Belagavi

ನಿಪ್ಪಾಣಿಯಲ್ಲಿ ೨೦೫೨ ಮನೆಗಳ ನಿರ್ಮಾಣದ ಕಾರ್ಯವನ್ನು ವೀಕ್ಷಿಸಿದ ಸಚಿವೆ ಶಶಿಕಲಾ ಜೊಲ್ಲೆ

Share

ನಿಪ್ಪಾಣಿ ನಗರದ ಹೊರವಲಯದಲ್ಲಿ ೨೦೫೨ ಮನೆ ಗಳ ನಿರ್ಮಾಣದ ಕಾರ್ಯವನ್ನು ವೀಕ್ಷಿಸಿದ ಸಚಿವೆ ಶಶಿಕಲಾ ಜೊಲ್ಲೆ ಯವರು ಹರ್ಷವ್ಯಕ್ತಪಡಿಸಿದ್ದಾರೆ.
ಹೌದು, ನಿಪ್ಪಾಣಿ ನಗರದಲ್ಲಿ ಕಳೆದ ಹದಿನೈದು ವರ್ಷಗಳಿಂದ ಸರ್ಕಾರದ ವತಿಯಿಂದ ಗ್ರಹ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು, ಆದರೆ ಶಶಿಕಲಾ ಜೊಲ್ಲೆಯವರು ಶಾಸಕಿಯಾಗಿ ಆಯ್ಕೆಯಾದ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಶಶಿಕಲಾ ಜೊಲ್ಲೆ ಯವರ. ‘ ಕನಸಿನ ಕೂಸು’ ಆದ ೨೦೫೨ ಮನೆಗಳ ನಿರ್ಮಾಣದ ಕಾರ್ಯಕ್ಕೆ ೨೦೨೦ ರಲ್ಲಿ ಆಗಿನ ವಸತಿ ಸಚಿವರಾಗಿದ್ದ ವಿ ಸೋಮಣ್ಣ ನೇತೃತ್ವದಲ್ಲಿ ಶಂಕುಸ್ಥಾಪನೆ ಮಾಡಲಾಗಿತ್ತು.


ಸಚಿವೆ ಶಶಿಕಲಾ ಜೊಲ್ಲೆ ಯವರ. ‘ ಕನಸಿನ ಕೂಸು’ ಆದ ಗ್ರಹ ನಿರ್ಮಾಣ ಕಾರ್ಯವನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು. ರಾಜಿವ ಗಾಂಧಿ ಹೌಸಿಂಗ ಬೋರ್ಡ ಮೂಲಕ ೨೦೨೦ ರಲ್ಲಿ ಮನೆಗಳ ನಿರ್ಮಾಣಕ್ಕೆ ಜಾಗ ನೋಡಿಕೊಂಡು ಬಂದಿದ್ದರು. ಆ ವೇಳೆ ಒಟ್ಟು ೨೦೫೨ ಮನೆಗಳಲ್ಲಿ ಮಂಜೂರು ನೀಡಲಾಗಿದ್ದು, ಸಚಿವೆ ಶಶಿಕಾಲಾ ಜೊಲ್ಲೆಯವರು ೧೮೧೨ ವಸತಿ ಖಾತೆಯ ಸಚಿವರಾದ ಸೋಮಣ್ಣಾ ಮತ್ತು ರಾಜಿವ ಗಾಂಧಿ ಹೌಸಿಂಗ ಬೋರ್ಡ ಎಂಡಿಯವರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಇಂದು ಈ ನಿಪ್ಪಾಣ ನಗರದ ಕಾಲೋನಿ ಒಳ್ಳೆಯ ಕಾಲೋನಿಯಾಗಿ ಪರಿಣಮಿಸಿದೆ. ಈ ಮನೆಗಳು ಬಡವರಿಗೆ ಅತ್ಯಂತ ಅನಕೂಲವಾಗಲಿದ್ದು, ಇಲ್ಲಿನ ಲೈಟ್, ಒಳಚರಂಡಿ ಮತ್ತು ಗಾರ್ಡನ ವ್ಯವಸ್ಥೆಗೆ ಸುಮಾರು ೧೦ ಕೋಟಿ ರೂಪಾಯಿ ಅನುದಾನ ಬಿಡುಗೊಡೆಯಾಗಿದ್ದು ಈಗ ೫ ಕೋಟಿಯಷ್ಟು ಅನುದಾನ ಬಿಡುಗೊಡೆ ಮಾಡಲಾಗುವುದು. ಬೆಂಗಳೂರಿನ ಕಾರ್ಮಿಕನೋರ್ವ ಈ ರಸ್ತೆಯನ್ನು ಅತ್ಯಂತ ಸೊಗಸಾಗಿ ಮತ್ತು ಅಗಲವಾಗಿ ನಿರ್ಮಾಣ ಮಾಡಿದ್ದಾರೆ. ಈ ರಸ್ತೆಯ ನಿರ್ಮಾಣ ಬಗ್ಗೆ ಜನರು ಕೂಡ ಪ್ರಶಂಸೆ ವ್ಯಕ್ತಪಡಿಸಿದರು


ಈ ಸಂದರ್ಭದಲ್ಲಿ ನಗರಾದ್ಯಕ್ಷ ಜಯವಂತ್ ಬಾಟ್ಲೆ, ಉಪಾಧ್ಯಕ್ಷೆ ನೀತಾ ಬಾಗಡೆ, ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಯ ಅದ್ಯಕ್ಷ ಚಂದ್ರಕಾAತ ಕೊಟಿವಾಲೆ, ,ಪಪ್ಪು ಪಾಟೀಲ, ನಗರಸಭೆಯ ಸದಸ್ಯರು ಸೇರಿದಂತೆ ಆಶ್ರಯ ಕಮಿಟಿಯ ಸದಸ್ಯರು ಉಪಸ್ಥಿತರಿದ್ದರು.

Tags:

error: Content is protected !!