Chikkodi

ಬದಲಾವಣೆ ಬೆಳಕು ಫೌಂಡೇಶನ್‍ನಿಂದ ಬಡ ಮಕ್ಕಳಿಗೆ ಪುಸ್ತಕ ವಿತರಣೆ

Share

ಬೆಳಗಾವಿಯ ಬದಲಾವಣೆ ಬೆಳಕು ಫೌಂಡೇಶನ್ ವತಿಯಿಂದ ಬಡ ಮಕ್ಕಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಚಿಕ್ಕೋಡಿ ತಾಲೂಕಿನ ನಾಗರಾಳ ಗ್ರಾಮದಲ್ಲಿ ಬದಲಾವಣೆ ಬೆಳಕು ಫೌಂಡೇಶನ್ ವತಿಯಿಂದ ಬಡ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಪುಸ್ತಕ ವಿತರಣೆ ಬಳಿಕ ಮಾತನಾಡಿದ ಡಾ.ತುಷಾರ್ ಪಾಟೀಲ್ ಬದಲಾವಣೆ ಬೆಳಕು ಫೌಂಡೇಶನ್‍ನಿಂದ ಗ್ರಾಮ, ರೈತರು, ವಿದ್ಯಾರ್ಥಿಗಳಿಗೆ ಸಾಕಷ್ಟು ಸಹಾಯ ಸಹಕಾರ ಕೊಡಲಾಗುತ್ತಿದೆ. ಅದೇ ರೀತಿ ಬಡ ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಜವಾಬ್ದಾರಿಯನ್ನು ನಮ್ಮ ಫೌಂಡೇಶನ್ ತೆಗೆದುಕೊಳ್ಳುತ್ತಿದೆ. ಹೀಗಾಗಿ ನಮ್ಮ ಈ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.

ನಂತರ ಡೇನಿಯಲ್ ಗುಂಟು ಮಾತನಾಡಿ ಇನ್ನೊರ್ವ ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ರೈತರಿಗೂ ಕೂಡ ಬದಲಾವಣೆ ಬೆಳಕು ಫೌಂಡೇಶನ್ ಎಲ್ಲ ರೀತಿಯ ನೆರವು ನೀಡುತ್ತಿದೆ. ಇನ್ನು ಡಾ.ತುಷಾರ್ ಪಾಟೀಲ್ ಅವರು ವರ್ಷ ಇಡೀ ನೀವು ಎಷ್ಟು ಮಕ್ಕಳನ್ನು ಕೊಟ್ಟರೂ ಕೂಡ ಆ ಮಕ್ಕಳಿಗೆ ಎಲ್ಲ ರೀತಿಯ ಸಹಾಯ ಮಾಡಲು ಸಿದ್ಧ ಎಂದು ಎಂದು ಭರವಸೆ ಕೊಟ್ಟಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಬದಲಾವಣೆ ಬೆಳಕು ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಹಿರಟ್ಟಿ, ರೂಪಾಲಿ ಬಾರಿಗಡ್ಡಿ, ಗೀತಾ ಹಿರಟ್ಟಿ, ದೀಪಾಲಿ ಬಾಣಸೋಡೆ, ನೀತಾ, ಸುಶ್ಮಿತಾ ಸೇರಿದಂತೆ ನಾಗರಾಳ ಗ್ರಾಮಸ್ಥರು ಉಪಸ್ಥಿತರಿದ್ದರು.

Tags:

error: Content is protected !!