Athani

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕುಂದು ಕೊರತೆಗಳ ಸಭೆ

Share

ಅಥಣಿ ಪಟ್ಟಣದ ತಾಲೂಕು ಪಂಚಾಯತ್ ಸಭಾಭವನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದು ಕೊರತೆಗಳ ಸಭೆ ನಡೆಸಲಾಯಿತು ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆಡಳಿತದ ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ದಲಿತರ ಕುಂದು ಕೊರತೆಗಳ ಬಗ್ಗೆ ಚರ್ಚಿಸಲಾಯಿತು

ಈ ವೇಳೆ ಮಾತನಾಡಿದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿ ಬಿ ಎಸ್ ಬಾಲಚಂದ್ರ ಅವರು ಮಾತನಾಡಿ ಎಸ್ಸಿ ಎಸ್ಟಿ ಸಮುದಾಯಕ್ಕೆ ಬರುವ ಎಸ್ ಸಿ ಪಿ ಮತ್ತು ಎಸ್ ಟಿ ಪಿ ಯೋಜನೆಯ ಅನುದಾನವನ್ನು ಸಮರ್ಪಕವಾಗಿ ಬಳಸಿ ಎಸ್ ಸಿ ಸಮುದಾಯಗಳ ಕಾಲನಿಗಳನ್ನು ಅಭಿವೃದ್ದಿ ಪಡಿಸುವತ್ತ ಎಲ್ಲ ಅಧಿಕಾರಿಗಳು ಗಮನಹರಿಸಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಅಥಣಿ ತಾಲೂಕಿನ ಹಲವು ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನ ಭೂಮಿ ಇಲ್ಲದರ ಬಗ್ಗೆ ಹಲವು ಬಾರಿ ಅಥಣಿ ತಹಶಿಲ್ದಾರ ಗಮನಕ್ಕೆ ತಂದರು ಇದುವರೇಗೆ ಸಮಸ್ಯ ಬಗೆಹರಿಸುವಲ್ಲಿ ತಾಲೂಕು ಆಡಳಿತ ವಿಫಲವಾಗಿದ್ದು ಶಿಘ್ರವೆ ಸ್ಮಶಾನ ಭೂಮಿಯ ಸಮಸ್ಯ ಪರಿಹರಿಸುವಂತೆ ದಲಿತ ಮುಖಂಡರಾದ ಮಹಾಂತೇಶ ಬಾಡಗಿ ನ್ಯಾಯವಾದಿ ರಾಮ ಮರಳೆರ ಆಗ್ರಹಿಸಿದರು.
ಇದಕ್ಕೆ ಸಂಬಂಧಿಸಿದಂತೆ ಅಥಣಿ ತಹಶಿಲ್ದಾರ ದುಂಡಪ್ಪ ಕೋಮಾರ ಶೀಘ್ರವೆ ಸ್ಮಶಾನ ಭೂಮಿಯ ಸಮಸ್ಯ ಪರಿಹರಿಸುವ ಭರವಸೆ ನೀಡಿದರು.

ಇದೆ ಸಂದರ್ಭದಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿವೈಎಸ್ಪಿ ಬಾಲಚಂದ್ರ ಬಿ ಎಸ್, ಸಿಪಿಐ ಬಿ. ಎಸ್ ತಳವಾರ ಅಥಣಿ ಸಿಪಿಐ ಶಂಕರಗೌಡ ಬಸನಗೌಡರ, ಪಿಎಸ್ಐ ಕುಮಾರ್ ಹಾಡಕಾರ, ಸಮಾಜ ಕಲ್ಯಾಣ ಅಧಿಕಾರಿ ಪ್ರವೀಣ ಪಾಟೀಲ, ತಾಲೂಕು ಪಂಚಾಯತ್ ಅಧಿಕಾರಿ ಶೇಖರ ಕರಬಸಪ್ಪಗೊಳ, ದಲಿತ ಮುಖಂಡರಾದ ಪಂಡಿತ ನೂಲಿ, ನ್ಯಾಯವಾದಿಗಳಾದ ಸುನೀಲ ವಾಘಮೊರೆ, ರಾಜು ಐಹೊಳೆ, ಪ್ರಮೋದ ಹಿರೇಮನಿ, ಶಶಿ ಬಾಡಗಿ, ರವಿ ಕಾಂಬಳೆ, ಶಶಿಕಾಂತ ಸಾಳವೆ, ಮಂಜು ಹೋಳಿಕಟ್ಟಿ, ಕಲೇಶ ಮಡ್ಡಿ, ಗೌತಮ ಬನಸೋಡೆ, ಯಕನಾಂತ ಕಾಂಬಳೆ, ಮಿತೇಶ ಪಟ್ಟಣ, ಮಯೂರ ಸಿಂಗೆ, ಶಿವಾನಂದ ಸೌದಾಗರ, ವಿಜಯ ವರ್ಮಾ,
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಸಿಬ್ಬಂದಿಗಳಾದ
ವಿ. ಜಿ ಚಿಕ್ಕಮಠ, ಯು. ಎಸ್ ಸನಗೌಡ್ರ, ಎಸ್. ಎ ಕಬ್ಬುರ, ಬಸು ಹೊಸಮನಿ ಇನ್ನೂ ಹಲವರು ದಲಿತ ಮುಖಂಡರು ಉಪಸ್ಥಿತರಿದ್ದರು.

Tags:

error: Content is protected !!