State

ಪ್ರಾದೇಶಿಕ ಸಾರಿಗೆ ಕಚೇರಿ ೫ ಸೇವೆಗಳನ್ನು ಇನ್ನು ಮುಂದೆ ಕೇವಲ ಆನ್ ಲೈನ್ ನಲ್ಲಿ ಮಾತ್ರ

Share

ಪ್ರಾದೇಶಿಕ ಸಾರಿಗೆ ಕಚೇರಿ (ಆರ್.ಟಿ.ಓ) ಯಲ್ಲಿ ಫೆ. ೨ ರಿಂದ ರಾಜ್ಯ ಸರ್ಕಾರ ೫ ಸೇವೆಗಳನ್ನು ಕಡಿತಗೊಳಿಸಿದ್ದು, ಇದೀಗ ಆ ಸೇವೆಗಳು ಕೇವಲ ಆನ್ ಲೈನ್ ನಲ್ಲಿ ಮಾತ್ರ ಪಡೆಯಬಹುದಾಗಿದೆ.

ಇಂತಹದೊಂದು ಹೊಸ ಜಾರಿಗೆ ತಂದಿರುವ ರಾಜ್ಯ ಸರ್ಕಾರವು ಹೊಸ ವಾಹನ ತೆಗೆದುಕೊಳ್ಳಬೇಕಾದರೇ ಆರ್.ಟಿ.ಓ ಗೆ ಹೋಗಿ ಡ್ರೈವಿಂಗ್ ಟೆಸ್ಟ್ ನೀಡಿದರೇ ಮಾತ್ರ ಕಚೇರಿಯಲ್ಲಿ ಡ್ರೈವಿಂಗ್ ಲೈಸೆನ್ಸ್ ದೊರೆಯುತ್ತಿತ್ತು, ಆದರೇ ವಿವಿಧ ಸೇವೆಗಳನ್ನು ಕಚೇರಿಯಲ್ಲಿ ನಿರ್ಬಂಧಿಸಲಾಗಿದೆ.

ಡ್ರೈವಿಂಗ್ ಲೈಸೆನ್ಸ್,, ರಿನವಲ್ ಡ್ರೈವಿಂಗ್ ಲೈಸೆನ್ಸ್, ಹೆಸರು ತಿದ್ದುಪಡಿ, ವಿಳಾಸ ತಿದ್ದುಪಡಿ, ಕಳೆದು ಹೋದ ಲೈಸನ್ಸ್ ನ್ನು ನಕಲಿ ಲೈಸೆನ್ಸ್ ತೆಗೆದುಕೊಳ್ಳುವಂತಹ ವಿಧಾನವಿತ್ತು, ಆದರೆ ಇವೆಲ್ಲವೂ ಅನ್ ಲೈನನಲ್ಲಿ ಮಾತ್ರ ಲಭ್ಯವಿರಲಿದ್ದು, ಉಳಿದ ಸೇವೆಗಳು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿಯೇ ಲಭ್ಯವಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂತಹದೊಂದು ಹೊಸ ಆಯಾಮ ರೂಪಿಸಿರುವ ರಾಜ್ಯ ಸರ್ಕಾರ ಮುಂದೇ ಯಾವ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Tags:

error: Content is protected !!