ರಾಜ್ಯದಲ್ಲಿ ಹಿಜಾಬ್ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದೇ ವೇಳೆ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಈ ಬಗ್ಗೆ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ನನ್ನ ಹಿಜಾಬ್ ಅನ್ನು ಕಿತ್ತುಕೊಂಡರೆ; ನಾನು ಹಿಜಾಬ್ ಪರವಾಗಿ ಇದ್ದೇನೆ, ನನ್ನ ಮೇಲೆ ಬಲವಾಂತವಾಗಿ ಹಿಜಾಬ್ ಹೇರಿದರೆ; ನಾನು ಹಿಜಾಬ್ ವಿರುದ್ಧ. ಭಾರತದ ಮಗಳು ಎಂದು ಅಂಜಲಿ ನಿಂಬಾಳ್ಕರ್ ಟ್ವೀಟ್ ಮಾಡಿದ್ದಾರೆ. ಇನ್ನು ಟ್ವೀಟ್ನಲ್ಲಿ ವಿವಿಧ ಧರ್ಮಗಳ ಮಹಿಳೆಯರು ತಲೆ ಮೇಲೆ ಬಟ್ಟೆ ಹಾಕಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
