International news

ನಾಳೆಯಿಂದ ವ್ಯಾಲೆಂಟೈನ್ಸ್ ಡೇ ಆರಂಭ – ನಾಳೆ ಯಾವ ಡೇ ???

Share

ನಾಳೆಯಿಂದ ಪ್ರೇಮಿಗಳ ದಿನಾಚರಣೆ ಆರಂಭವಾಗುತ್ತಿದೆ. ೭ ಫೆಬ್ರವರಿಯಿಂದ ೧೪ ಫೆಬ್ರವರಿವೆರೆಗೂ ಅನೇಕ ಆಚರಣೆಗಳು ನಡೆಯುತ್ತವೆ.

ದಿನ 1 – ಗುಲಾಬಿ ದಿನ ಪ್ರೇಮಿಗಳ ದಿನ ಫೆಬ್ರವರಿ 7 ರಂದು ಆರಂಭಗೊಳ್ಳುತ್ತದೆ. ಈ ದಿನ ಗುಲಾಬಿ ದಿನವಾಗಿ ಆಚರಿಸಲಾಗುತ್ತದೆ. ಗುಲಾಬಿಗಳನ್ನು ಪ್ರೀತಿಯ ಸಂಕೇತವಾಗಿ ನೀಡಲಾಗುತ್ತದೆ.

ದಿನ 2 – ಪ್ರೇಮದ ಪ್ರಸ್ತಾಪ ಪ್ರೇಮಿಗಳ ವಾರದ ಎರಡನೇ ದಿನವನ್ನು ಪ್ರೀತಿಯ ವಾರ ಎನ್ನಲಾಗುತ್ತದೆ. ಅಂದರೆ ಪ್ರೇಮದ ಬಗ್ಗೆ ಪ್ರಸ್ತಾಪ ಮಾಡುವ ದಿನವೆಂದು ಹೇಳಲಾಗುತ್ತದೆ. ಇದು ಅತ್ಯಂತ ರೋಮ್ಯಾಂಟಿಕ್ ದಿನವಾಗಿದೆ. ಏಕೆಂದರೆ ಪ್ರೇಮಿಗಳು ತಮ್ಮ ಪ್ರೇಮಿಯ ಮುಂದೆ ಪ್ರೀತಿಯನ್ನು ಒಪ್ಪಿಕೊಳ್ಳುವ ದಿನವಾಗಿರುತ್ತದೆ.

ದಿನ 3 – ಚಾಕೊಲೇಟ್ ದಿನ ಚಾಕೊಲೇಟ್ ದಿನವನ್ನು ಪ್ರೇಮಿಗಳ ವಾರದ ಮೂರನೇ ದಿನದಲ್ಲಿ ಆಚರಿಸಲಾಗುತ್ತದೆ. ಈ ದಿನ ಪ್ರೇಮಿಗಳ ಬಂಧ ವಿಶೇಷವಾಗಿಸುತ್ತದೆ. ಅದು ಚಾಕೊಲೇಟ್‌ಗಳನ್ನು ಪ್ರೀತಿಸುವುದಕ್ಕಿಂತ ಸಿಹಿಯಾಗಿರುತ್ತದೆ. ಈ ದಿನ ಪ್ರೇಮಿಗಳ ಸಂಬಂಧದಲ್ಲಿ ಸಿಹಿಯೂ ಇರುತ್ತದೆ.

ದಿನ 4- ಟೆಡ್ಡಿ ಡೇ ಇದು ಪ್ರೇಮಿಗಳ ವಾರದ ನಾಲ್ಕನೇ ದಿನ. ಇದನ್ನು ಟೆಡ್ಡಿ ಡೇ ಎಂದು ಆಚರಿಸಲಾಗುತ್ತದೆ. ಟೆಡ್ಡಿಗಳು ಮೋಹಕವಾದ ಮತ್ತು ಅತ್ಯಂತ ಪ್ರಸಿದ್ಧವಾದ ಮೃದುವಾದ ಆಟಿಕೆಗಳಾಗಿವೆ. ಇವುಗಳನ್ನು ಪ್ರತಿ ಹುಡುಗಿಯೂ ಪ್ರೀತಿಸುತ್ತಾಳೆ. ಹುಡುಗಿಗೆ ಮೃದುವಾದ ಟೆಡ್ಡಿಯನ್ನು ಉಡುಗೊರೆಯಾಗಿ ನೀಡುವುದರಿಂದ ಅದು ಯಾವಾಗಲೂ ನಿಮ್ಮನ್ನು ನೆನಪಿಸುತ್ತದೆ.

ದಿನ 5- ಪ್ರಾಮಿಸ್ ಡೇ ಪ್ರೇಮಿಗಳ ವಾರದ ಐದನೇ ದಿನ ಪ್ರಾಮಿಸ್ ಡೇ ಎಂದು ಆಚರಿಸಲಾಗುತ್ತದೆ. ಈ ದಿನದಂದು ಪ್ರೇಮಿಗಳು ಅವರು ಯಾವಾಗಲೂ ಕಷ್ಟು ಸುಖದಲ್ಲಿ ಪರಸ್ಪರ ಒಟ್ಟಿಗೆ ಇರುವುದಾಗಿ ಭರವಸೆ ನೀಡುತ್ತಾರೆ. ದಿನದ ಹೆಸರೇ ಎಲ್ಲವನ್ನೂ ಹೇಳುವಂತೆ ಪರಸ್ಪರ ಪ್ರೀತಿ ಪ್ರಸ್ತಾಪವನ್ನು ಮಾಡಿಕೊಂಡು ಜೀವನದಲ್ಲಿ ಒಟ್ಟಿಗೆ ನಡೆಯುವ ಭರವಸೆ ನೀಡುತ್ತಾರೆ.

ದಿನ 6- ಅಪ್ಪುಗೆಯ ದಿನ ಅಪ್ಪುಗೆಯ ದಿನವು ಪ್ರೇಮಿಗಳ ವಾರದ ಆರನೇ ದಿನವಾಗಿದೆ. ಇದನ್ನು ಫೆಬ್ರವರಿ 12 ರಂದು ಆಚರಿಸಲಾಗುತ್ತದೆ. ಆರಾಮದಾಯಕವಾದ ಅಪ್ಪುಗೆಯು ಪದಗಳಿಗಿಂತ ಹೆಚ್ಚು ಮಾತನಾಡುತ್ತದೆ. ಹೀಗಾಗಿ ಪ್ರೀತಿಪಾತ್ರರಿಗೆ ಕೋಮಲವಾದ ಅಪ್ಪುಗೆ ಮನಸ್ಸಿಗೆ ಮುದನೀಡುತ್ತದೆ. ಅಪ್ಪುಗೆಯ ಮೂಲಕ ಶಾಶ್ವತವಾಗಿ ಪ್ರೀತಿಸುತ್ತಾರೆ ಎಂದು ಅವನಿಗೆ ಅಥವಾ ಅವಳಿಗೆ ತಿಳಿಸುತ್ತದೆ.

ದಿನ 7- ಕಿಸ್ ಡೇ ಪ್ರೇಮಿಗಳ ವಾರದ ಏಳನೇ ದಿನವನ್ನು ಕಿಸ್ ಡೇ ಎಂದು ಆಚರಿಸಲಾಗುತ್ತದೆ. ಕಿಸ್ ಡೇ ಎಂದರೆ ನಿಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸಲು ಕಿಸ್ ನೀಡುವುದು. ಪ್ರೇಮಿಗಳು ಚುಂಬಿಸುವ ಮೂಲಕ ಪರಸ್ಪರ ಆತ್ಮೀಯತೆಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಪ್ರೇಮಿಗಳು ಚುಂಬನದೊಂದಿಗೆ ತಮ್ಮ ಸಂಬಂಧ ಗಟ್ಟಿಗೊಳಿಸಿಕೊಳ್ಳುತ್ತಾರೆ.

ದಿನ 8- ಪ್ರೇಮಿಗಳ ದಿನ ಅಂತಿಮವಾಗಿ ವಾರದ ಕೊನೆಯ ದಿನವನ್ನು ವ್ಯಾಲೆಂಟೈನ್ಸ್ ಡೇ ಅಥವಾ ಪ್ರೇಮಿಗಳ ದಿನವೆಂದು ಆಚರಿಸಲಾಗುತ್ತದೆ. ಈ ದಿನವು ಪ್ರತಿ ವರ್ಷ ಫೆಬ್ರವರಿ 14 ರಂದು ಆಚರಿಸಲಾಗುತ್ತದೆ. ಇದನ್ನು 3 ನೇ ಶತಮಾನದ ರೋಮನ್ ಸಂತ ವ್ಯಾಲೆಂಟೈನ್ ನೆನಪಿಗಾಗಿ ಆಚರಿಸಲಾಗುತ್ತದೆ. ಇದು ಸಂತೋಷದ ದಿನ, ಪ್ರೀತಿ ಮತ್ತು ಬದ್ಧತೆಯ ಆಚರಣೆ, ಪರಿಪೂರ್ಣ ಸಂಗಾತಿಯನ್ನು ಹುಡುಕುವ ಆನಂದದಾಯಕ ಉತ್ಸಾಹದ ದಿನ. ಈ 8 ದಿನಗಳಲ್ಲಿ ಪರಸ್ಪರರೊಂದಿಗಿನ ಪ್ರತಿ ಕ್ಷಣವನ್ನು ಮರೆಯಲಾಗದಂತೆ ಆಚರಿಸಲಾಗುತ್ತದೆ.

ಕ್ರಿ.ಶ 270. ರೋಮ್ ಸಾಮ್ರಾಜ್ಯವನ್ನು ಎರಡನೇ ಕ್ಲಾಡಿಯಸ್​ ಎಂಬ ರಾಜ ಆಳುತ್ತಿದ್ದ. ತನ್ನ ಸರ್ವಾಧಿಕಾರಿ ಧೋರಣೆಯಿಂದ ಕುಖ್ಯಾತ ಪಡೆದಿದ್ದ ಸಾಮ್ರಾಜ್ಯದಲ್ಲಿ ವ್ಯಾಲೆಂಟೈನ್ ಎಂಬ ಸಂತ ಹೊಸ ಬೆಳಕಾಗಿ ಕಾಣಿಸಿಕೊಂಡಿದ್ದರು. ಕ್ಲಾಡಿಯಸ್ ಆಸ್ಥಾನದಲ್ಲಿಯೇ ವ್ಯಾಲೆಂಟೈನ್ ಸಂತನಾಗಿದ್ದರು ಎಂಬುದು ವಿಶೇಷ. ತನ್ನ ರಾಜಾಢಾಳಿತದ ಅವಧಿಯಲ್ಲಿ ಕ್ಲಾಡಿಯಸ್ ಸೈನಿಕರನ್ನು ಮದುವೆಯಾಗಲು ಬಿಡುತ್ತಿರಲಿಲ್ಲ. ಯುದ್ಧದ ಸಂದರ್ಭದಲ್ಲಿ ಯುವಕರು ಮದುವೆಯಾಗಬಾರದೆಂದು ಕ್ಲಾಡಿಯಸ್​ ಕಟ್ಟಪ್ಪಣೆ ಹೊರಡಿಸಿದ್ದರು. ಏಕೆಂದರೆ ಯುವಕರು ಒಬ್ಬಂಟಿಯಾಗಿದ್ದರೆ ಯುದ್ಧದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ ಎಂದು ಆತ ನಂಬಿದ್ದ. ಇದರಿಂದ ಸೈನಿಕರಲ್ಲಿ ಬಹಳಷ್ಟು ಮಂದಿ ಕೀಳರಿಮೆಗೆ ಒಳಗಾಗಿದ್ದರು. ತಮ್ಮ ಪ್ರೀತಿ ಪಾತ್ರರನ್ನು ಪಡೆಯಲು ವಿಫರಾಗಿದ್ದರು.ರಾಜನ ಈ ನಿರ್ಧಾರದ ಬಗ್ಗೆ ವ್ಯಾಲೆಂಟೈನ್ ಅವರಿಗೆ ಮೊದಲಿನಿಂದಲೂ ಅಸಮಾಧಾನವಿತ್ತು. ಇಡೀ ಸಾಮ್ರಾಜ್ಯದಲ್ಲಿ ಕ್ಲಾಡಿಯಸ್​ನ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದು ಸಂತ ಮಾತ್ರ. ಸೈನಿಕ ಮನದಾಳವನ್ನು ಅರಿತ ವ್ಯಾಲೆಂಟೈನ್ ರಾಜನಿಗೆ ತಿಳಿಯದಂತೆ ಪ್ರೇಮಿಗಳನ್ನು ಜತೆ ಒಂದುಗೂಡಿಸುತ್ತಿದ್ದರಂತೆ. ಮದುವೆಯಾಗಲು ಇಚ್ಛಿಸುತ್ತಿದ್ದವರಿಗೆ ರಹಸ್ಯವಾಗಿ ಮದುವೆ ಮಾಡಿಸುತ್ತಿದ್ದರಂತೆ. ತಮ್ಮ ಜೀವನವನ್ನೇ ಪಣಕ್ಕಿಟ್ಟು ಹಲವು ಪ್ರೇಮಿಗಳ ನೆರವಿಗೆ ನಿಂತರು.

ಆದರೆ ಅದೊಂದು ಈ ವಿಚಾರ ಕ್ಲಾಡಿಯಸ್ ಕಿವಿಗೆ ಬೀಳುತ್ತದೆ. ರಾಜಧರ್ಮವನ್ನು ಮೀರಿದ ವ್ಯಾಲೆಂಟೈನ್​ ರನ್ನು ಅಪರಾಧಿ ಎಂದು ಘೋಷಿಸಲಾಗುತ್ತದೆ. ಈ ಅಪರಾಧಕ್ಕಾಗಿ ಅವರನ್ನು ಫೆಬ್ರವರಿ 14ರಂದು ಸೆರೆಮನೆಗೆ ತಳ್ಳಲಾಯಿತು. ಸೆರೆಮನೆಯಲ್ಲಿ ಬಂಧಿಯಾದ ಮೇಲೆ ಎಲ್ಲರನ್ನು ಆಶ್ಚರ್ಯಪಡಿಸುವಂತಹ ಕೆಲಸಗಳನ್ನು ವ್ಯಾಲೆಂಟೈನ್ ಮಾಡುತ್ತಿದ್ದರಂತೆ. ಅದರಲ್ಲೊಂದು ಸೆರೆಮನೆಯ ಅಧಿಕಾರಿಯ ಮಗಳಿಗೆ ದೃಷ್ಟಿಯನ್ನು ಕರುಣಿಸಿರುವುದು. ಹೀಗೆ ಹಲವು ಪ್ರೇಮಿಗಳ ಸಂಬಂಧಕ್ಕೆ ಅಡಿಪಾಯ ಹಾಕಿಕೊಟ್ಟ ಸಂತರನ್ನು ನೋಡಲು ಹಲವು ಪ್ರೇಮಿಗಳು ಜೈಲಿಗೆ ಬರಲಾರಂಭಿಸಿದರು.ಈ ನಡುವೆ ವ್ಯಾಲೆಂಟೈನ್ ಮೇಲೆ ಜೈಲರ್ ಮಗಳೊಬ್ಬಳಿಗೆ ಪ್ರೇಮಾಂಕುರವಾಯಿತು. ಆದರೆ ಸೆರೆವಾಸದಲ್ಲಿದ್ದ ವ್ಯಾಲೆಂಟೈನ್​ ತನ್ನ ಸಂಗಾತಿಯೊಂದಿಗೆ ಕಾಲ ಕಳೆಯಲಾಗುವುದಿಲ್ಲ. ಜೈಲ್ ಅಧಿಕಾರಿ ಮಗಳು ವ್ಯಾಲೆಂಟೈನ್​ಗಾಗಿ ಆಗಾಗೆ ಸೆರೆಮನೆಗೆ ಭೇಟಿ ಕೊಡುತ್ತಿದ್ದರು. ಅದೊಂದು ದಿನ ತನ್ನ ಪ್ರಿಯತಮೆ ವ್ಯಾಲೆಂಟೈನ್​ ಪತ್ರವನ್ನು ಬರೆದು ಇಹಲೋಕ ತ್ಯಜಿಸುತ್ತಾರೆ. ಆ ಪತ್ರದಲ್ಲಿ ಇಂತಿ ನಿಮ್ಮ ವ್ಯಾಲೆಂಟೈನ್ ಎಂದು ಸಹಿ ಮಾಡಲಾಗಿತ್ತು. ಹಲವರ ಪ್ರೀತಿಗಾಗಿ ಜೀವನವನ್ನೇ ಮುಡಿಪಾಗಿಟ್ಟ ವ್ಯಾಲೆಂಟೈನ್​ ಅವರ ಜ್ಞಾಪಕಾರ್ಥವಾಗಿ ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆಯನ್ನಾಗಿಸಲು ಅಂದಿನ ರೋಮ್​ ಫಾದರ್​ಗಳು ತೀರ್ಮಾನಿಸಿದರು. ಅದರಂತೆ ಇಂದು ವಿಶ್ವದೆಲ್ಲೆಡೆ ಪ್ರೇಮಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.

Tags:

error: Content is protected !!