Belagavi

ತುಳಜಾಭವಾನಿ ಕಾಲೋನಿಯಲ್ಲಿ ಸಂತ ಸೇವಾಲಾಲ್‍ಜಯಂತಿ

Share

ಬೆಳಗಾವಿ ನಗರದ ತುಳಜಾಭವಾನಿ ಕಾಲೋನಿ ಜ್ಯೋತಿ ನಗರದಲ್ಲಿ ಪ್ರತಿವರ್ಷದಂತೆ ಈ ವರ್ಷವೂಕೂಡ ಸಂತ ಸೇವಾಲಾಲ್‍ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಹಾದೇವರಾಥೋಡ್ ಲಕ್ಷ್ಮಿರಾಠೋಡ್ ಹಾಗೂ ಕಾಲೋನಿಯ ಗುರುಹಿರಿಯರು ಒಂದುಗೂಡಿ ಸೇವಾಲಾಲ್ ಭಾವಚಿತ್ರಕ್ಕೆ ಹೂವುಹಣ್ಣು ಆರತಿ ಬೆಳಗಿ ಕಾಯಿ ಒಡೆದು ಪೂಜಿಸಲಾಯಿತು.ಸಾಯಂಕಾಲ ಮಕ್ಕಳಿಗೋಸ್ಕರ ರಸಮಂಜರಿಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು ಜೊತೆಗೆ ಮಹಾ ಪ್ರಸಾದವುಏರ್ಪಡಿಸಲಾಗಿತ್ತು.

ಕೃಷ್ಣ ಪಮಾರ್‍ಅವರು ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂಕೂಡ ಸೇವಾ ಲಾಲ ಜಯಂತಿಯನ್ನುಆಚರಿಸಲಾಗುತ್ತದೆ ಮತ್ತೆ ಸಂಜೆ ಮಕ್ಕಳಿಗೆ ರಸ ಮಂಜರಿಕಾರ್ಯಕ್ರಮ ಮತ್ತುಎಲ್ಲಾ ಭಕ್ತಾಧಿಗಳಿಗೆ ಮಹಾಪ್ರಸಾದವನ್ನುಏರ್ಪಡಿಸಲಾಗಿದ್ದು, ಇದು ಬಹಳ ಖುಷಿಯ ವಿಚಾರ. ಮುಂದಿನ ವರ್ಷಇನ್ನೂ ವಿಭೃಂಣೆಯಿಂದಆಚರಿಸಲು ಸಂತ ಸೇವಾಲಾಲ ಆರ್ಶೀವಧಿಸಲಿ ಎಂದರು,

ಈ ಸಂದರ್ಭದಲ್ಲಿಎಲ್ಲಕಾಲೋನಿಯ ನಿವಾಸಿಗಳೊಂದಿಗೆ ಶೇಖರ್‍ರಾಥೋಡ್ ಸುರೇಶ ಪುಂಡಲಿಕ್ ಸಂತೋಷರಾಥೋಡಚವಾನ್. ತಾವರೆಪರಾಥೋಡ್ ಹನುಮಂತ,ರವಿ ಚವನ್, ಶ್ರೀಕಾಂತ ರಾಥೋಡ್, ವಿಠ್ಠಲ್ ಗಣಪತಿ ಪಾಂಡಪ್ಪ ಪಮ್ಮರ್ ಮತ್ತಿತರರು ಉಪಸ್ಥಿತರಿದ್ದರು.

 

Tags:

error: Content is protected !!