ಬೇಡಕಿಹಾಳ -ಗಳತಗಾ ಈ ರಸ್ತೆಯ ಮಾರ್ಗದಲ್ಲಿ ಸುಬೇದಾರ ತೋಟದ ಬೋರ್ ವೆಲ್ ಪಂಪ್ ಸೆಟ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಹೊತ್ತಿಕೊಂಡ ಬೆಂಕಿಯಿಂದ 12 ಎಕರೆ ಕಬ್ಬಿನ ಬೆಳೆ ಹಾನಿಯಾಗಿದೆ. ಬಾಪೂಸಾಬ ಸುಭೇದಾರ, ಪ್ರಭಾಕರ ಸುಭೇದಾರ, ಉತ್ತಮ ಸುಭೇದಾರ, ಕುಮಾರ ಸುಭೇದಾರ, ಸುರೇಶ, ಸುಭೇದಾರ, ದೀಪಕ ಸುಭೇದಾರ, ದಿಲೀಪ ಸುಭೇದಾರ, ದಾದಾ ಸುಭೇದಾರ, ಸುಭೇದಾರ, ಅಶೋಕ ಸುಭೇದಾರ, ದಕುಮಾರ ಪಾಟೀಲರ, ದೀಪಕ ಸುಬೇದಾರ ಅವರಿಗೆ ಸೇರಿದ ಕಬ್ಬನ ಬೆಳೆ ಬೆಂಕಿಗೆ ಆಹುತಿಯಾಗಿದೆ.
ಸ್ಥಳೀ ಯರು ಹಾಗೂ ಸದಲಗಾ ಅಗ್ನಿಶಾಮಕ ಠಾಣೆ ಸಿಬ್ಬಂದಿ ಬೆಂಕಿ ನಂದಿಸಿದರು.ಸದಲಗಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.