ಕಾಂಗ್ರೆಸ್‍ನವರಿಗೆ ಮಾತನಾಡುವ ನೈತಿಕತೆಯೇ ಇಲ್ಲ. ವಜಾ ಮಾಡೋದಾದ್ರೆ ಕಾಂಗ್ರೆಸ್ ಅವರನ್ನೇ ಮಾಡಬೇಕು ಎಂದು ಕಂದಾಯ ಸಚಿವ ಆರ್.ಅಶೋಕ ವಾಗ್ದಾಳಿ ಮಾಡಿದ್ದಾರೆ.

ಬೆಂಗಳೂರಿನ ವಿಧಾನಸೌಧ ಬಳಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಆರ್.ಅಶೋಕ್ ಕೋಳಿನಾ ಕೇಳಿ ಖಾರ ಅರಿಯೋ ಅಭ್ಯಾಸ ಬಿಜೆಪಿಗಿಲ್ಲ. ವಜಾ ಮಾಡುವುದಾದರೆ ಕಾಂಗ್ರೆಸ್ ಅವರನ್ನು ವಜಾ ಮಾಡಬೇಕು. ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಭಯೋತ್ಪಾದಕರು ಬಾವುಟ ಹಾರಿಸಿ ಎಂದಾಗ ಇವರು ಎಲ್ಲಿದ್ದರು..? ಇದು ಕಾಂಗ್ರೆಸ್ ಅವರ ರಾಜಕೀಯ ಮೇಲಾಟ ಅμÉ್ಟ. ಧರಣಿ ಮಾಡಲಿ, ನಮಗೆ ಏನೂ ತೊಂದರೆ ಇಲ್ಲ. ಮೋದಿ ಬಂದ ಮೇಲೆ ಇವರು ಎಲ್ಲಾ ಕಡೆ ನಿದ್ದೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಇನ್ನು ಸಚಿವ ಈಶ್ವರಪ್ಪ ಮಾತಾನಾಡಿರುವ ಪೂರ್ತಿ ವಿಷಯದಲ್ಲಿ ರಾಷ್ಟ್ರ ಧ್ವಜಕ್ಕೆ ಯಾರಾದರೂ ಅಗೌರವ ತೋರಿಸಿದರೆ ಅವರು ದೇಶದ್ರೋಹಿಗಳು ಎಂದು ಹೇಳಿದ್ದಾರೆ. ಇದರಲ್ಲಿ ಈಶ್ವರಪ್ಪ ಅವರ ಪಾತ್ರ ಏನಿಲ್ಲ. ಆದರೆ ಕಾಂಗ್ರೆಸ್ ಅವರು ಪ್ರಚಾರ ತೆಗೆದುಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ಅಲ್ಪ ಸಂಖ್ಯಾತರ ಓಲೈಕೆಗೆ ಕಾಂಗ್ರೆಸ್ ಮುಂದಾಗಿದೆ. ಇದೆಲ್ಲಾ ನಾಟಕ, ಶೋ ಎಂದು ಕುಮಾರಸ್ವಾಮಿಯೇ ಹೇಳಿದ್ದಾರೆ. ನಿನ್ನೆ ಕಾಂಗ್ರೆಸ್ ನಾಯಕರು ಗೂಂಡಾಗಳಂತೆ ವರ್ತಿಸಿದ್ದಾರೆ ಎಂದು ಕಿಡಿಕಾರಿದರು.
ಎಲ್ಲಾ ಕಡೆ ಕಾಂಗ್ರೆಸ್ ಖಾಲಿ ಆಗುತ್ತಿದೆ. ಬಿಜೆಪಿ ಇಲ್ಲ ಅಂದಿದ್ದರೆ ಕಾಂಗ್ರೆಸ್ ಭಾರತ್ ಮಾತಾ ಕಿ ಜೈ ಎನ್ನುತ್ತಿರಲಿಲ್ಲ. ಇವರಿಗೆ ಇಟಲಿ ಮೇಲೆ ತುಂಬಾ ಆಸೆ. ಇಟಲಿಯವರು ಏನ್ ಹೇಳುತ್ತಾರೋ ಅದನ್ನು ಕೇಳುತ್ತಾರೆ. ಜೊತೆಗೆ ಅಲ್ಪಸಂಖ್ಯಾತರ ಓಲೈಕೆ ಮಾಡುವುದμÉ್ಟೀ ಅವರಿಗೆ ಗೊತ್ತು. ಮಹಾತ್ಮ ಗಾಂಧೀಜಿ ಇದ್ದಾಗ ಇದ್ದಿದ್ದು ಬೇರೆ ಕಾಂಗ್ರೆಸ್. ಈಗ ಇರುವುದು ನಕಲಿ ಕಾಂಗ್ರೆಸ್. ಸ್ವಾತಂತ್ರ್ಯ ಹೋರಾಟದಲ್ಲಿದ್ದ ಕಾಂಗ್ರೆಸ್‍ಗೂ ಈಗಿನ ಕಾಂಗ್ರೆಸ್‍ಗೂ ಯಾವುದೇ ಸಂಬಂಧ ಇಲ್ಲ ಎಂದು ಸಚಿವ ಆರ್.ಅಶೋಕ್ ಕಿಡಿಕಾರಿದರು.