Belagavi

ನಕಲಿ ಲೋನ್ ಆಪ್‍ಗಳ ಬಗ್ಗೆ ಹುಷಾರ್: ಸಿಇಎನ್ ಪೊಲೀಸರ ಎಚ್ಚರಿಕೆ

Share

ಸೈಬರ್ ವಂಚಕರು ಇತ್ತಿಚೆಗೆ ಪ್ಲೇ ಸ್ಟೋರ್‌ನಲ್ಲಿ ನಕಲಿ ಲೋನ್ ಆಪ್‍ಗಳಾದ ಕ್ವೀಕ್ ಲೋನ್, ಸ್ಮಾರ್ಟ ಕಾಯಿನ್, ಕ್ಯಾಶಬೀನ್, ಎಂ ಪಾಕೇಟ್ ಮುಂತಾದ ನಕಲಿ ಆಪ್‍ಗಳನ್ನು ಸೃಷ್ಟಿಸಿ ಹಣ ದೋಚುತ್ತಿರುವ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಬೆಳಗಾವಿಯ ಸಿಇಎನ್ ಅಪರಾಧ ಠಾಣೆ ಪೊಲೀಸರು ತಿಳಿಸಿದ್ದಾರೆ.

ಕೇವಲ ಆಧಾರ್ ಕಾರ್ಡ ಮತ್ತು ಪ್ಯಾನ್ ಕಾರ್ಡಗಳ ಮೇಲೆ ಲೋನ್ ನೀಡುವುದಾಗಿ ಹೇಳಿ ಆಪ್ ಡೌನ್‍ಲೋಡ್ ಮಾಡುವ ಕಾಲಕ್ಕೆ ಗ್ರಾಹಕರ ಮೊಬೈಲ್‍ನ ಎಲ್ಲ ಮಾಹಿತಿಗಳನ್ನು ಪಡೆದುಕೊಂಡು ಗ್ರಾಹಕರಿಗೆ ಲೋನ್ ನೀಡಿ, ಮರಳಿ ಹಣ ಕಟ್ಟಿಸಿಕೊಂಡ ನಂತರವೂ ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟು, ಅವರ ಜೊತೆಗೆ ಹಾಗೂ ಇತರೆ ಮಾಹಿತಿಗಳನ್ನು ಎಡಿಟ್ ಮಾಡಿ, ಗ್ರಾಹಕರ ಎಲ್ಲ ಕಾಂಟ್ಯಾಕ್ಟಗಳ ವಾಟ್ಸಪ್‍ಗಳಿಗೆ ಮೆಸೇಜ್ ಕಳುಹಿಸಿ, ಹೆದರಿಸಿ ಮಾನಸಿಕ ಕಿರುಕುಳ ನೀಡಿ, ಅವರಿಂದ ಹೆಚ್ಚಿನ ಹಣ ಕಟ್ಟಿಸಿಕೊಂಡು ಮೋಸ ಮಾಡುವ ಜಾಲ ಸಕ್ರಿಯವಾಗಿದೆ. ಆದ್ದರಿಂದ ಸಾರ್ವಜನಿಕರು ಇಂತಹ ನಕಲಿ ಲೋನ್ ಆಪ್‍ಗಳ ಬಗ್ಗೆ ಎಚ್ಚರದಿಂದ ಇರಲು ಸೂಚಿಸಲಾಗಿದೆ. ಒಂದು ವೇಳೆ ಸಾರ್ವಜನಿಕರು ಇಂತಹ ಸೈಬರ್ ವಂಚನೆಗೆ ಒಳಗಾದಲ್ಲಿ ತಮ್ಮ ಬ್ಯಾಂಕ್ ಖಾತೆಯ ವಿವರ ಮತ್ತು ವಯಕ್ತಿಕ ವಿವರಗಳೊಂದಿಗೆ ತಕ್ಷಣ ಬೆಳಗಾವಿ ನಗರ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ನಂಬರ್ 08312950320ಗೆ ಸಂಪರ್ಕಿಸಬೇಕು ಎಂದು ಸಿಇಎನ್ ಪೊಲೀಸರು ತಿಳಿಸಿದ್ದಾರೆ.

Tags:

error: Content is protected !!