Belagavi

ಬೆಳಗಾವಿಯಲ್ಲಿ ಅಂಬೇಡ್ಕರ್ ಬ್ಯಾನರ್ ಕಟ್: ದಲಿತ ನಾಯಕರ ಖಂಡನೆ

Share

ಬೆಳಗಾವಿಯ ಸರಕಾರಿ ಪೆÇಲಿಟೆಕ್ನಿಕಲ್ ಕಾಲೇಜಿನ ಆಟೋ ರಿಕ್ಷಾ ನಿಲ್ದಾಣದ ಮುಂದೆ ಇರುವ ಅಂಬೇಡ್ಕರ್‍ರವರ ಬ್ಯಾನರ್ ಹರಿದಿದ್ದು, ಇದು ಕಿಡಿಗೇಡಿಗಳ ಕೃತ್ಯ ಎಂದು ದಲಿತ ಸಂಘಟನೆಗಳು ಕಿಡಿಕಾರಿವೆ.

ಹೌದು ಬೆಳಗಾವಿಯ ಸರಕಾರಿ ಪೆÇಲಿಟೆಕ್ನಿಕಲ್ ಕಾಲೇಜಿನ ಆಟೋ ರಿಕ್ಷಾ ನಿಲ್ದಾಣದ ಮುಂದೆ ಮಹಾನಾಯಕ್ ಡಾ ಬಿ.ಆರ್. ಅಂಬೇಡ್ಕರ್ ಅವರ ಭಾವ ಚಿತ್ರ ಉಳ್ಳ ಬ್ಯಾನರ್‍ಗಳನ್ನು ಹಾಕಲಾಗಿತ್ತು. ಆದರೆ ಅದರಲ್ಲಿ ಒಂದು ಬ್ಯಾನರ್ ಹರಿದಿದ್ದು ಇದು ದಲಿತ ಸಂಘಟನೆಗಳ ಆಕ್ರೋಪಶಕ್ಕೆ ಕಾರಣಾವಿದೆ. ಯಾರೋ ಕಿಡಿಗೇಡಿಗಳು ಬ್ಯಾನರ್ ಹರಿದು ಹಾಕಿದ್ದಾರೆ. ಹಿಂಥವರಿಗೆಮ ಕಠಿಣ ಶಿಕ್ಷೆ ಆಗುವರೆಗೆ ಬಿಡುವದು ಬೇಡ ಎಂದು ಅಂಬೇಡ್ಕರ್ ಯುವ ಮಂಚ ಸಂಘಟನೆ ವತಿಂದ ದಲಿತರ ಶಕ್ತಿ ಏನೆಂದು ತೋರಿಸೋಣ ಎಂದು ಸೋಮವಾರ ನಗರದ ಚನ್ನಮ್ಮ ಸರ್ಕಲ್ ಮುಂದೆ ಪ್ರತಿಭಟನೆ ನಡೆಸುವ ವಿಚಾರವನ್ನು ವ್ಯಕ್ತಪಡಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಈ ಕಾರ್ಯವನ್ನು ಯಾರೂ ಮಾಡಿಲ್ಲ. ಅಂಬೇಡ್ಕರ್‍ರವರ ಭಾವಚಿತ್ರದ ಬ್ಯಾನರ್ ಪಕ್ಕದಲ್ಲಿ ಮರವಿದೆ. ಗಾಳಿಗೆ ಅದರ ಕೊಂಗೆ ತಾಕಿ ಹರಿದಿರಬೇಕು. ಹರಿದ ಬ್ಯಾನರ್ ಪಕ್ಕದಲ್ಲಿ ಇನ್ನೊಂದು ಅಂಬೇಡ್ಕರ್ ಬ್ಯಾನರ್ ಇದೆ. ಅದು ಚೆನ್ನಾಗಿದೆ. ಹಾಗಾಗಿ ಇದು ಆಕಸ್ಮಿಕವಾಗಿ ನಡೆದ ಘಟನೆ ಎಂದು ದಲಿತ ಸಂಘಟನೆಗಳ ನಾಯಕರಿಗೆ ತಿಳಿ ಹೇಳಿದರು. ಇನ್ನು ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಸಧ್ಯ ಪೊಲೀಸರು ಪರೀಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

Tags:

error: Content is protected !!