುವುದು ಬಿಟ್ಟು ಎದುರಿಗೆ ಬರಲಿ. ನನ್ನ ತಾಕತ್ತು ಏನು ಅಂತಾ ತೋರಿಸುತ್ತೇನೆ, ನಾನು ಎಲ್ಲದ್ದಕ್ಕೂ ಸಿದ್ಧಳಿದ್ದೇನೆ. ನಾನು ಹಿಜಾಬ್ ಪರ ಧ್ವನಿ ಎತ್ತುತ್ತೇನೆ ತಾಕತ್ತಿದ್ದರೆ ಬಂದು ತಡೆಯಲಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ.

ಇನ್ನು ಈ ಜೀವ ಬೆದರಿಕೆಗೆ ಸಂಬಂಧಪಟ್ಟಂತೆ ಇಮ್ರಾನ್ ಪಿರ್ಜಾದ್ ಮಾತನಾಡಿ ನಿನ್ನೆ ಹಿಜಾಬ್ ವಿಚಾರವಾಗಿ ಸೀಮಾ ಇನಾಂದಾರ್ ಅವರು ಸರ್ದಾರ್ ಕಾಲೇಜಿಗೆ ಹೋಗಿದ್ದರು. ಇದಾದ ಬಳಿಕ ರಾತ್ರಿ 9.30ರ ಸುಮಾರಿಗೆ ಕಾಲ್ ಮಾಡಿ ನಿಮ್ಮ ಜೀವವನ್ನು ತೆಗೆಯುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಇನ್ನು ನಿನ್ನೆ 12.30ರ ಸುಮಾರಿಗೆ ವೀರಭದ್ರನಗರದ ಜಿರೋ ಕ್ರಾಸ್‍ನಲ್ಲಿ ಭೀಕ್ಷೆ ಬೇಡಲು ಬಂದಿದ್ದ ಹುಡುಗರಿಗೂ ಮತ್ತು ಇದಕ್ಕೂ ಸಂಬಂಧ ಇರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಬೆದರಿಕೆ ಹಾಕಿದವರನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಒಟ್ಟಿನಲ್ಲಿ ಬೆಳಗಾವಿಯಲ್ಲಿ ಹಿಜಾಬ್ ಗಲಾಟೆ ಜೀವ ಬೆದರಿಕೆಯ ಹಂತಕ್ಕೆ ಹೋಗಿದ್ದು ದೊಡ್ಡ ವಿಪರ್ಯಾಸವೇ ಸರಿ. ಬೆಳಗಾವಿಯಲ್ಲಿ ಶಾಂತಿ ಸೌಹಾರ್ದಯುತ ವಾತಾವರಣ ನಿರ್ಮಾಣಕ್ಕೆ ಜಿಲ್ಲಾಡಳಿತ ಮತ್ತು ಸರ್ಕಾರ ಹೆಚ್ಚಿನ ಕ್ರಮ ಕೈಗೊಳ್ಳುವ ಅವಶ್ಯಕತೆಯಿದೆ.

 

 

Tags:

error: Content is protected !!