ನನಗೆ ಈಶ್ವರಪ್ಪ ರಾಜೀನಾಮೆ ಬೇಡ, ವಜಾ ಮಾಡಿ. ಬಚ್ಚಲ ಬಾಯಿ ಈಶ್ವರಪ್ಪನನ್ನು ವಜಾ ಮಾಡಬೇಕು. ರಾಜ್ಯಪಾಲರು, ಸಿಎಂ ಈಶ್ವರಪ್ಪನನ್ನು ಡಿಸ್‍ಮಿಸ್ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಬೆಂಗಳೂರಿನ ವಿಧಾನಸೌಧ ಬಳಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ರಾಜೀನಾಮೆ ಎನ್ನುವ ಪದ ಬಹಳ ಗೌರವ ಇರುವಂತಹದು. ರಾಜೀನಾಮೆ ಎಂದರೆ ಲಾಲ್‍ಬಹದ್ದೂರ್ ಶಾಸ್ತ್ರಿ ಕೊಟ್ಟಿದ್ದು. ದೊಡ್ಡ ದೊಡ್ಡವರು ದೇಶಕ್ಕೋಸ್ಕರ ತ್ಯಾಗ ಮಾಡಿದ್ದು. ನಮ್ಮ ಇಲಾಖೆಯಲ್ಲಿ ಏನೋ ತಪ್ಪಾಗಿದೆ, ಆಕ್ಸಿಡೆಂಟ್ ಆಗಿದೆ, ಸಾವಾಗಿದೆ ಎಂದು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡ್ತಿದ್ರು. ಹೀಗಾಗಿ ಈಶ್ವರಪ್ಪನನ್ನು ವಜಾ ಮಾಡಬೇಕು, ಕೇಸ್ ಹಾಕಬೇಕು. ಇಡೀ ಬಿಜೆಪಿ ಪಾರ್ಟಿಯೇ ಅವನು ದೊಡ್ಡ ಆಸ್ತಿ ಎಂದು ಸ್ವೀಕರಿಸಿದ್ದಾರೆ ಎಂದು ಕಿಡಿಕಾರಿದರು.