Banglore

ಪ್ರಧಾನಿ ಮೋದಿ ಭೇಟಿಗೆ ಸಮಯ ಕೇಳಿದ ಸಿಎಂ ಬಸವರಾಜ ಬೊಮ್ಮಾಯಿ

Share

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ದೆಹಲಿಗೆ ತೆರಳುವ ಸಾಧ್ಯತೆಯಿದೆ. ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಮಯ ಕೇಳಿರುವ ಸಿಎಂ ಬೊಮ್ಮಾಯಿ, ಸಮಯ ನೀಡಿದರೆ ಸಿಎಂ ನಾಳೆ ದೆಹಲಿಗೆ ತೆರಳುತ್ತಾರೆ.ದೆಹಲಿಗೆ ಹೋದರೆ ಸಂಪುಟ ವಿಸ್ತರಣೆಅಥವಾ ಪುನಾರಚನೆ ಬಗ್ಗೆ ಚರ್ಚೆ ನಡೆಸಬಹುದು. ಅಂತಾರಾಜ್ಯ ಜಲ ವಿವಾದಗಳ ಬಗ್ಗೆಯೂಚರ್ಚೆ ನಡೆಸುವ ಸಾಧ್ಯತೆಯಿದೆ.ಅಲ್ಲದೆದೆಹಲಿ ಭೇಟಿಯ ವೇಳೆ ಸಂಸದರಜೊತೆ ಮಾತುಕತೆ ನಡೆಸಿ, ರಾಜ್ಯ ಬಜೆಟ್ಗೂ ಮುನ್ನ ವರಿಷ್ಠರಜತೆಚರ್ಚಿಸಬಹುದು.

ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ನಾಳೆ ಬೆಳಗ್ಗೆ ದೆಹಲಿಗೆ ಹೋಗುವ ಸಾಧ್ಯತೆಇದೆ. ಫೆಬ್ರವರಿ 7ರಿಂದ ಬಜೆಟ್ ಪೂರ್ವಭಾವಿ ಸಭೆ ನಡೆಸುತ್ತೇನೆ. ವಿವಿಧ ಇಲಾಖೆಗಳ ಜೊತೆ ಸಭೆ ನಡೆಸಲಾಗುವುದು. ಬಜೆಟ್‍ಗೂಮುನ್ನಸಂಸದರಜೊತೆಸಭೆನಡೆಸುತ್ತೇನೆ. ಜಲ ವಿವಾದ ಸಂಬಂಧ ವಕೀಲರಜತೆಚರ್ಚಿಸುತ್ತೇನೆ. ಸಚಿವ ಸಂಪುಟದ ಬಗ್ಗೆ ಬಹಿರಂಗವಾಗಿಚರ್ಚೆ ಮಾಡಲ್ಲ. ಪಕ್ಷದ ನಾಯಕರು, ಸಚಿವರ ಭೇಟಿಗೆ ಸಮಯ ಕೇಳಿದ್ದೇನೆ. ಸಮಯ ನೀಡಿದಾಗದೆಹಲಿಗೆ ಹೋಗಿ ಚರ್ಚೆ ಮಾಡುವೆ. ನಾಳೆ ಬೆಳಗ್ಗೆ ಬಹುತೇಕದೆಹಲಿಗೆ ಹೋಗಬಹುದುಅಂತ ತಿಳಿಸಿದರು.

ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಬಜೆಟ್ ಬಗ್ಗೆ ಗೊಂದಲವೇನಿಲ್ಲ. ರಾಜ್ಯದಲ್ಲೂ ಬಜೆಟ್ ಬಗ್ಗೆ ಬೇರೆ ಬೇರೆ ಇಲಾಖೆ ಜೊತೆಗೆ ಮಾತನಾಡುತ್ತಿದ್ದೇನೆ. ಎಲ್ಲರಅಭಿಪ್ರಾಯತೆಗೆದುಕೊಂಡು ಬಜೆಟ್ ಮಾಡುತ್ತೇವೆ. ಸಂಸದರಜೊತೆ ಬಜೆಟ್ ಪೂರ್ವ ಸಭೆ ಮಾಡಿಚರ್ಚೆ ಮಾಡಲಾಗುವುದು. ಅಂತರ್‍ರಾಜ್ಯ ಜಲವಿವಾದಗಳ ಬಗ್ಗೆ ವಕೀಲರಜೊತೆಚರ್ಚೆಸುತ್ತೇನೆಎಂದು ಹೇಳಿದರು.
ನಾಳೆ ದೆಹಲಿಗೆ ತೆರಳುವ ಸಾಧ್ಯತೆಯಿದೆ. ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಮಯ ಕೇಳಿರುವೆ ಎಂದರು.

Tags:

error: Content is protected !!