ಬಸವನ ಕುಡಚಿಯಲ್ಲಿ ಸೂತನವಾಗ ನಿರ್ಮಿಸಿದ ಮರಗಾಯಿ ದೇವಿ ದೇವಸ್ಥಾನದಲ್ಲಿ ಮರಗಾಯಿ ಮಾತಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬಸವನ ಕುಡಚಿಯ ದೇವರಾಜ್ ಅರಸ್ ಕಾಲೋನಿಯಲ್ಲಿರುವ ಪುರಾತನ ಪ್ರಾಚೀನ ಮರಗಾಯಿ ದೇವಸ್ಥಾನವನ್ನು ತೆರವುಮಾಡಿ, ಅಲ್ಲಿ ಹೊಸ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಇಂದು ಮಂಗಳವಾರ ದೇವಸ್ಥಾನ ಗೃಹಪ್ರವೇಶ ಮಾಡಿ ಮೂರ್ತಿ ಪ್ರತಿμÁ್ಠಪನೆ ಮಾಡಲಾಯಿತು. ಬೆಳಗ್ಗೆ 7 ಗಂಟೆಗೆ ಕಲಮೇಶ್ವರ ಬಸವೇಶ್ವರ ದೇವಸ್ಥಾನದಿಂದ ಗ್ರಾಮದ ಪಂಚರ ಕೈಯಿಂದ ಕಲಶ, ಹಾಗೂ ಮರಗಾಯಿ ಮಾತಾ ಮೂರ್ತಿ ಮೆರವಣಿಗೆ ಆರಂಭಗೊಂಡಿತು. ಶ್ರೀಮತಿ ಸರೋಜಾ ಚೌಗುಲೆ, ರಾಜಕುಮಾರ ಪಾಟೀಲ, ಶ್ರೀಮತಿ ವಿಲಾಸಮತಿ ಪಾಟೀಲ್ ಅವರಿಂದ ಹೋಮಹವನ ನಡೆದು ನಂತರ ಶಿಖರ ಏರಲಾಯಿತು. ವಿಠ್ಠಲ ರಖುಮಾಯಿ ಗಲ್ಲಿ, ಮುಖ್ಯ ರಸ್ತೆ, ಬಸ್ತಿ ಗಲ್ಲಿ, ಬಸವನ ಗಲ್ಲಿ, ಗಾಂಧಿ ಗಲ್ಲಿಯಿಂದ, ಮರಗಾಯಿ ದೇವಸ್ಥಾನಕ್ಕೆ ಮೆರವಣಿಗೆ ತಲುಪಿತು. ಇನ್ನು ಜಾತ್ರಾ ಮಹೋತ್ಸವಕ್ಕೆ ಮುತಗಾ, ಸುಳೇಭಾವಿ ಕ್ಷೇತ್ರದ ಸಹಸ್ರಾರು ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿ ಪುನೀತರಾದರು.
ಈ ಸಂದರ್ಭದಲ್ಲಿ ಪಂಚ ಕಮಿಟಿಯ ಸದಸ್ಯರು ಮಾತನಾಡಿ, ಜನರ ಸಹಕಾರದಿಂದ ಜಾತ್ರಾ ಕಾರ್ಯಕ್ರಮ ಯಶಸ್ವಿಯಾಗಿದೆ. ಇನ್ನು ಜಾತ್ರಾ ಕಾರ್ಯಕ್ರಮ ನಡೆಯಲು ಕಾರಣರಾದ ತಮ್ಮೆಲ್ಲರಿಗೂ ಧನ್ಯವಾದ ಎಂದರು.
ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ, ಕಾಪೆರ್Çರೇಟರ್ ಬಸವರಾಜ ಮೊದ್ಗೇಕರ, ದೇವಸ್ಥಾನದ ಅಧ್ಯಕ್ಷ ಅಪುಣಿ ಚೌಗುಲೆ, ಉಪಾಧ್ಯಕ್ಷ ಅನಿಲ ಚೌಗಲೆ, ನಾಗೇಶ ಸ್ವಾಮಿ ದಿವಟೆ, ಪಂಚಕಮಿಟಿಯವರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.