State

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ

Share

ದೆಹಲಿಯಲ್ಲಿ ನಾಳೆ ಸಂಸತ್ ಸದಸ್ಯರ ಸಭೆ ಇದೆ. ಹಾಗಾಗಿ ಹಲವು ಜನ ಸಂಸದರ ಮನವಿಯ ಮೇರೆಗೆ ನನ್ನ ದೆಹಲಿ ಪ್ರವಾಸವನ್ನು ಸೋಮವಾರಕ್ಕೆ ಮುಂದೂಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಕೆಲ ಮಹತ್ವದ ವಿಚಾರಗಳನ್ನು ಕುರಿತಂತೆ ಪಕ್ಷದ ವರಿಷ್ಟರೊಂದಿಗೆ ಚರ್ಚೆ ಮಾಡುವುದಿದೆ. ಹಾಗಾಗಿ ನಾಳೆ ದೆಹಲಿಗೆ ಹೋಗುವ ವಿಚಾರ ಮಾಡಿದ್ದೆ. ಆದರೆ ದೆಹಲಿಯಲ್ಲಿ ನಾಳೆ ಸಂಸತ್ ಸದಸ್ಯರ ಸಭೆ ಇದೆ, ಹಾಗಾಗಿ ಕೆಲ ಸಂಸದರು ನನಗೆ ಮನವಿ ಮಾಡಿದ್ದಾರೆ. ಹಾಗಾಗಿ ದೆಗಲಿ ಪ್ರವಾಸವನ್ನು ಸೋಮವಾರ ಕೈಕೊಳ್ಳುವುದಾಗಿ ತಿಳಿಸಿದ್ದಾರೆ.

Tags:

error: Content is protected !!