Chikkodi

ತೆರೆದಬಾವಿ ನಿರ್ಮಾಣಕ್ಕೆ 45 ಲಕ್ಷ ರೂ. ಮಂಜೂರು :ಶಾಸಕ ದುರ್ಯೋಧನ ಐಹೊಳೆ

Share

ಎಸ್‌ಪಿಪಿಪಿಎಸ್‌ಟಿ ಯೋಜನೆಯಡಿ ಜೈನಾಪುರ ಹಾಗೂ ತೋರಣಹಳ್ಳಿ ಗ್ರಾಮಗಳಲ್ಲಿ ಎರಡು ತೆರೆದ ಬಾವಿಗಳ ನಿರ್ಮಾಣಕ್ಕೆ 45 ಲಕ್ಷ ರೂ. ಅನುದಾನ ಮಂಜೂರಾಗಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದ್ದಾರೆ.

ಚಿಕ್ಕೋಡಿ‌ ತಾಲೂಕಿನ ಜೈನಾಪುರ ಗ್ರಾಮದ ಶಿವರಾಮ ಕಾಂಬಳೆ ಹಾಗೂ ಇತರ ಜನರ 12 ಎಕರೆ ಭೂಮಿಗೆ ನೀರು ಒದಗಿಸುವ ಸಲುವಾಗಿ ಸರ್ಕಾರದಿಂದ ಮಂಜೂರಾದ ಅನುದಾನದಲ್ಲಿ ತೆರೆದ ಬಾವಿಯ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಹೆಸ್ಕಾಂ ನಿರ್ದೇಶಕ ಮಹೇಶ ಭಾತೆ ಮಾತನಾಡಿ, ಎಸ್‌ಸಿ, ಎಸ್‌ಟಿ ಸಮುದಾಯದ ರೈತರು ಸೌಲಭ್ಯಗಳ ಸದುಪಯೋಗ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.ಗ್ರಾಪಂ ಅಧ್ಯಕ್ಷ ಎಸ್‌.ಎಸ್‌. ಘರಗುಡೆ ಮಾತನಾಡಿ, ಪ.ಜಾತಿ, ಪಂಗಡದ ಜನರು ಇಂದಿಗೂ ಬಡತನದಲ್ಲಿ ಜೀವನ ನಡೆಸುತ್ತಿದ್ದಾರೆ. ಅಲ್ಪಸ್ವಲ್ಪ ಜಮೀನು ಹೊಂದಿರುವುದರಿಂದ ನೀರಾವರಿ ಕೈಗೊಳ್ಳಲು ಸಮಸ್ಯೆಯಾಗುತ್ತಿತ್ತು. ಈ ಸಮಸ್ಯೆ ನಿವಾರಣೆಗೆ ಶಾಸಕರು ಕ್ರಮ ಕೈಗೊಂಡಿದ್ದಾರೆ ಎಂದರು.ಈ ಸಂಧರ್ಭದಲ್ಲಿ ವಿಜಯ ಕೋಟೆವಾಲೆ, ರವಿ ಹಿರೇಕೋಡಿ, ರಾಜು ಕೆಳಗಿನಮನಿ, ಮಾರುತಿ ಪರಬುಡೆ, ಕಲಗೌಡ, ಕೆಳಗಿನಮನಿ, ಭೀಮು ತಳವಾರ, ಬಾಲಚಂದ್ರ ಸಣ್ಣಲಚ್ಚಪ್ಪಗೋಳ, ಬಸವರಾಜ ಮಾಳಗೆ, ಸುನೀಲ ಖಾಡ ಇದ್ದರು.

Tags:

error: Content is protected !!