State

ಫೆಬ್ರುವರಿ 14ರಂದು ಕಾಂಗ್ರೆಸ್‍ಗೆ ಗುಡ್ ಬೈ ಹೇಳುತ್ತಾರಂತೆ ಸಿಎಂ ಇಬ್ರಾಹಿಂ

Share

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ್ದು ಮುಗಿದುಹೋದ ಅಧ್ಯಾಯ. ಅವರು ಏನಿದ್ದರೂ ಇನ್ನು ರಾಜ್ಯದಲ್ಲಿ ಥರ್ಡ್ ಫೋರ್ಸ್. ಆಡಳಿತ ಮಾಡುವವರು ಮುಂದೆ ಇರ್ತಾರೆ ಕಾಂಗ್ರೆಸ್‍ನವರು ಹಿಂದೆ ಇರಬೇಕಾಗುತ್ತದೆ ಎಂದು ಕಾಂಗ್ರೆಸ್ ಮಾಜಿ ನಾಯಕ ಸಿಎಂ ಇಬ್ರಾಹಿಂ ಹೇಳಿದ್ದಾರೆ.

: ರಾಜ್ಯದಲ್ಲಿ ಕಾಂಗ್ರೆಸ್ ಪರೀಸ್ಥಿತಿ ಮುಗದ್ಹೋಯ್ತು…… ಲಿಕ್ವಿಡೇಟರ್ ಅಪಾಂಯಿಂಟ್ ಮಾಡಿದ್ದಾರೆ. ಖುರ್ಚಿತಗೋಳೋರು ಖುರ್ಚಿ ತೊಗೋಬಹುದು. ಬೆಂಚ್ ತಗೋಳೋರು ಬೆಂಚು, ಜಮಖಾನಾ ತಗೋಳೋರು ತಗೊಂಡು ಹೋಗಬಹುದು ಎಂದು ವ್ಯಂಗ್ಯವಾಡಿದರು. ಮುಂದಿನ ಸರಕಾರದಲ್ಲಿ ಕಾಂಗ್ರೆಸ್ ಹಿಂಬದಿಯಲ್ಲಿರಬೇಕು ಅಷ್ಟೆ. ಮುಖ್ಯವಾಗಿ ಸರಕಾರದಲ್ಲಿ ಬೇರೆಯವರು ಇರುತ್ತಾರೆ. ಕಾಂಗ್ರೆಸ್‍ನವರು ಮೂರನೇ ಫೋರ್ಸ್ ಆಗಿ ಹಿಂಬದಿಯಲ್ಲಿರಬೇಕು ಎಂದರು.

ಈ ವೇಳೆ ರಾಜ್ಯದಲ್ಲಿ ಮೂರನೇ ಪಕ್ಷ ಕಟ್ಟುತ್ತಾರಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲ. ಕರ್ನಾಟಕದಲ್ಲಿ ಇರುವ ಪಕ್ಷಗಳನ್ನೇ ಸುಣ್ಣ ಹಾಗೂ ಬಣ್ಣಗಳನ್ನು ಹೊಡೆದುಕೊಂಡು ಇಟ್ಟುಕೊಳ್ಳುತ್ತೇವೆ. ಇನ್ನು ನಮ್ಮದೇನಿದ್ದರೂ ವ್ಯವಸ್ಥೆಯ ವಿರುದ್ಧ ಹೋರಾಟ. ಯಾವ ಪಕ್ಷದಲ್ಲಿ ವ್ಯವಸ್ಥೆ ಸರಿಯಿಲ್ಲವೋ ಆ ವ್ಯವಸ್ಥೆಯ ವಿರುದ್ಧ ನಾವು ಹೋರಾಡಬೇಕು ಎಂದು ಕರೆ ನೀಡಿದರು.

ಇದೇ ವೇಳೆ ಸಿದ್ದರಾಮಯ್ಯ ಕುರಿತಂತೆ ಮಾತನಾಡಿದ ಅವರು, ಪಾಪ ಸಿದ್ದರಾಮಯ್ಯ ರೆಸಾರ್ಟ್‍ನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ. ಇನ್ನು ನಾನು ಅವರ ಜಿಲ್ಲೆಯಿಂದಲೇ ಪ್ರವಾಸ ಆರಂಭಿಸಿದ್ದೇನೆ. ಇದು ಅವರಿಗೆ ಟಾಂಗ್ ಕೊಡುವ ಪ್ರಯತ್ನವಲ್ಲ. ಅವರದ್ದು ಚಿಕ್ಕ ಟಾಂಗ್, ನಮ್ಮದು ದೊಡ್ಡ ಟಾಂಗ್. ನಮ್ಮ ಟಾಂಗ್‍ನ್ನು ಅವರು ತಡೆದುಕೊಳ್ಳುವುದಿಲ್ಲ ಎಂದು ವ್ಯಂಗ್ಯವಾಡಿದರು. ಇನ್ನು ಕರ್ನಾಟಕದ ಆರುವರೆ ಕೋಟಿ ಕನ್ನಡಿಗರನ್ನು ನಂಬಿ ಹೋರಾಟಕ್ಕೆ ಇಳಿದಿದ್ದೇವೆ. ಅವರನ್ನೇ ನೆಚ್ಚಿದ್ದೇವೆ ಎಂದು ಕಾವ್ಯಾತ್ಮಕವಾಗಿ ಹೇಳುದ್ದು ವಿಶೇಷವಾಗಿತ್ತು.
ಇನ್ನು ಈಗಾಗಲೇ ಸಿಎಂ ಇಬ್ರಾಹಿಂ ಕಾಂಗ್ರೆಸ್ ಬಿಡುವ್ ದೃಢ ನಿಶ್ಚಯ ಮಾಡಿದ್ದಾರೆ. ಈ ಕುರಿತಂತೆ ಸಾಕಷ್ಟು ಚರ್ಚೆಗಳಾಗಿವೆ. ಇನ್ನು 14ನೇ ಸಿನಾಂಕಕ್ಕೆ ತಮ್ಮ ಅಂತಿನ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನು ಇವರ

Tags:

error: Content is protected !!