ನದಾಫ್ ಮತ್ತು ಪಿಂಜಾರ ಸಮಾಜದ ಅಭಿವೃದ್ಧಿಗಾಗಿ ನಿಗಮ ಮಂಡಳಿ ಸ್ಥಾಪಿಸಬೇಕೆಂದು ಆಗ್ರಹಿಸಿ ರಾಜ್ಯ ನದಾಫ್, ಪಿಂಜಾರ ಸಂಘದ ಹುಕ್ಕೇರಿ ತಾಲೂಕ ಘಟಕದ ಪದಾಧಿಕಾರಿಗಳು , ಅದ್ಯಕ್ಷ ಮುಸಾ ನದಾಫ್ ನೇತೃತ್ವದಲ್ಲಿ ತಹಸಿಲ್ದಾರ ಡಾ, ಡಿ ಎಚ್ ಹೂಗಾರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಸಂಘದ ಉಪಾದ್ಯಕ್ಷ ,ನ್ಯಾಯವಾದಿ ಶೌಕತ್ ನದಾಫ್ ರಾಜ್ಯದಲ್ಲಿ ವಾಸಿಸುವ ನದಾಫ್ ,ಪಿಂಜಾರ ಜನಾಂಗವು ಸುಮಾರು 25 ರಿಂದ 30 ಲಕ್ಷ ಜನಸಂಖ್ಯೆ ಹೊಂದಿದೆ,ಆರ್ಥಿಕವಾಗಿ ,ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಜನಾಂಗವಾಗಿದೆ ಕಾರಣ ಸರ್ಕಾರ ಪ್ರತ್ಯೇಕ ನಿಗಮ ರಚಿಸಿ ನಮಗೆ ಹೆಚ್ಚಿನ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಬೇಕಾಗಿದೆ ಎಂದರು ,

ಈ ಸಂದರ್ಭದಲ್ಲಿ ಹನ್ನೋಂದು ಜಮಾತ ಉಪಾಧ್ಯಕ್ಷ ಸಲಿಂ ನದಾಫ್, ಇಮಿತ್ಯಾಜ ನದಾಪ್, ಗೌಸ ನದಾಫ್, ಮೀರಾಸಾಬ ನದಾಫ್, ಅಬ್ದುಲ್ ರಜಾಕ್, ರಾಜು ನದಾಫ್, ನಿಸ್ಸಾರ ನದಾಫ್, ಮೀರಾಸಾಬ್ ನದಾಫ್, ಅಜೀಜ ನದಾಫ್, ನಾಶೀರಭಾಯಿ ನದಾಫ್, ಇರ್ಫಾನ್ ನದಾಫ್, ಮಹಮ್ಮದಗೌಸ ನದಾಫ್ ಮೊದಲಾದವರು ಉಪಸ್ಥಿತರಿದ್ದರು.