Belagavi

ನಕಲಿ ಆರ್‌ಟಿಪಿಸಿಆರ್ ವರದಿ ನೀಡುತ್ತಿದ್ದ ಟ್ರಾವೆಲಿಂಗ್ ಎಜೆನ್ಸಿಯ ಮೂವರು ಅರೆಸ್ಟ್..!

Share

ಆರ್.ಟಿಪಿ.ಸಿಆರ್ ವರದಿ ಇಲ್ಲದೇ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಹಾಗೂ ನಕಲಿ ಆರ್‌ಟಿಪಿಸಿಆರ್ ವರದಿಯನ್ನು ನೀಡಿ ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಕುರಿತಂತೆ ಆರೋಪಿಗಳ ಮೇಲೆ ನಿಪ್ಪಾಣಿ ಪೊಲೀಸರು ಕೇಸನ್ನು ದಾಖಲಿಸಿದ್ದಾರೆ.
ಕೊಲ್ಹಾಪುರದಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಶೆಫಾಲಿ ನಕಲಿ ಆರ್‌ಟಿಪಿಸಿಆರ್ ವರದಿ ನೀಡುತ್ತಿದ್ದ ಟ್ರಾವೆಲಿಂಗ್ ಎಜೆನ್ಸಿಯ ಮೂವರು ಅರೆಸ್ಟ್..!

ಎಜೆನ್ಸಿಯ ಬಸ್‌ಗಳಲ್ಲಿ ಪ್ರಯಾಣಿಕರಿಗೆ ನಕಲಿ ಆರ್‌ಟಿಪಿಸಿಆರ್ ವರದಿಯನ್ನು ನೀಡುತ್ತಿದ್ದ ಟ್ರಾವಲಿಂಗ್ ಏಜೆನ್ಸಿಯ ಮೂವರನ್ನು ನಿಪ್ಪಾಣಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತಂತೆ ಖುದ್ದು ನಿಪ್ಪಾಣಿ ಪೊಲೀಸರೇ ಕೊಲ್ಹಾಪುರದಿಂದ ಬೆಂಗಳೂರಿಗೆ ಹೋಗಲು ಟ್ರಾವಲಿಂಗ್ ಏಜೆನ್ಸಿಯವರನ್ನು ಕೇಳಿದಾಗ ನಕಲಿ ಆರ್‌ಟಿಪಿಸಿಆರ್ ವರಿಯನ್ನು ನೀಡಿದ್ದಾರೆ. ಇನ್ನು ಈ ಕೆಲಸಕ್ಕೆ ಟಿಕೆಟ್ ಜೊತೆಗೆ ಹೆಚ್ಚಿನ ಹಣವನ್ನೂ ಪಡೆದಿದ್ದಾರೆ. ಇನ್ನು ಕುಗನೊಳ್ಳಿ ಚೆಕ್‌ಪೋಸ್ಟ್ ಬರುತ್ತಿದ್ದಂತೆ ಕಾರ್ಯಪ್ರವೃತ್ತರಾದ ನಿಪ್ಪಾಣಿ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದದ್ದಾರೆ. ಇನ್ನು ಬಸ್‌ನ್ನು ಕೂಡ ಸೀಸ್ ಮಾಡಿ, ೨೬೯, ೨೭೦, ೨೭೧, ೪೨೦, ಆರ್‌ಡಬ್ಲು ೩೪ಐಪಿಸಿ, ಕೆಇಡಿಎ ಅಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಈ ಪ್ರಕರಣಗಳನ್ನು ಕುರಿತಂತೆ ಒಂದು ವಾರದಲ್ಲಿ ೪ಕೇಸ್‌ಗಳನ್ನು ದಾಖಲಿಸಲಾಗಿದೆ. ಇನ್ನು ಕೆಲ ಬಸ್‌ಗಳು ಚೆಕ್‌ಪೊಸ್ಟ್ಗಳನ್ನು ತಪ್ಪಿಸಲು ಹಳ್ಳಿ ಮಾರ್ಗಗಳಾಗಿ ಬರುತ್ತಿದ್ದರು. ಇನ್ನು ಟ್ರಾö್ಯವಲಿಂಗ್ ಏಜೆನ್ಸಿಗಳು ಪ್ರಯಣಿಕರಿಂದ ಹೆಚ್ಚಿಗೆ ಹಣವನ್ನು ಪಡೆದು ಆರ್‌ಟಿಸಿಪಿಸಿಆರ್ ವರದಿ ಇಲ್ಲದೇ ಪ್ರಯಾಣ ಮಾಡಲು ಕರೆದೊಯ್ಯುತ್ತಿದ್ದರು. ಈ ಕುರಿತಂತೆ ನಿಪ್ಪಾಣಿ ಪೊಲೀಸರು ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಇನ್ನು ಟ್ರಾö್ಯವಲಿಂಗ್ ಏಜೆನ್ಸಿಯಲ್ಲಿ ನಡೆದ ಈ ಕಳ್ಳಾವನ್ನು ಪ್ರಯಣಿಕರೇ ವಿಡಿಯೋ ಮಾಡಿದಾರೆ. ಈ ಕುರಿತಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Tags:

error: Content is protected !!