State

ಬುರ್ಖಾನೂ ತೆಗೆಸಬಾರದು, ಹಿಜಾಬ್ ಕೂಡ ತೆಗೆಸಬಾರದು: ಸರ್ಕಾರಕ್ಕೆ ಡಿಕೆಶಿ ಆಗ್ರಹ

Share

ಎಲ್ಲರೂ ಸೇರಿ ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡೋಣ. ಕೋರ್ಟ್ ಆದೇಶವನ್ನು ಎಲ್ಲರೂ ಪಾಲಿಸೋಣ. ದೇಶದ ಸಂಸ್ಕøತಿ ಅವರ ಧರ್ಮ ಕಾಪಾಡಿಕೊಳ್ಳುವುದು. ಬುರ್ಖಾನೂ ತೆಗೆಸಬಾರದು, ಹಿಜಾಬ್ ಕೂಡ ತೆಗೆಸಬಾರದು. ಮೊದಲಿನಿಂದ ಹೇಗೆ ಬರುತ್ತಿದ್ದಾರೋ ಹಾಗೆಯೇ ಬಿಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

: ವಿಧಾನಸೌಧದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಜೊತೆಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ.ಶಿವಕುಮಾರ್ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಈ ದೇಶದ ಸಂವಿಧಾನದಲ್ಲಿ ಹಕ್ಕಿದೆ. ಉಚಿತ ಮತ್ತು ಕಡ್ಡಾಯದ ಹಕ್ಕಿದೆ. ಅವರವರ ಧರ್ಮದ ಬಗ್ಗೆ ಎಲ್ಲರಿಗೂ ಅವಕಾಶ ಇದೆ. ಸಮವಸ್ತ್ರ ವಿಚಾರದಲ್ಲಿ ಯಾರಿಗೂ ನಿಬರ್ಂಧ ಇರಲಿಲ್ಲ. ಫೆಬ್ರವರಿ 5ರವರೆಗೆ ಯಾವುದೇ ಗೈಡ್‍ಲೈನ್ಸ್ ಕೂಡ ಇರಲಿಲ್ಲ. ಗೈಡ್‍ಲೈನ್ಸ್ ಹೊರಡಿಸುವ ಪ್ರಶ್ನೆ ಹುಟ್ಟುಕೊಂಡಿದ್ದು ಹೇಗೆ ಎಂದು ಪ್ರಶ್ನಿಸಿದರು. ಈಗ ಮೂಲಭೂತ ಹಕ್ಕಿಗೆ ತೊಂದರೆ ಬಂದಿದೆ. ಶಾಲಾ ಅಭಿವೃದ್ಧಿ ಸಮಿತಿಗಳು ಎಲ್ಲೆಲ್ಲಿ ಇವೆ ಎಂದು ಹೇಳಲಿ. ಸರ್ಕಾರ ಹೇಳದೆ ಕೋರ್ಟ್ ಆದೇಶ ವಿರುದ್ಧ ಅಧಿಕಾರಿ ಸುತ್ತೋಲೆ ಹೊರಡಿಸುವುದಿಲ್ಲ. ಪೆÇಲೀಸರಿಗೆ, ಶಾಲೆಗಳಿಗೆ ಏನು ಸಂಬಂಧವೆಂದು ಡಿಕೆಶಿ ಪ್ರಶ್ನೆಗಳ ಸುರಿಮಳೆಗೈದರು.

ವಿದ್ಯಾರ್ಥಿಗಳನ್ನು ಶಾಲೆಗೆ ಹೋಗದಂತೆ ತಡೆಯುವ ಹಕ್ಕಿದ್ಯಾ..? ರಾಜ್ಯದಲ್ಲಿ ಕೇವಲ ಶಾಂತಿ ಮಾತ್ರ ಕದಡುವ ಕೆಲಸ ಮಾಡ್ತಿಲ್ಲ. ಮುಂದಿನ ದಿನಗಳಲ್ಲಿ ಹೂಡಿಕೆದಾರರು ರಾಜ್ಯಕ್ಕೆ ಬರುವುದಿಲ್ಲ. ಆರ್ಥಿಕತೆ ಅಭಿವೃದ್ಧಿಗೆ ದೊಡ್ಡ ಹೊಡೆತ ಬೀಳುತ್ತದೆ. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಕೂಡ ಸೃಷ್ಟಿಯಾಗುತ್ತದೆ. ಸಿಎಂ ಬಸವರಾಜ ಬೊಮ್ಮಾಯಿ ನೆನೆಪಿನಲ್ಲಿಟ್ಟುಕೊಳ್ಳಬೇಕು. ಸರ್ಕಾರ ಎಲ್ಲರಿಗೂ ವಿದ್ಯಾಭ್ಯಾಸವನ್ನು ನೀಡಬೇಕು. ವಿದ್ಯಾಭ್ಯಾಸದಲ್ಲಿ ರಾಜಕಾರಣವನ್ನು ತರಬಾರದು. ರಾಜ್ಯ ಸರ್ಕಾರಕ್ಕೆ ಸಹಕಾರ ನೀಡಲು ನಾವು ಸಿದ್ಧರಿದ್ದೇವೆ. ಎಲ್ಲರೂ ಸೇರಿ ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡೋಣ. ಕೋರ್ಟ್ ಆದೇಶವನ್ನು ಎಲ್ಲರೂ ಪಾಲಿಸೋಣ. ದೇಶದ ಸಂಸ್ಕøತಿ ಅವರ ಧರ್ಮ ಕಾಪಾಡಿಕೊಳ್ಳುವುದು ಎಂದರು.

ನಿನ್ನೆ ನಡೆದ ಘಟನೆ ಬಗ್ಗೆ ನನಗೆ ಯಾವುದೇ ರಿಗ್ರೆಟ್ ಇಲ್ಲ. ಬಚ್ಚಲಬಾಯಿ ಈಶ್ವರಪ್ಪ ರಾಷ್ಟ್ರದ್ರೋಹಿ ಎಂದು ಒಪ್ಪಿಕೊಂಡಿದ್ದಾನೆ. ಸಚಿವ ಈಶ್ವರಪ್ಪ ಅವರನ್ನು ಪಕ್ಷ ಸಮರ್ಥನೆ ಮಾಡಿದೆ. ಸ್ಪೀಕರ್ ಸಹ ರಾಜಕೀಯ ಪ್ರತಿನಿಧಿ ರೀತಿ ವರ್ತಿಸುತ್ತಿದ್ದಾರೆ. ಈಗಲೂ ಹೇಳುತ್ತಿದ್ದೇನೆ ಈಶ್ವರಪ್ಪ ದೊಡ್ಡ ರಾಷ್ಟ್ರದ್ರೋಹಿ. ಹರಕುಬಾಯಿ ಈಶ್ವರಪ್ಪನಿಗೆ ಉತ್ತರ ಕೊಡಲು ಇಷ್ಟವಿಲ್ಲ ಎಂದು ಹರಿಹಾಯ್ದರು.

ಮೊದಲು ರಾಜೀನಾಮೆ ಕೊಟ್ಟು ಹೋಗು ಎಂದು ಹೇಳ್ತೀನಿ. ಈಶ್ವರಪ್ಪ ಏನೇನೋ ನಮ್ಮಪನ ಬಗ್ಗೆ ಮಾತನಾಡಿದ್ದಾನೆ. ನಮ್ಮಪ್ಪ ಮೇಲಿದ್ದಾನೆ ನಮ್ಮ ತಂದೆಯನ್ನ ಭೇಟಿಯಾಗಲಿ. ನಾನು ಆಡುಭಾμÉಯಲ್ಲಿ ಹೇಳಿದ್ದೇ ಎಂಬ ಈಶ್ವರಪ್ಪ ಹೇಳಿಕೆಗೆ ನಾನು ಕೂಡ ಆಡುಭಾμÉಯಲ್ಲೇ ಈಶ್ವರಪ್ಪನಿಗೆ ಹೇಳ್ತಿದ್ದೇನೆ. ಬಚ್ಚಲುಬಾಯಿ ಈಶ್ವರಪ್ಪ ಎಂದು ಆಡುಭಾμÉಯಲ್ಲೇ ಹೇಳಿದ್ದು ಎಂದು ಸಚಿವ ಈಶ್ವರಪ್ಪ ವಿರುದ್ಧ ಏಕಚವನದದಲ್ಲಿಯೇ ಡಿಕೆಶಿ ವಾಗ್ದಾಳಿ ಮಾಡಿದರು.

Tags:

error: Content is protected !!