ಬೈಕ್‍ಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಏಳು ವರ್ಷದ ಮಗಳು ಸಾವನ್ನಪ್ಪಿ, ತಂದೆಗೆ ಗಂಭೀರ ಗಾಯವಾಗಿರುವ ಘಟನೆ ಚಿಕ್ಕೋಡಿ ತಾಲೂಕಿನ ನವನ್ಯಾಳ ಕ್ರಾಸ್‍ನಲ್ಲಿ ನಡೆದಿದೆ.

7 ವರ್ಷದ ಅಂಜಲಿ ಸುನೀಲ್ ತೋಡ್ಕರ್ ಮೃತ ಮಗು, ಮೃತ ಮಗುವಿನ ತಂದೆ ಸುನೀಲ್ ತೋಡ್ಕರ್ ಗಂಭೀರವಾಗಿ ಗಾಯವಾಗಿದ್ದು, ಬೆಳಗಾವಿಯ ಕೆಎಲ್‍ಇ ಆಸ್ಪತ್ರೆಗೆ ರವಾನಿಸಲಾಗಿದೆ. ಇವರು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ರಾಧಾನಗರಿ ತಾಲೂಕಿನ ರಾಶಿವಾಡಿ ಬುದ್ರುಕ್‍ನವರು ಎಂದು ಗುರುತಿಸಲಾಗಿದೆ.
ತಮ್ಮ ಊರಿನಿಂದ ಚಿಕ್ಕೋಡಿಗೆ ಬೈಕ್‍ನಲ್ಲಿ ಆಗಮಿಸುತ್ತಿದ್ದ ವೇಳೆ ವೇಳೆ ನವನ್ಯಾಳ ಕ್ರಾಸ್ ಬಳಿ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಖಡಕಲಾಟ್ ಠಾಣೆ ಪಿಎಸ್‍ಐ ಲಕ್ಷ್ಮಣ ಆರಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಖಡಕಲಾಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.