ಪೊಲೀಸ್ ಜೀಪ್‍ನ್ನು ತೊಳೆಯಲು ಬಿಟ್ಟಿದ್ದ ವೇಳೆ ಜೀಪ್ ಕ್ಲೀನ್ ಮಾಡುತ್ತಿದ್ದ ವ್ಯಕ್ತಿ ಪೊಲೀಸ್ ಜೀಪ್ ಸಮೇತ ಪರಾರಿಯಾದ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡ ಜಿಲ್ಲೆಯ ಅಣ್ಣೀಗೇರಿ ಪೊಲೀಸ್ ಠಾಣೆಯ ಜೀಪನ್ನು ಬುಧವಾರ ಕ್ಲಿನ್ ಮಾಡಲು ಬಿಡಲಾಗಿತ್ತು. ಕ್ಲೀನ್ ಮಾಡಲು ಬಿಟ್ಟ ವೇಳೆ ವೇಳೆ ಜೀಪ್ ಡ್ರೈವರ್ ಬೀಗದ ಕೈಯ್ಯನ್ನು ಅಲ್ಲಿಯೇ ಬಿಟ್ಟು ಹೋಗಿದ್ದ. ಇದನ್ನು ಗಮನಿಸಿದ ಜೀಪ್ ಕ್ಲೀನರ್ ನಾಗಪ್ಪ ಹಡಪದ ಎಂಬವ ಜೀಪನ್ನು ಚಲಾಯಿಸಿಕೊಂಡು ಹೋಗಿದ್ದಾರೆ. ಇನ್ನು ನಾಗಪ್ಪ ಬ್ಯಾಡಗಿ ತಲುಪುವಷ್ಟರಲ್ಲಿ ಪೊಲೀಸರು ಆತನನ್ನು ಬಂಧಿಸಿ ಜೀಪನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು ಈ ಕುರಿತಂತೆ ನಾಗಪ್ಪನನ್ನು ಪೊಲೀಸರು ವಿಚಾರಣೆ ನಡೆಸಿದಾಗ ನನಗೆ ಜೀಪನ್ನು ಕದಿಯುವ ಉದ್ದೇಶವಿರಲಿಲ್ಲ. ಬದಲಾಗಿ ದಿನವೂ ಪೊಲೀಸ್ ಜೀಪನ್ನು ನೋಡುತ್ತಿದ್ದೆ. ಅದನ್ನು ಓಡಿಸಬೇಕೆಂಬುದು ನನ್ನ ಕನಸಾಗಿತ್ತು. ಹಾಗಾಗಿ ನಾನದನ್ನು ತೆಗೆದುಕೊಂಡು ಹೋದೆ ಎಂದು ಹೇಳಿದ್ದಾರೆ.