Vijaypura

ನಿಪ್ಪಾಣಿ, ಸಂಕೇಶ್ವರದಲ್ಲಿ ಕಳ್ಳತನ: ಹರಿಹರ ಪೊಲೀಸ್ ವಶದಲ್ಲಿದ್ದ ಮೂವರನ್ನು ಕರೆತಂದ ಖಾನಾಪುರ ಪೊಲೀಸರು

Share

ನಿಪ್ಪಾಣಿ ಹಾಗೂ ಸಂಕೇಶ್ವರದಲ್ಲಿ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಮಹಾರಾಷ್ಟ್ರ ಮೂಲದ ಮೂವರನ್ನು ಖಾನಾಪುರ ಪೊಲೀಸರು ಕರೆತಂದಿದ್ದಾರೆ.

ಖಾನಾಪುರ ನಗರದಲ್ಲಿ ನವೆಂಬರ್‍ನಲ್ಲಿ ಒಂದೇ ರಾತ್ರಿ ನಡೆದ ಆರು ಕಳ್ಳತನ ಪ್ರಕರಣಗಳಲ್ಲಿ ಮಹಾರಾಷ್ಟ್ರದ ಮೂವರು ಕಳ್ಳರು ಭಾಗಿಯಾಗಿದ್ದರು. ಈ ಮೂವರು ಆರೋಪಿಗಳನ್ನು ಹರಿಹರ ಪೊಲೀಸರು ಬಂಧಿಸಿದ್ದರು. ಪ್ರಕರಣ ಸಂಬಂಧ ಹರಿಹರ ಪೆÇಲೀಸರ ವಶದಲ್ಲಿದ್ದ ಮೂವರನ್ನು ಸೋಮವಾರ ಖಾನಾಪುರ ಪೊಲೀಸರು ನಗರಕ್ಕೆ ಕರೆತಂದಿದ್ದಾರೆ. ಇನ್ನು ಪೊಲೀಸರು ತನಿಖೆಯನ್ನು ಪೂರ್ಣಗೊಳಿಸಿದ್ದಾರೆ. ಸೊಲ್ಲಾಪುರ ಅನೀಲ್ ನಗರದ ಸಚಿನ್ ರಾಜು ಮಾನೆ ಅಲಿಯಾಸ್ ಲಖನ್ ಅಶೋಕ್ ಕುಲಕರ್ಣಿ (30), ಹಳೆ ಕರಾಡ್ ನಾಕಾ ಪುಣೆಯ ಸನ್ನಿ ಮಹೇಶಕುಮಾರ ತನೋಜ (31), ಸೊಲ್ಲಾಪುರದ ತಾನಾಜಿ ಚೌಕ್ ಸಾರಂಗ್ ಅಲಿಯಾಸ್ ಸಾಗರ್ ಸಂಜಯ್ ತೊಳೆ (25) ಎಂಬವರನ್ನು ಪೊಲಈಸರು ಕರೆತಂದು ತನಿಖೆಯನ್ನು ಪೂರ್ಣಗೊಳಿಸಿದ್ದಾರೆ.

ಹರಿಹರದಲ್ಲಿ ನಡೆದ ಕಳ್ಳತನದ ತನಿಖೆ ವೇಳೆ ಹರಿಹರ ನಗರ ಪೆÇಲೀಸರು ಮೂವರ ಕೈಕೋಳ ಹಾಕಿದ್ದಾರೆ. ವಿಚಾರಣೆ ವೇಳೆ ಖಾನಾಪುರ ನಗರದಲ್ಲಿ ಕಳ್ಳತನ ಮಾಡಿರುವ ಘಟನೆಗಳೂ ಬೆಳಕಿಗೆ ಬಂದಿವೆ. ಹೆಚ್ಚಿನ ತನಿಖೆಗಾಗಿ ಖಾನಾಪುರ ಪೆÇಲೀಸರು ಭಾನುವಾರ ಬಾಡಿ ವಾರೆಂಟ್ ಅಡಿಯಲ್ಲಿ ಮೂವರನ್ನು ಒಂದು ದಿನದ ಮಟ್ಟಿಗೆ ಬಂಧಿಸಿದ್ದಾರೆ. ತನಿಖಾ ಪ್ರಕ್ರಿಯೆ ಮುಗಿಸಿ ಭಾನುವಾರ ಸಂಜೆ ಮತ್ತೆ ಖಾನಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿ ಹರಿಹರ ಪೆÇಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳು ಖಾನಾಪುರ ನಗರದಲ್ಲಿ ಕಳ್ಳತನ ಮಾಡಿರುವುದಾಗಿ ತಪೆÇ್ಪಪ್ಪಿಕೊಂಡಿದ್ದಾನೆ.

ದಾವಣಗಿರಿ ಜಿಲ್ಲೆಯ ಹರಿಹರ ಹಾಗೂ ಬೆಳಗಾವಿ ಜಿಲ್ಲೆಯ ಸಂಕೇಶ್ವರ, ನಿಪಾಣಿದಲ್ಲಿ ಕೂಡ ಕಳ್ಳತನ ಮಾಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಗ್ಯಾಂಗ್ ನ ಪ್ರಮುಖ ಸಚಿನ್ ಇವನ ವಿರುದ್ಧ ಮಹಾರಾಷ್ಟ್ರದ ವಿವಿಧ ಪೆÇಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಪುಣೆಯ ಯರವಡ ಜೈಲಿನಲ್ಲಿ ಕೆಲಕಾಲ ಸೆರೆವಾಸ ಕಳೆದಿದ್ದಾರೆ.

Tags:

error: Content is protected !!