hubbali

ನಾಳೆಯಿಂದ ಶಾಂತಿಯುತವಾಗಿ ಶಾಲೆಗಳು ಆರಂಭ : ಸಿಎಂ ಬೊಮ್ಮಾಯಿ

Share

ನಾಳೆಯಿಂದ ಫ್ರೌಡ ಶಾಲೆಗಳನ್ನ ಆರಂಭ ಮಾಡುತ್ತೇವೆ. ಈಗಾಗಲೇ ಜಿಲ್ಲಾಧಿಕಾರಿಗಳು ಸೇರಿ ಶಾಲಾ ಆಡಳಿತ ಮಂಡಳಿಗಳಿಗೆ ಗಲಾಟೆ ಆಗದಂತೆ ನೋಡಿಕೊಳ್ಳಲು ತಿಳಿಸಲಾಗಿದೆ. ಜೊತೆಗೆ ಗಲಾಟೆ ನಡೆಯಬಹುದಾದ ಶಾಲೆಗಳ ಬಗ್ಗೆ ಗಮನ ಹರಿಸಿ, ಶಾಂತಿ ಸಭೆ ಮಾಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ನಾಳೆ ಶಾಂತಿಯುತವಾಗಿ ಎಲ್ಲಾ ತರಗತಿಗಳು ನಡೆಯುತ್ತವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ವ್ಯವಸ್ಥೆಯನ್ನು ನೋಡಿಕೊಂಡು ನಂತರ ಕಾಲೇಜುಗಳ ಆರಂಭದ ಬಗ್ಗೆ ಶಿಕ್ಷಣ ಸಚಿವರು ವರದಿಯನ್ನ ತರಿಸಿಕೊಂಡು ನಿರ್ಧರಿಸುತ್ತೇವೆ. ಮೊದಲಿನ ಹಾಗೇ ಸೌರ್ಹದಯುತವಾಗಿ ಶಾಲಾ ಕಾಲೇಜುಗಳನ್ನ ಆರಂಭಿಸುತ್ತೆವೆ. ಶಾಲಾ ಕಾಲೇಜುಗಳನ್ನ ಆರಂಭಿಸುವುದು ನಮ್ಮ‌ ಮೊದಲ ಆಧ್ಯತೆಯಾಗಿದೆ. ಮಾರ್ಚ್ ಏಪ್ರಿಲ್ ತಿಂಗಳಲ್ಲಿ ವಿದ್ಯಾರ್ಥಿಗಳ ಪರೀಕ್ಷೆ ನಡೆಯಲಿವೆ. ಹಾಗಾಗಿ ವಿದ್ಯಾರ್ಥಿಗಳು ವಿಧ್ಯಾಭ್ಯಾಸ ಕಡೆ ಗಮನ ಹರಿಸಬೇಕು ಎಂದರು.

ಹಿಜಾಬ್ ವಿಚಾರವಾಗಿ ಪ್ರಚೋದನೆ ನೀಡುವ ಶಕ್ತಿಗಳ ಬಗ್ಗೆ ಗಮನಿಸಲಾಗುತ್ತಿದೆ.

ಇದೇ ವೇಳೆ ಹಿಜಾಬ್ ವಿಚಾರದಲ್ಲಿ ವಿವಾದ ಸೃಷ್ಟಿಸುವವರ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಯಾರು ಪ್ರಚೋದನೆ ನೀಡ್ತಾರೆ, ಸೋಷಿಯಲ್ ಮೀಡಿಯಾದಲ್ಲಿ ಸಂದೇಶವನ್ನ ಹಾಕ್ತಾರೆ. ಅವೆಲ್ಲವನ್ನೂ ನಮ್ಮ ಪೊಲೀಸ್ ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅಗತ್ಯ ಬಿದ್ದಲ್ಲಿ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಆರ್ಥಿಕ ಕಲ್ಯಾಣ,ಜನ ಕಲ್ಯಾಣ ಹಾಗೂ ಆರ್ಥಿಕ ಶಿಸ್ತಿನೊಂದಿಗೆ ಬಜೆಟ್ ಮಂಡನೆ.

ರಾಜ್ಯ ಬಜೆಟ್ ಮಂಡನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಮಗ್ರ ಕರ್ನಾಟಕ ಅಭಿವೃದ್ದಿಯ ಚಿಂತನೆ ಇದೆ. ಕೋವಿಡ್ ನಿಂದಾಗಿ ಎರಡು ವರ್ಷದಲ್ಲಿ ರಾಜ್ಯದಲ್ಲಿ ಆರ್ಥಿಕತೆ ಬಹಳ ನಷ್ಟ ಆಗಿದೆ. ಇತ್ತೀಚೆಗೆ ಆರ್ಥಿಕತೆ ಸ್ವಲ್ಪ ಸದೃಡತೆ ಕಾಣುತ್ತಿದೆ. ರೆವಿನ್ಯೂ ಬರುತ್ತಿದೆ. ಆರ್ಥಿಕ ಕಲ್ಯಾಣ, ಜನಕಲ್ಯಾಣ ಹಾಗೂ ಆರ್ಥಿಕ ಶಿಸ್ತು ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆಯಾಗಲಿದೆ. ಅಷ್ಟೇ ಅಲ್ಲದೆ ಬುನಾದಿಯಲ್ಲಿ‌ ಇರುವಂತ ಬಡಜನ ಹಾಗೂ‌ ಕೂಲಿ ಮಾಡುವ ಜನರನ್ನ ಗಮನದಲ್ಲಿ ಇಟ್ಟುಕೊಂಡು ಬಜೆಟ್ ಮಾಡಲಿದ್ದೇವೆ ಎಂದು ತಿಳಿಸಿದರು.

ಅನುದಾನ ಬಿಡುಗಡೆಯಲ್ಲಿ ತಾರತ್ಯವಾಗಿಲ್ಲ.

ರಾಜ್ಯದಲ್ಲಿ ಕೆಎಸ್ಆರ್ಟಿಸಿ, ಎನ್ ಡಬ್ಲ್ಯೂ ಆರ್ ಟಿಸಿ, ಬಿಎಮ್ ಟಿಸಿ ಎಲ್ಲ ನಿಗಮಗಳಿಗೂ ಸೂಕ್ತ ಅನುದಾನ ನೀಡುತ್ತಿದ್ದೇವೆ‌. ಎಲ್ಲಿಯು ತಾರತಮ್ಯ ಮಾಡಿಲ್ಲ, ಅದರ ಬಗ್ಗೆ ಬೇಕಾದಲ್ಲಿ ಪಟ್ಟಿ ನೀಡುತ್ತೇನೆ. ಈ ಎಲ್ಲ ನಿಗಮಗಳ ಒಟ್ಟಾರೆ ಅಭಿವೃದ್ದಿಗಾಗಿ ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಆರ್ಥಿಕ ಸ್ವಾವಲಂಬನೆ ಮತ್ತು ಉಳಿತಾಯ ಮಾಡುವ ದೃಷ್ಟಿಯಿಂದ ಸಮಿತಿ ಕೆಲಸ ಮಾಡಿತ್ತಿದೆ. ಅಷ್ಟೇ ಅಲ್ಲದೇ ಈಗಾಗಲೇ ಶ್ರೀನುವಾಸಮೂರ್ತಿ ಸಮಿತಿಯು ಈ ಎಲ್ಲ ನಿಗಮಗಳ ಜೊತೆ ಸಭೆಯನ್ನ ನಡೆಸಿದೆ. ಸ್ವಾವಲಂಬನೆ ಸಾಧಿಸುವ ಕುರಿತು ಗಮನವನ್ನು ಈ ಸಮಿತಿ ವಹಿಸಲಿದೆ .ಅಷ್ಟೇ ಅಲ್ಲದೆ ಹೇಸ್ಕಾಂ ರಂಗದಲ್ಲಿ ಕೂಡ ಸುಧಾರಣೆ ತರಲು ಸಮಿತಿ ರಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

Tags:

error: Content is protected !!