hubbali

ನೈರುತ್ಯ ರೈಲ್ವೆ ವಲಯಕ್ಕೆ ಕೇಂದ್ರ ಬಜೆಟ್ ಬಂತು ಸಾಕಷ್ಟು ಅನುದಾನ

Share

ನೈರುತ್ಯ ರೈಲ್ವೆ ವಲಯಕ್ಕೆ ಈ ಬಾರಿಯ ಬಜೆಟ್ ನಲ್ಲಿ 6900 ಕೋಟಿ ರೂಪಾಯಿ ಅನುದಾನ ನಿಗದಿಯಾಗಿದೆ. ಕಳೆದ ಬಜೆಟ್ ಗೆ ಹೋಲಿಸಿದಲ್ಲಿ ಶೇಕಡಾ ರಷ್ಟು 40 ಪ್ರಮಾಣ ಬಜೆಟ್ ಏರಿಕೆಯಾಗಿದೆ ಎಂದು ನೈರುತ್ಯ ರೈಲ್ವೆ ವಲಯದ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಕಿಶೋರ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡದ ಅವರು, ಈ ಪೈಕಿ 323 ಕೋಟಿ ರೂಪಾಯಿ ಹೊಸ ರೈಲ್ವೆ ಹಳಿ ನಿರ್ಮಾಣಕ್ಕೆ ಬಂದಿದೆ. 1455 ಕೋಟಿ ರೂಪಾಯಿ ರೈಲ್ವೆ ಡಬ್ಲಿಂಗ್ ಗೆ, 611 ಕೋಟಿ ರೂಪಾಯಿ ರೈಲ್ವೆ ವಿದ್ಯುತೀಕರಣಕ್ಕೆ ಬಳಕೆಗೆ, ಬೆಂಗಳೂರು ಸಬ್ ಅರ್ಬನ್ ಪ್ರಾಜೆಕ್ಟ್ ಗಳಿಗಾಗಿ 450 ಕೋಟಿ ರೂಪಾಯಿ ಅನುದಾನ ಬಂದಿದೆ.
ಟ್ರ್ಯಾಕ್ ನವೀಕರಣ, ಸುರಕ್ಷತಾ ಕ್ರಮಗಳಿಗಾಗಿ 625 ಕೋಟಿ ರೂಪಾಯಿ ಅನುದಾನ. ಗದಗ – ವಾಡಿ ಹಾಗೂ ಬಾಗಲಕೋಟೆ – ಕುಡಚಿ ಹೊಸ ರೈಲು ಯೋಜನೆಗಳಿಗೂ ಆದ್ಯತೆ ನೀಡಿದ್ದಾರೆ ಎಂದರು.

ಗದಗ – ಕೂಡಗಿ – ಹೊಟಗಿ ನಡುವೆ ಡಬ್ಲಿಂಗ್ ಗೆ 200 ಕೋಟಿ ಮತ್ತು ಹುಬ್ಬಳ್ಳಿ – ಚಿಕ್ಕಜಾಜೂರು ಡಬ್ಲಿಂಗ್ ಗೆ 210 ಕೋಟಿ ರೂಪಾಯಿ ಅನುದಾನ. ಈ ವರ್ಷದ ಡಿಸೆಂಬರ್ ಅಂತ್ಯದೊಳಗಾಗಿ ಹುಬ್ಬಳ್ಳಿ – ಬೆಂಗಳೂರು ನಡುವಿನ ಡಬ್ಲಿಂಗ್ ಪೂರ್ಣಗೊಳಿಸೋ ಗುರಿ ಹೊಂದಿದೆ.
ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳಿಸೋ ವಿಶ್ವಾಸ ನೀಡಿದ್ದಾರೆ ಎಂದರು.

Tags:

error: Content is protected !!