ಹೌದು ಪ್ರತಿ ವರ್ಷ ಮಾಘವಾರಿ ನಿಮಿತ್ಯ ಪಂಢರಪುರ ವಿಠ್ಠಲನ ದರ್ಶನಕ್ಕೆ ಹೋಗಿ ದರ್ಶನ್ ಪಡೆಯುವ ಸಂಪ್ರದಾಯ ಅದರಂತೆ ಸಮಸ್ತ ನಂದಗಡದ ವಾರಕರಿ ಮಂಡಳಿಯು ಗ್ರಾಮದ ಲಕ್ಷ್ಮೀ ಮಂದಿರದ ಮುಂದೆ ಪೂಜೆ ಸಲ್ಲಿಸಿದರು.ನಂದಗಡ ಗ್ರಾಮಸ್ಥರಿಂದ ಅವರನ್ನು ಬೆಳ್ಕೋಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ದೇವತಾ ಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದ ಅಧ್ಯಕ್ಷ ಪಿ.ಕೆ.ಪಾಟೀಲರು ಮಾತನಾಡಿ ನಮ್ಮ ನಂದಗಡದ ವಾರಕರಿ ಮಂಡಳಿಯು ಪಂಢರಪುರ ವಿಠ್ಠಲನ ದರ್ಶನಕ್ಕೆ ಹೋಗುತ್ತಿದ್ದು, ಅವರನ್ನು ಪೂಜೆ ಸಲ್ಲಿಸಿ ಬೆಳ್ಕೋಡಲಾಯಿತು ಗ್ರಾಮಸ್ಥರ ಆಯೂಷ, ಆರೋಗ್ಯ ಬಗ್ಗೆ ಬೇಡಿಕೊಳ್ಳಲು ಹೇಳಿ ಹಾರೈಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮನ್ಸೂರ್ ತಹಶೀಲ್ದಾರ್, ಸದಸ್ಯ ನಾಗೇಂದ್ರ ಪಾಟೀಲ್, ಸಂದೀಪ್ ಪಾರೀಶ್ವಾಡಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು ವಾರಕರಿ ಮಂಡಳಿಗೆ ಬೇಳ್ಕೋಟರು