Chikkodi

ಬೆಲೆ ಕುಸಿತ ಹಿನ್ನಲೆ,ಮೆಂತ್ಯೆ ಬೆಳೆ ನಾಶಪಡಿಸಿದ ರೈತ

Share

ಮೆಂತ್ಯೆ ಬೆಳೆಯ ಬೆಲೆ ಕುಸಿತ ಹಿನ್ನಲೆ ಸುರೇಶ ಪಾಟೀಲ ಎನ್ನುವ ರೈತ ಟ್ರ್ಯಾಕ್ಟರ್ ಬಳಸಿ ಎರಡು ಎಕರೆ ಮೆಂತ್ಯೆ ಬೆಳೆ ನಾಶಪಡಿಸಿದ ಘಟನೆ ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮದಲ್ಲಿ ನಡೆದಿದೆ‌.

ರೈತ ಸುರೇಶ ನರಸಗೌಡ ಪಾಟೀಲ ಎಂಬ ರೈತ ಎರಡು ಎಕರೆ ಜಮೀನಿನಲ್ಲಿ ಮೆಂತ್ಯೆ ಬೆಳೆ ಬೆಳೆದಿದ್ದ. ಆದರೆ ಸಮರ್ಪಕ ಬೆಲೆ ಸಿಗದೇ ಕಂಗಾಲಾಗಿದ್ದನು. ಒಂದು ಸೂಡು ಮೆಂತ್ಯೆ ೧-೩ ರೂಪಾಯಿವರೆಗೆ ಮಾರುಕಟ್ಟೆಯಲ್ಲಿ ಕೇಳುತ್ತಿರುವ ಹಿನ್ನೆಲೆ, ಬೇಸತ್ತು ರೈತ ನರಸಗೌಡ ಪಾಟೀಲ ಅವರು ಸಂಪೂರ್ಣವಾಗಿ ರೂಟರ್ ಬಳಸಿ ಮೆಂತ್ಯೆ ಬೆಳೆಯನ್ನು ನಾಶಪಡಿಸಿದ್ದಾರೆ.


ಎರಡು ಎಕರೆಗೆ ೭೦-೮೦ ಕೆಜಿ ಮೆಂತ್ಯೆ ಕಾಳು ಹೊಲದಲ್ಲಿ ಹಾಕಿ, ಉತ್ತಮ ಮೆಂತೆಯನ್ನು ಬೆಳದಿದ್ದರು.ಆದರೆ ಉತ್ತಮವಾದ ಬೆಳೆಗೆ ಸರಿಯಾದ ಬೆಲೆ ಸಿಗದೇ ಇರುವುದರಿಂದ ರೈತ ನರಸಗೌಡಯವರು ಮೆಂತೆ ಬೆಳೆಯನ್ನು ನಾಶಪಡಿಸಿದ್ದಾನೆ…

Tags:

error: Content is protected !!